ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಅಕ್ಟೋಬರ್ 15, 2017

ರಾಮಚಂದ್ರ ಚರಿತ ಪುರಾಣಂ ಅಥವಾ ಪಂಪರಾಮಾಯಣಂ

ನಾಗಚಂದ್ರನ ರಾಮಚಂದ್ಚ ಚರಿತ ಪುರಾಣಂ ಅಥವಾ ಪಂಪರಾಮಾಯಣಂ

ಸೀತಾಹರಣಂ:

ವಚನ: ಆ ಸಮಯದೊಳ್ ದಶಾಸ್ಯನೊಂದು ತಣ್ಬುಳಿಲ ತಾಣದೊಳ್ ಬರಸಿಡಿಲ
ಬಳಿವಿಡಿದು ಪೊಳೆವ ಕುಡುಮಿಂಚಿನಂತೆ ಬಲಭದ್ರನ ಕೆಲದೊಳಿರ್ದ ಸೀತೆಯಂ ಕಂಡು

ಬಲೆ ದೃಷ್ಟಿಗೆ ವಜ್ರದ ಸಂ
ಕಲೆ ಹೃದಯಕ್ಕೆನಿಪ ರೂಪವತಿ ಜಾನಕಿ ಕ
ಣ್ಬೊಲದೊಳಿರೆ ಪದ್ಮಪತ್ರದ
ಜಲಬಿಂದುವಿನಂತೆ ಚಲಿತಮಾದುದು ಚಿತ್ತಂ॥೪೩॥

ತಳತಳಿಸಿ ಪೊಳೆಯೆ ಸೀತೆಯ
ಚಳನಯನಂ ಖಚರ ಚಕ್ರವರ್ತಿಯ ಚಿತ್ತಂ
ಕೊಳದೊಳಗೆಳೆವಾಳೆ ತೆರಂ
ಬೊಳೆವಂತೆ ಕಲಂಕಿ ಕಡಿದತ್ತಾ ಕ್ಷಣದೊಳ್ ॥೪೪॥

ಹಾರಮರೀಚಿಮಂಜರಿ ಸುಧಾರಸಧಾರೆ ಸುಧಾಂಶು ಲೇಖೆ ಕ
ರ್ಪೂರ ಶಲಾಕೆ ನೇತ್ರಸುಖದಾಯಕಮೀ ದೊರೆತಲ್ಲಮೀಕೆ ಶೃಂ
ಗಾರ ಸಮುದ್ರಮಂ ಕಡೆಯೆ ಹೃದ್ಭವನುದ್ಭವೆಯಾದಳೆಂದು ಕ
ಣ್ಣಾರೆ ದಶಾಸ್ಯನೀಕ್ಷಿಸಿದನೀಕ್ಷಿಸಿ ಕಣ್ಣರಿದಾರೆ ಮನ್ಮಥಂ ॥೪೫॥

,ಪಲರುಂ ವಿದ್ಯಾಧರ ಸ್ತ್ರೀಯರುಮಮರಿಯರುಂ ಮಾನವಸ್ತ್ರೀಯರುಂ ತ
ಮ್ಮೊಲವಿಂ ಮೇಲ್ವಾಯ್ದೊಡಂ ಮುನ್ ಬಗೆಯದ ಬಗೆಯೇನಾದುದೆಂದ್ದುತಂ ಮೂ
ದಲಿಸುತ್ತುಂ ರೂಪಿನೊಳ್ ಮಚ್ಚರಿಸುವನೆನಗೆಂಬನಂಬಟ್ಟುವನ್ನಂ
ಪಲಕಾಲಕ್ಕೇಹಸುವೆತ್ತಂ ದಶಮುಖನೆನುತುಂ ಮನ್ಮಥಂ ಮಾಣದೆಚ್ಚಂ॥೪೬॥

ನಡೆ ನಡುಕೋಲ್ವರಂ ದಶಮುಖಂ ಮನಮಂ ಸುಮನಶ್ಶಿಲೀಮುಖಂ
ನಡೆಗಿಡೆ ಕೀರ್ತಿ ಬಾರ್ತೆಗಿಡೆ ಲಕ್ಷ್ಮಿ ಮೊದಲ್ಗಿಡೆ ಮಾನಸಿಕ್ಕೆ ನೇ
ರ್ಪಡುಗಿಡೆ ಸತ್ಯಶೌಚಗುಣಸಂಪದಮೇಳಿದನಾದನೆನ್ನರುಂ
ಕಿಡಿ ಮಸಿಯಾದವೊಲ್ ವಿಷಯಲೋಭದಿನೇಳಿದರಾಗದಿರ್ಪರೇ ॥೪೭॥

ವಿಹಿತಾಚಾರಮನನ್ವಯಾಗತ ಗುಣಪ್ರಖ್ಯಾತಿಯಂ ದುಷ್ಟನಿ
ಗ್ರಹ ಶಿಷ್ಟಪ್ರತಿಪಾಲನಕ್ಷಮತೆಯಂ ಕಯ್ಗಾಯದನ್ಯಾಂಗನಾ
ಸ್ಪೃಹಯಂ ತಾಳ್ದಿದನಲ್ತೆ ಕಾಲವಶದಿಂ ಲಂಕೇಶ್ವರಂ ವಿಸ್ಮಯಾ
ವಹಲ್ತಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ ॥೪೮॥

ಅವಿವೇಕಿ ದಶಮುಖಂ ದೃ
ಷ್ಟಿ ವಿಷಾಹಿಯ ಪೆಡೆಯ ಮಣಿಶಲಾಕೆಗೆ ಕಯ್ ನೀ
ಡುವ ಗಾಂಪನಂತೆ ರಘುವೀ
ರ ವಧೂ ಜನಕಜೆಗೆ ಮನದೊಳಳಿಪಂ ತಂದಂ ॥೪೯॥

ಪರವಧುಗಾಸೆಗೆಯ್ವಧಿಕ ಪಾತಕಮೊಂದು ಲಘುವೀರಪ್ರವೀರನೊಳ್
ಧುರದೊಳಿದಿರ್ಚದೋಸರಿಸಿ ವಂಚಿಸಿ ಸೀತೆಯನುಯ್ವ ಭೀತಿಯಿಂ
ದೆರಡರೊಳಂ ಜಸಂ ಮಸುಳೆ ತನ್ನವಲೋಕಿನಿಯಂ ದಶಾನನಂ
ಸ್ಮರಿಸಿದನಾತ್ಮ ಸತ್ವಗುಣಹಾನಿಯೆ ಸೂಚಿಸದೆ ವಿನಿಶಮಂ ॥೫೦॥

ವಚನ: ಅಂತು ನೆನೆಯಲೊಡಮವಲೋಕಿನೀವಿದ್ಯೆ ಬಂದು ಬೆಸನಾವುದೆನೆ ದಶಮುಖ
ನಿವರಿರೆಂಬುದುಮಯೌಧ್ಯಾಸಿಂಹಾಸನಕ್ಕಧಿಪತಿಯುಮಿಕ್ಷ್ವಾಕುವಂಶಸಂಭವನುಮಪ್ಪನರಣ್ರ
ತನೂಭವಂ ದಶರದನರನಾಥಂ ಥದಪತ್ಯರಿವರ್ ಈ ಕಾಲದ ಬಲದೇವ ವಾಸುದೇವರ್
ದೇವತಾಧಿಷ್ಟಿತಂಗಳಪ್ಪ ವಜ್ರಾವರ್ತ ಸಾಗರಾವರ್ತ ಚಾಪರತ್ನಂಗಳನಪ್ರಯತ್ನದಿಂ ಪಡೆದ ರಾಮಲಕ್ಷ್ಮಣರೆಂಬರ್ ಮಹಾಬಲ ಪರಾಕ್ರಮರೀಕೆ ರಾಮನ ಮಹಾದೇವಿ ಮಿಥಿಲಾ
ಪುರವರೇಶ್ವರನಪ್ಪ ಹರಿವಂಶದ ಜನಕನ ತನೂಭವೆ ರಥನೂಪುರ ಚಕ್ರವಾಳ ಪುರಮನಾಳ್ವ ಚಂಡಬಲನಪ್ಪ ಪ್ರಭಾಮಂಡಲನ ತಂಗೆ ಸೀತಾದೇವಿಯೆಂಬುದುಮೀಕೆರನೀತನಿಂದಗಲ್ಚುವು
ಪಾಯಮಾವುದೆನೆ ದೇವತೆ ಚಕಿತ ಚಿತ್ತೆಯಾಗಿ

ಆರಯ್ಯೆ ವಿರೋಧಂ ಸಾ
ಧಾರಣ ಪುರುಷರೊಳಮುಚಿತಮಲ್ತಧಿಕಬಲರ್
ಕಾರಣಪುರುಷರಿವರ್ ನಿ
ಷ್ಕಾರಣಮಿವರೊಳ್ ವಿರೋಧಮಂ ಮಾಡುವುದೇ॥೫೧॥

ಕಾವ ಬೆಸಂ ನಿನ್ನದು ಸಕ
ಲಾವನಿಯನಧರ್ಮನಿರತರಂ ನಿಯಮಿಸಿ ನೀ
ನೀ ವಿಷಯಕ್ಕೆರಗುವುದುಂ
ಕಾವರೆ ಕಣೆಗೊಂಡರೆಂಬ ನುಡಿಗೆಡೆಯಕ್ಕುಂ ॥೫೨॥

ಅನ್ನೆಯದಿಂ ನಡೆವವರಂ
ನೀನ್ ನಿಯಮಿಸುವೈ ದಶಾಸ್ಯ ಪೆರನಾವಂ ನಿ
ನ್ನನ್ ನಿಯಮಿಸುವಂ ಮುನ್ನೀರ್
ಬೆನ್ನೀರೆನೆ ಬೆರಸಲಣ್ಣ ತಣ್ಣೀರೊಳವೇ ॥೫೩॥

ಪದಿನಾಲ್ಸಾಸಿರ ಮುಖ್ಯನಾಯಕರಸಂಖ್ಯಾತಂ ಬಲಂ ಖೇದದಿಂ
ದಿದಿರಾದರ್ ಖರದೂಷಣರ್ ಬಗೆದನಿಲ್ಲತ್ತಲ್ ಭರಂಗೆಯ್ದು ಕಾ
ದಿದಪಂ ಲಕ್ಷ್ಮಣನಿತ್ತಲೀಕೆಯೊಡನೀತಂ ವೀತಶಂಕಂ ವಿನೋ
ದದೊಳಿರ್ದಂ ಲಘುವೀರನಿನ್ನರಿವರೊಳ್ ವಿದ್ವೇಷಣಂ ದೂಷಣಂ ॥೫೪॥

ಮದನಯಶಃಪಟಹ .ಧ್ವನಿ
ಪುದಿಯೆ ವಿಯಚ್ಚರನ ಕರ್ಣಮಂ ಹೃದಯಕ್ಕೆ
ಯ್ದಿದುದಿಲ್ಲ ದಿವಾಯವಚನಂ
ಬಿದಿಯಂ ಮೀರುಗುಮೆ ಪೆರರ ಪೇಳ್ದುಪದೇಶಂ ॥೫೫॥

ಆನೊಂದಂ ಬೆಸಗೋಂಡೊಡೆ
ನೀನೊಂದನಿದೇಕೆ ಪೇಳ್ದೆ ಪೇಳ್ದುದನೇಗೊಳ್
ಏನೆಂದು ಕೀರಿ ನುಡಿವಯ್
ಮಾನವರಾಂತಪರೆ ಮರುಳೆ ಲಂಕಾಪತಿಯಂ ॥೫೬॥

ವಚನ: ಎಂಬುದುಂ ವಿದ್ಯಿದೇವತೆ ಕನಲ್ದು

ಜನಕಜೆಯನುಯ್ಯೆ ದಶರಥ
ತನೂಜರಿಂ ಮರಣಮಾಗಲೆಂದಿರ್ದಪುದೀ
ತನ ಕಯ್ಯಳವಲ್ತು ಪುರಾ
ತನ ಕರ್ಮಾಯತಾತಮಲ್ತೆ ದೇಹಿಗಳೆಸಕಂ ॥೫೭॥

ಗೆಲಲೆನಗೆ ರಿಪುಬಲಂ ಬ
ಲ್ವಲಮಾದಡೆ ಸಿಂಹನಾದಮಂ ಮಾಳ್ಪೆಂ ಬೆ
ಬಲಮಾಗಿ ಬರ್ಪುದೆಂದೀ
ಬಲದೇವಂಗರಿಪಿ ವಾಸುದೇವಂ ಪೋದಂ ॥೫೮॥

ವಚನ: ಎಂದು ರಾವಣಂಗೆ ಪೇಳ್ವುದುಮವಂ ರಣಕ್ಷೋಣಿಗೆ ಪೋಗಿ ಲಕ್ಷ್ಮಣಂ
ಕೇಳದಂತು ವೈಕುರ್ವಣ ಶಕ್ತಿಯಿಂ ಸಿಂಸನಾದಂಗೆಯ್ಯೆನೆ ವಿದ್ಯಿದೇವತೆ ಪೋಗಿ
ಅಂತೆಗೆಯ್ವುದುಮಾ ಧ್ವನಿಯಂ ಕೇಳ್ದು

ಧುರದೊಳ್ ದುದುರ್ಜಯನಾರ್ಗಮೆನ್ನನುಜನೆಂಬೀ ನಿಶ್ಚಯಂಗೆಟ್ಟು ಸಿಂ
ಹರವಂದೋರಿದನಾಹವಂ ವಿಷಮಮೆಂಬೀ ವಿಸ್ಮಯಂ ಚಿತ್ತದೊಳ್
ದೊರೆಕೊಂಡತ್ತು ರಘೂದ್ವಹಂಗಮುಳಿದಂದೆಂತಕ್ಕುಮೋ ಜಾನಕೀ
ಹರಣಂ ಕರ್ಮವಿಪಾಕಮಾರ ಬಗೆಗಂ ವೈಕಲಾರಮಂ ತಾರದೇ॥೫೯॥

ಕಿಪಂ ಪೇಳ್ದು ಜಟಾಯುವ
ನೋಪಳನಿರವೇಳ್ದು ವೈರಿಬಲಮಂ ತವಿಸಲ್
ಪೋಪಂತಿರೆ ದಂಡಧರಂ
ಚಾಪಧರಂ ಬಲನವಂಧ್ಯ ಕೋಪಂ ಪೋದಂ ॥೬೦॥

ವಚನ: ಅನ್ನೆಗಮಿತ್ತಲ್

ಅಳಿಪಿ ಪರವಧುಗಧೋಗತಿ
ಗಿಳಿವುದನಭಿನಯಿಸುವಂತೆ ಸೀತೆಯ ಸಾರ
ಣ್ಗಿಳಿದಂ ನಭದಿಂ ಖಚರಂ
ಪಳಿಗಂ ಪಾಪಕ್ಕಮಂಜದವರೇಗೆಯ್ಯರ್ ॥೬೧॥

ದೋಷಿ ಪಿಡಿವಂತೆ ದಿವ್ಯದ
ಕಾ ಸಿದ ಕುಳುವಂ ಕಡಂಗಿ ಕಾಳೋರಗನಂ
ಕೂಸು ಪಿಡಿವಂತೆ ಪಿಡಿದಂ
ಸಾಸಿಗನವಿವೇಕಿ ಸೀತೆಯಂ ದಶಕಂಠಂ ॥೬೨॥

ವಚನ: ಅಂತು ಪಿಡಿದು ನಿಜವಿಮಾನದೊಳಿಟ್ಟು

ದಶಮುಖನುನ್ಮುಖನಳಿಪಿಂ
ಶಶಿಮುಖಿಯಂ ಜನಕಸುತೆಯನಾವರಿಸೆ ಚತು
ರ್ದಶಭುವನಮನಪವಾದಂ
ಶಶಿಕಲೆಯಂ ಸೈಂಹಿಕೇಯನುಯ್ವಂತುಯ್ಧಂ ॥೬೩॥

ವಛನ: ಆಗಳದಂ ಕಂಡು ಜಟಾಯು ಕೋಪಾನಲ ವಿಸ್ಫುಲಿಂಗದಂತಿರಕ್ತಂಗಳಾದ
ಕಣ್ಗಳಿಂ ನುಂಗುವಂತೆ ನೋಡಿ  

ಪತಿ ಕಾಪುವೇಳ್ದು ಪೋದಂ
ಸತಿಯಂ ಕಳ್ದುಯ್ದಪಂ ಖಳಂ ಮಾರ್ಕೊಂಡು
ದ್ಧತನಂ ಮದೀಯ ತುಂಡಾ
ಹತಿಯಿಂ ಶತಖಂಡಮಾಗೆ ಮಾಳ್ಪೆನೆನುತ್ತುಂ ॥೬೪॥

ಖರನಖರಂಗಳಿಂ ನಿಶಿಥಚಂಚುಗಳಿಂದಿರಿಯಲ್ ಕರುತ್ತು ಸಾ
ರ್ತರೆ ನಸುನಕ್ಕು ಪೊಯ್ಯೆ ಕರದಿಂ ಗಮನೋತ್ಸುಕನಿಂದ್ರವೈರಿ ತ
ನ್ನೆಲಡುಮೆರಂಕೆಗಳ್ ಮುರಿದಿಳಾತಳದೊಳ್ ಕೆಡೆದತ್ತು ವಜ್ರದಿಂ
ಸುರಪತಿ ಪೊಯ್ಯೆ ಬೆಟ್ಟು ಕೆಡೆದಂತೆ ಜಟಾಯು ನಭೋವಿಭಾಗದಿಂ ॥೬೫॥

ಮನಮೆಳದಾಗೆ ಮನ್ಯು ಮಿಗೆ ತಳ್ತೆಮೆಯಿಂ ಕರೆಗಣ್ಮಿ ಸೂಸೆ ಕ
ಣ್ಬನಿ ಗಳಕಂದಳಂ ಬಿಗಿಯೆ ಗದ್ಗದ ನಿಸ್ವನಮುಣ್ಮೆ ಹಾರವಂ
ಜನಿಯಿಸೆ ಸೀತೆ ಭೀತೆ ದೆಸೆಗೆಟ್ಟೆರ್ದೆಗೆಟ್ಟಳೆ ಪೊಣ್ಮಿದತ್ತು ಮಾ
ರ್ದನಿ ದೆಸೆಯೊಳ್ ದಿಗಂಗನೆಯರುಂ ಬಿಡದಂದೊಡನಳ್ವಮಾಳ್ಕೆಯಿಂ ॥೬೬॥

ಭೋಂಕನೆ ಕಂಡು  ಸೀತೆ ದಶಕಂದರನಂ ನೆಲೆವೆರ್ಚೆ ಶೋಕವಾ
ತಂಕಮೊಡರ್ಚೆ ಪುಷ್ಪಕವಿಮಾನದ ರತ್ನ ವಿಚಿತ್ರ ಪುತ್ರಿಕಾ
ಸಂಕುಲಮಳ್ತೊಡಳ್ತುವು ಬೇಮರ್ತೊಡೆ ಬೆಮರ್ತುವಾಗಳಾ
ಲಂಕೆಯ ಸೂಡನುನ್ನತಿಯ ಕೇಡನವಂಗೆ ನಿವೇದಿಪಂತೆವೋಲ್ ॥೬೭॥

ಬಲೆಗೊಳಗಾದ ಸೋಗೆನವಿಲಂತೆ ಭಯಾಕುಲೆ ತನ್ನ ಚಿತ್ತದೊಳ್
ನೆಲಸಿದ ರಾಮನಂ ಬಯಸಿ ನೋಡಲಪೇಕ್ಷಿಸಿ ಬಾಹ್ಯ ದರ್ಶನ
ಕಾಕಲಸಿದಳೆಂಬಿನಂ ಮುಗಿಯೆ ಕಣ್ಮಲರ್ಗಳ್ ನಸುಮುಚ್ಚೆವೋಗಿ ತ
ಣ್ಣೆಲರಲೆಪಿಂದೆ ಮೂರ್ಛೆದಿಳಿದಳ್ ಮಗುಳ್ದುಂ ಪೊರಪೊಣ್ಮೆ ಹಾರವಂ॥೬೮॥

ಕ್ರೂರಾತ್ಮಂ ವಂಚಕನವಿ
ಚಾರಿ ದುರಾಚಾರಿ ಬಗಯದುಯ್ದಪನೆನ್ನಂ
ಹಾ ರಾಮಾ ಹಾ ರಾಮಾ
ಬಾರಿಪರಾರೆಂದು ಸೀತೆ ಶೌಕಂಗೆಯ್ದಳ್ ॥೬೯॥

ತೋರಿದನಿಲ್ಲ ಸಿಂಹರವಮಂ ಗಡ ಲಕ್ಷ್ಮಣನೆನ್ನ ಚಿತ್ತದೊಳ್
ತೋರಿದುದಿಲ್ಲ ಬಿಟ್ಟು ಬರಲಾಗದು ಸೀತೆಯನೆಂಬ ನಿರ್ಣಯಂ
ಬೇರೆ ಕಡಂಗಿ ಕೆತ್ತಿದಪ್ಪುದೆನ್ನೆಡಗಣ್ ತಡವಿಲ್ಲದಚ್ಚಿಗಂ
ತೋರದೆ ಮಾಣದಿಂತಿದೆನುತುಂ ಮಗುಳ್ದಂ ಮನುವಂಶಮಂಡನಂ ॥೭೧॥

ವಚನ : ಅಂತು . ಬಂದುಲತಾಭವನದೊಳ್ ಮನೋವಲ್ಲಭೆಯಂ ಕಾಣದೆ ಶಿಖಿ ಮುಖಕ್ಕೆ
ವಂದ ಪಾದರಸದಂತೆ ನಿಜ ನಿಸರ್ಗ ಧೈರ್ಯಗುಣಮದೃಶ್ಯಮಾಗೆ

ಹಾ ಹಾ ಜನಕಸುತೇ ವೈ
ದೇಹೀ ವೈದೇಹಿಯೆಂದು ಪುದಿದಿರೆ ಮನಮಂ
ಮೋಹತಮಂ ದೀಪಂ ವಾ
ತಾಹತಿಯಿಂ ನಂದುವಂತೆ ಮೂರ್ಛೆಗೆ ಸಂದಂ ॥೭೨॥

ನಸು ಬಿಸುಪೇರೆ ಮೆಯ್ ಮಗುಳೆ ಕೆತ್ತುವ ತಾಣಮೆ ಕೆತ್ತೆ ಮಂದಮಾ
ದುಸಿರ್ಗಳೆ ನಾಸಿಕಾಮುಕುಲದಿಂದಿನಿಸುಂ ಪೊಲಪೊಣ್ಮೆ ತಳ್ತು ಸಂ
ದಿಸಿದೆಮೆ ಬಿರ್ಚೆ ಕಣ್ಮಲರ್ಗಳುಳ್ಳಲರುತ್ತಿರೆ ಜಾನಕೀಯೆನು
ತ್ತುಸಿರ್ದುಸಿರ್ದೆಳ್ದನಾ ರಘುಕುಲಾಂಬರ ಚಂಡ ಮರೀಚಿ ಮೂರ್ಛೆಯಿಂ ॥೭೩॥

ಕಳಹಂಸಾಲಸಯಾನೆಯಂ ಮೃಗಮದಾಮೋದಾಸ್ಯ ನಿಶ್ವಾಸೆಯಂ
ತಳಿರೇ ತಾವರೆಯೈ ಮದಾಳಿಕುಲಮೇ ಕರ್ನೆಯ್ದಿಲೇ ಮತ್ತ ಕೋ
ಕಿಳಮೇ ಕಂಡಿರೆ ಪಲ್ಲವಿಧರೆಯನಂಭೋಜಾಸ್ಯೆಯಂ ಭೃಂಗ ಕುಂ
ತಳೆಯಂ  ಕೈರವನೇತ್ರೆಯಂ ಪಿಕರವಪ್ರಖ್ಯಾತೆಯಂ ಸೀತೆಯಂ ॥೭೪॥

ಕಳರುತಿ ಮತ್ತ ಕೋಕಿಲಮನೀಕ್ಷಣಮುತ್ಪಲಮಂ ವಿನೀಲ ಕುಂ
ತಳಮಳಿಮಾಲೆಯಂ ಕಚಭರ ನವಿಲಂ ನಡೆ ಹಂಸಿಯಂ ತಳಂ
ತಳಿರ್ಗಳನಾನನಂ ಕಮಲಮಂ ನಳಿತೋಳ್ ಲತೆಯಂ ಲತಾಂತ ಕೋ
ಮಳೆ ಮರೆಗೊಂಡು ಮೆಯ್ಗರೆದು ಕಾಡುವ ಕಾರಣಮೇನೊ ಜಾನಕೀ ॥೭೫॥

ಎಂದು

ಎನಿತಾನುಂ ತೆರದಿಂ ಪಲುಂಬಿ ಪಲವಾಡುತ್ತುಂ ಮನಸ್ತಾಪದಿಂ
ತನು ಸಂತಾಪಮನಪ್ಪುಕಯ್ಯೆ ಬಳಲುತ್ತುಂ ಕಂತುಸಂತಾಪದಿಂ
ದೊನಲುತ್ತುಂ ಕನಲುತ್ತುಮಂದವಿರಳ ಪ್ರಸ್ಯಂದಿ ಬಾಷ್ಪೋದಕಾ
ನನನಾ ಕಾನನದೊಳ್ ತೊಳಲ್ದು ರಘುರಾಮಂ ಸೇದೆವಟ್ಟಿರ್ಪಿನಂ ॥೭೬॥

ಮದಜಲ ಧಾರೆಯಿಲ್ಲದ ದಿಶಾಗಜದಂತೆ ಸುಧಾಂಶು ಲೇಖೆಯಿ
ಲ್ಲದ ನಭದಂತೆ ಕಲ್ಪಲತೆಯಿಲ್ಲದ ನಂದನದಂತೆ ವೇಲೆಯಿ
ಲ್ಲದ ಕಡಲಂತೆ ಕೇಸರಿಣಿಯಿಲ್ಲದ ಕೇಸರಿಯಂತೆ ಸೀತೆಯಿ
ಲ್ಲದ ರಘುವಂಶ ರಿಮನಿರೆ ನೋಡಿದನಾಕುಲನಾಗಿ ಲಕ್ಷ್ಮಣಂ ॥೭೭॥

ಪರ ಪರಿಗೃಹೀತೆಗಳಿಪಂ
ತರೆ ಪುರುಷಂ ಪುರುಷಧರ್ಮಮಳೀಗುಂ ಪಳಿಗುಂ
ಧರೆ ದುರ್ಗತಿ ಸಮನಿಸುಗುಂ
ಪರಿಹರಿಸುವುದಾರುಮದರಿನೀ ದುರ್ಣಯಮಂ ॥೧೧೪॥

ವಚನ: ಎಂದು ಬಿನ್ನವಿಸೆ ಮಾರೀಚನುಮದನೆ ನುಡಿಯೆ

ಸ್ತ್ರೀರತ್ನಕ್ಕಾನಿರೆ ಪೆರ
ರಿರೊಡೆಯರ್ ಮೀರುವನ್ನರಾರೆನ್ನೀ ದು
ರ್ವಾರ ಭುಜಬಲಮನೆಂದವಿ
ಚಾರಿ ದಶಗ್ರೀವನವರನೇಳಿಸಿ ನುಡಿದಂ ॥೧೧೫॥
ಸಂಪಾದಕರು:
ಆಸ್ಥಾನ ಮಹಾವಿದ್ವಾನ್ ತಿರುವಳ್ಳೂರ್ ಶ್ರೀನಿವಾಸರಾಘವಾಚಾರ್
ಮತ್ತು
ಡಿ. ಎಲ್. ನರಸಿಂಹಿಚಾರ್ , ಎಂ, ಎ.