ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಮೇ 28, 2017

ಯಶೋಧರ ಚರಿತೆ - ಜನ್ನ

ಯಶೋಧರ ಚರಿತೆ
ಜನ್ನ

ಪುರುದೇವಾದಿಗಳೊಲಿಸಿದ
ಪರಮಶ್ರೀ ವಧುವನೊಲಿಸಿಯುಂ ಪರವನಿತಾ
ನಿರಪೇಕ್ಷಕನೆನಿಸಿದ ದೇ
ವರ ದೇವಂ ಕುಡುಗೆ ಸುವ್ರತಂ ಸುವ್ರತಮಂ

ಶೀರ್ಷಾಭರಣಂ ಧರೆಗುತ್
ಕರ್ಷವಿಳಾಸನದ ಭೂಮಿ ಸಕಳಜನಕ್ಕಂ
ಹರ್ಷಮನೀವುದು ಭಾರತ
ವರ್ಷದಯೋದ್ಯಾ ಸುವಿಷಯದೊಳ್ ರಾಜಪುರಂ॥೫॥

ಅದು ಪಿರಿಯ ಸಿರಿಯ ಬಾಳ್ ಮೊದ
ಲದು ಚಾಗದ ಭೋಗದಾಗರಂ ಸಕಲ ಸುಖ
ಕ್ಕದು ಜನ್ಮಭೂಮಿಯೆನಿಸಿದು
ದದನಾಳ್ವಂ ಮಾರಿದತ್ತನೆಂಬ ನೃಪಾಲಂ॥೬॥

ಆ ಪುರದ ತೆಂಕವಂಕದೊ
ಳಾಪೊತ್ತುಮನೇಕ ಜೀವಹತಿ ತನಗೆ ಸುಖೋ
ದ್ದೀಪನಮೆನಿಸುವ ಪಾಪಕ
ಳಾಪಂಡಿತೆ ಚಂಡಮಾರಿ ದೇವತೆಯಿರ್ಪಳ್॥೭॥

ತನಗರಸು ವೆರಸು ಪುರಜನ
ಮನಿತುಮಿಷಂ ಚೈತ್ರಮೆಂಬ ತಿಂಗಳೊಳಖಿಲಾ
ರ್ಚನೆ ವೆರಸು ಜಾತ್ರೆ ನೆರೆಯದೊ
ಡನಿತಮಮನೊರ್ಮೊದಲೆ ವಿಳಯದೊಳ್ ನೆರೆಯಿಸುವಳ್॥೮॥

ಆ ದೇವಿಯ ಜಾತ್ರೆಗೆ ಮೊಳೆ
ವೋದೆಳವೆರೆ ಸಿರದ ಗಾಳಿಮುರಿಯುಯ್ಯಲೆ ಕೈ
ವೋದಸುಕೆ ಕೋಕಿಲಧ್ವನಿ
ಮೂದಲೆಯುಲಿಯಾಗೆ ಬಂದುದಂದು ಬಸಂತಂ॥೯॥

ಸಿಸಿರಮನೆ ಪಿಡಿದು ಪರಕೆಗೆ
ವಸಂತನಲರ್ವೋದ ಮಾವಿನಡಿಮಂಚಿಕೆಯೊಳ್
ಕುಸುರಿದರಿದಡಗಿನವೊ
ಲೆಸೆದುವು ತದ್ವನದೊಳುದಿರ್ದ ಮುತ್ತದ ಮುಗುಳ್ಗಳ್॥೧೦॥

ಮಾರಿ ಮಲಯಾನಿಳಂ ನವ
ನೀರಜ ವನಮೆಂಬ ಕೆಂಡದೊಳ್ ದಂಡನಮ
ಸ್ಕಾರದೆ ಬಂದಪನಿತ್ತವ
ಧಾರಿಪುದೆಂಬಂತಿರುಲಿದುವರಗಿಳಿ ಬನದೊಳ್॥೧೧॥

ಅಂತು ದೊರೆವೆತ್ತು ಬಂದ ವ
ಸಂತದೊಳಾ ಮಾರಿದತ್ತನುಂ ಪುರಜನಮುಂ
ತಂತಮಗೆ ಚಂಡಮಾರಿಗೆ
ಸಂತಸಮಂ ಮಾಡಲೆಂದು ಜಾತ್ರೆಗೆ ನೆರೆದರ್॥೧೨॥

ಸುರಿಗಿರಿದರ್ಚನೆಯಾಡುವ
ಪರಕೆಯನೊಪ್ಪಿಸುವ ಲಕ್ಕ ಲೆಕ್ಕದ ಲೆಂಕರ್
ವೆರಸು ಬಲಗೊಂಡು ದೇವಿಯ
ಚರಣಂಗಳ್ಗೆರಗಿ ರಂಗಮಂಟಪದೆಡೆಯೊಳ್॥೧೩॥

ನಿಂದು ನರಪತಿ ತಳಾರಂ
ಗೆಂದಂ ನೀನ್ ಬರಿಸು ಮನುಜಯುಗಮಂ ಮುನ್ನಂ
ಕೊಂದರ್ಚಿಸುವೆಂ ಪೂಜೆಯೊ
ಳೆಂದಿನ ಪರಿ ತಪ್ಪೆ ದೇವಿ ತಪ್ಪದೆ ಮಾಣಳ್॥೧೪॥

ತಡವಾದಪ್ಪುದು ಪೌರರ್
ಕುಡುವೇಳ್ಪುದು ಪಲವು ಜೀವರಾಶಿಯ ಬಲಿಯಂ
ನಡೆಯೆನೆ ಹಸಾದಮಾಗಳೆ
ಪಿಡಿತಾರದೆ ಮಾಣರೆನ್ನ ಕಿಂಕರರೆನುತುಂ॥೧೫॥

ಕಿರುವರೆಯದ ಶುಭಲಕ್ಷಣ
ದರಿಕೆಯ ಸತ್ಕುಲದ ಮರ್ತ್ಯಯುಗಲಕಮಂ
ಅರಸಲ್ ಬಳರಿಯ ಬನದಿಂ
ಪೊರಮಟ್ಟಂ ಚಂಡಕರ್ಮನೆಂಬ ತಳಾರಂ॥೧೬॥

ಇತ್ತಲ್ ಬಳಿಕ್ಕ ಪಂಚಶ
ತೋತ್ತಮ ಯತಿಸಮಿತಿ ವೆರಸು ಗಮನಪ್ರಾಯ
ಶ್ಚಿತ್ತ ನಿಮಿತ್ತಂ ಬಂದು ಸು
ದತ್ತಾಚಾರ್ಯರ್ ಪುರೋಪವನಮಂ ಸಾರ್ದರ್॥೧೭॥

ಅವರ ಗುಣಮವರ ಸಂಯಮ
ಮವರ ತಪಶ್ಚರಣಮೆಂಬುದವರಿವರಳವ
ಲ್ಲವರ ಪೆಸರ್ಗೊಂಡ ನಾಲಗೆ
ಸವಿದರಿಯದು ಬಳಿಕ ತಾಯ ಮೊಲೆವಾಲ್ವನಿಯಂ॥೧೮॥

ಮುನಿಸಮುದಾಯ ಸಮೇತಂ
ವಿನೇಯಜನ ವನಜವನ ದಿವಾಕರನಂತಾ
ಮುನಿಪನುಪವಾಸಮಂ ಪ
ರ್ವ ನಿಮಿತ್ತಂ ತಳೆದು ಬಳಿಕ ಬಾಲಕಯುಗಮಂ॥೧೯॥

ಚರಿಗೆಗೆ ಬೀಳ್ಕೊಡೆ ಗುರುಗಳ
ಚಲಣಕ್ಕಾ ಯುಗಳಮೆರಗಿ ಪೊರಮಟ್ಟಾಗಳ್
ತರುಣ ವನಹರಿಣ ಯುಗಮಂ
ತರಕ್ಷು ಪಿಡಿವಂತೆ ಚಂಡಕರ್ಮಂ ಪಿಡಿದಂ॥೨೦॥

ಅಭಯರುಚಿಯಭಯಮತಿಯೆಂ
ಬುಭಯಮನಾ ಪಾಪಕರ್ಮನೊಯ್ವೆಡೆಯೊಳ್ ಮ
ತ್ತಭಯರುಚಿ ತಂಗೆಗೆಂದಪ
ನಭೀತೆಯಾಗೆಲಗೆ ತಾಯೆ ಮರಣದ ದೆಸೆಯೊಳ್॥೨೧॥

ನಿಯತಿಯನಾರ್ ಮೀರಿದಪರ್
ಭಯಮೇವುದೊ ಮುಟ್ಟಿದೆಡೆಗೆ ಸೈರಿಸುವುದೆ ಕೇಳ್
ನಯವಿದೆ ಪೆತ್ತ ಪರೀಷಹ
ಜಯಮೆ ತಪಂ ತಪಕೆ ಬೇರೆ ಕೋಡೆರಡೊಳವೇ॥೨೩॥

ಅಣ್ಣನ ಮಾತಂ ಮನದೊಳ್
ತಿಣ್ಣಂ ತಳೆದೆಂದಳನುಜೆ ಮಾಡಿದುದಂ ನಾ
ವುಣ್ಣದೆ ಪೋಕುಮೆ ಭಯಮೇ
ಕಣ್ಣ ಭವಪ್ರಕೃತಿವಿಕೃತಿ ನಾವರಿಯದುದೇ॥೨೩॥

ಎನಿತೊಳವಪಾಯಕೋಟಿಗ
ಳನಿತರ್ಕಂ ಗೇಹಮಲ್ತೆ ದೇಹಮಿದಂ ನೆ
ಟ್ಟನೆ ಪೊತ್ತು ಸುಖಮನರಸುವ
ಮನುಜಂ ಮೊರಡಿಯೊಳೆ ಮಾದುಪಳಮರಸದಿರಂ॥೨೪॥

ಬೇಡಿದ ಕಾಡೊಳ್ ಮಳೆಯಾ
ಯ್ತೀಡಾಡುವಮಿದರ ಪೊರೆಯನೆನಗಂ ನಿನಗಂ
ಮೂಡುವ ಮುಳುಗುವ ದಂದುಗ
ಮಾಡಿದ ಹೊಲನುಂಡ ಮರ್ದು ಕಂಡ ವಿಚಾರಂ॥೨೫॥

ಇಂತಿಂತೊರ್ವರನೊರ್ವರ್
ಸಂತೈಸುತ್ತುಂ ನೃಪೇಂದ್ರತನುಜಾತರ್ ನಿ
ಶ್ಚಿಂತಂ ಪೊಕ್ಕರ್ ಪಸಿದ ಕೃ
ತಾಂತನ ಬಾಣಸುವೊಲಿರ್ದ ಮಾರಿಯ ಮನೆಯಂ॥೨೬॥

ತಳಮನುಡಿದಿಡುವ ಕಣ್ಣಂ
ಕಳೆದೇರಿಪ ಕರುಳ ತೋರಣಂಗಟ್ಟುವ ಕಾ
ಲಲ್ಗಳನುರಿಪಿ ನೆತ್ತರಾ ಕೂ
ಳ್ಗಳನಡುತಿಹ ವೀರರೆತ್ತ ನೋಳ್ಪೊಡಮದರೊಳ್॥೨೭॥

ತಾಳುಗೆಯನುರ್ಚಿ ನೆತ್ತಿಯ
ಗಾಳಂ ಗಗನದೊಳೆಳಲ್ವ ವಾರಿಯ ಬೀರರ್
ಪಾಳಿಯೊಳೆಸೆದರ್ ಪಾಪದ
ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆರದಿಂ॥೨೮॥

ಆಡು ಕುರಿ ಕೋಳಿ ಕೋಣನ
ಕೂಡಿದ ಪಿಂಡೊಳರೆ ಪೆಳರೆ ಮಾರ್ದನಿಯಿಂದಂ
ಕೂಡೆ ಬನಮಳ್ತುದುರ್ವರೆ
ಬೀಡೆಯಿನೆರ್ದೆಯೊಡೆದುದವರ ಕೋಟಲೆಗಿಗಳಾ॥೨೯॥

ದೆಸೆದೆಸೆಗೆ ನರಶಿರಂ ತೆ
ತ್ತಿಸಿ‌ ಮೆರೆದುವು ಮದಿಲೊಳಬ್ಬೆ ಪೇರಡಗಿನ ಪೆರ್
ಬೆಸನದೆ ಪೊರಗಣ ಜೀವ
ಪ್ರಸರಮುಮಂ ಪಲವು ಮುಖದಿನವಳೋಕಿಪವೋಲ್॥೩೦॥

ಭೈರವನ ಜವನ ಮಾರಿಯ
ಮೂರಿಯವೊಲ್ ನಿಂದ ಮಾರಿದತ್ತಂ ಲಲಿತಾ
ಕಾರರ ಧೀರರ ಬಂದ ಕು
ಮಾರರ ರೂಪಿಂಗೆ ಠಕ್ಕುಗೊಂಡಂತಿರ್ದಂ॥೩೧॥

ಅರಸನ ಕೆಲಬಲದವರ್ಗಳ್
ಪರಸಿರೆ ಪರಸಿರೆ ನೃಪೇಂದ್ರನಂ ನೀವೆನೆ ಮಂ
ದರಧೀರನಭಯರುಚಿ ನೃಪ
ವರ ನಿರ್ಮಲ ಧರ್ಮದಿಂದೆ ಪಾಲಿಸು ಧರೆಯಂ॥೩೨॥

ಎಂದು ಪರಸಿದೊಡೆ ಪೊಯ್ಯದೆ
ನಿಂದು ನೃಪಂ ಮನದೊಳೆಂದನೀ ದೇಗುಲಮಂ
ಬಂದು ಪುಗಲೊಡನೆ ಜೀವಂ
ನಿಂದರಿಯದು ಮುನ್ನಮಿನ್ನರಂ ಕಂಡರಿಯೆಂ॥೩೩॥

ಕಿಳ್ತ ಕರವಾಳ್ಗಂಮೆನಗಂ
ಮಿಳ್ತುವಿನಂತಿರ್ದ ಮಾರಿಗಂ ಬೆದರದೆ ನಿಂ
ದಳ್ತಿಯನೆ ನುಡಿದರಿವರ ನೆ
ಗಳ್ತೆ ಕರಂ ಪಿರಿದು ಧೀರರಕಟ ಕುಮಾರರ್॥೩೪॥

ಜವಳಿವೆರೆ ಮನುಜ ರೂಪದಿ
ನವನಿಯೊಳೊಗೆದಂತೆ ಕಾಂತಿ ಮೆರೆದಪುದಿಂದಿಂ
ತಿವರ್ಗಳ ಚೆಲ್ವಿಕೆ ಕಣ್ಗಳ
ತವರಾಜಮನಿಂದು ಕಂಡೆನೀ ಬಾಲಕರಂ॥೩೫॥

ಆವ ಕುಲಮಾರ ತನಯರಿ
ದಾವೆಡೆಯಿಂ ಬಂದಿರೇಕೆ ಬಾಲ್ಯದೊಳೀ ಭಿ
ಕ್ಷಾವೃತ್ತಿಯೆಂದು ಬೆಸಗೊಳೆ
ಭೂವರ ಕೇಳೆಂದು ಕುವರನಂದಿಂತೆಂದಂ॥೩೬॥

ಧರ್ಮಪರರ್ಗಲ್ಲದೆಮ್ಮಯ
ನಿರ್ಮಲಚಾರಿತ್ರಮಿಂಬುಕೆಯ್ಯದು ನಿನಗಾ
ಧರ್ಮದ ಪೋದ ಪೊಲಂಬದು
ನರ್ಮದೆಯಿಂ ಗೆಂಟದೇಕೆ ಕೇಳ್ದಪೆಯೆಮ್ಮಂ॥೩೭॥

ಆ ಮಾತನ್ನೆಗಮಿರ್ಕಲೆ
ಭೂಮೀಶ್ವರ ನಿನಗೆ ಪಥ್ಯಮಾವುದದಂ ಮಾ
ಡಾಮೂಲಚೂಲಮೆಮಗೆ ತ
ಳಾಮಲಕಂ ಭವನಿಬದ್ಧಮಳಲಿಸಿತೆಮ್ಮಂ॥೩೮॥

ಗುಣಿಗಳ ಗುಣರತ್ನ ವಿಭೂ
ಷಣಮೆಸೆವುದೆ ವಿಕಳಹೃದಯರಾದವರ್ಗೆ ನೃಪಾ
ಗ್ರಣಿ ಪೇಳ್ ತುಪ್ಪೇರಿದ ದ
ರ್ಪಣದೊಳ್ ಪಜ್ಜಳಿಸಲಾರ್ಪುದೇ ಪ್ರತಿಬಿಂಬಂ॥೩೯॥

ಇಂತೆಂಬುದುಮಾ ಕುವರನ
ದಂತಪ್ರಭೆಯೆಂಬ ಶೀತಕರನುದಯದಘ
ಧ್ವಾಂತೌಘ ಮಧುಪ ಮಾಲಿಕೆ
ಯಂ ತೊಲಗಿಸೆ ಮುಗಿದುದವನ ಕರ ಸರಸಿರುಹಂ॥೪೦॥

ಧನಮಂ ಕಂಡ ದರಿದ್ರನ
ಮನದವೊಲೆರಗಿದುವು ಪರಿಜನಂಗಳ ನೊಸಲಾ
ವಿನಯನಿಧಿಗಾ ಕುಮಾರಕ
ನನುರಾಗದೆ ಮಾರಿದತ್ತವಿಭುಗಿಂತೆಂದಂ॥೪೧॥

ಭಲರೆ ನೃಪೇಂದ್ರ ದಯೆಯೊಳ್
ನೆಲೆಗೊಳಿಸಿದೆ ಮನಮನಮಮ ನೀನ್ ಕೇಳ್ದುದು ಸತ್
ಫಲಮಾಯ್ತು ಧರ್ಮಪಥದೊಳ್
ಸಲೆ ನಿಂದಪೆ ಕಾಲಲಬ್ಧಿ ಪೊಲಗೆಡಿಸುವುದೇ॥೪೨॥

ಎಂತು ಬೆಸಗೊಂಡೆ ಬಸಗೊಂ
ಡಂತಿರೆ ದತ್ತಿವಧಾನನಾಗು ಜಯಶ್ರೀ
ಕಾಂತೆಯುಮಂ ಪರಮಶ್ರೀ
ಕಾಂತೆಯುಮಂ ನಿನಗೆ ಕುಡುಗುಮೀ ಸತ್ ಕಥನಂ॥೪೩॥

ಶ್ರೀಮತ್ ತೀರ್ಥಿಧಿಪನ ವದನಾಂಭೋಜದಿಂ ಸರ್ವಭಾಷಾ
ಸಾಮಾನ್ಯಂ ಶ್ರೀವಚೋಮಾರ್ಗದಿಂ ಮ
ತ್ತಾಮುಂ ಕಂಡುಂಡುದರ ಕಥೆಯಂ ಪೇಳ್ದಪೆಂ ಕೇಳಿಮೆಂದಾ
ಭೂಮೀಶಂಗಂದಭಯರುಚಿಯಿಂತೆಂದು ಪೇಳಲ್ ತಗುಳ್ದಂ॥೪೪॥

ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾ
ರಭಸ ಮತಿಗೆ ಸಯ್ಪಂ ಪೇಳ್ದು ಧರ್ಮಕ್ಕೆ ತಂದೀ
ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ
ಪ್ರಭುಸಭೆಗೆಸೆದಿರ್ಕುಂ ಮಂಗಳ ಶ್ರೀ ವಿಲಾಸಂ॥೪೫॥

ಎರಡನೆಯ ಅವತಾರ

ಆ ಕಥೆ ಮತ್ತೆಂತೆಂದೊಡಿ
ಳಾಕಾಂತೆಗವಂತಿ ವಿಷಯಮಾಸ್ಯದವೊಲ್ ಶೋ
ಭಾಕರಮಾಯ್ತದರೊಳ್ ನಾ
ಸಾಕುಟ್ಮಳದಂತೆ ಮೆರೆವುದುಜ್ಜೇನಿ ಪುರಂ॥೧॥ಮ

ಆ ಪುರದರಸಂ ನತಭೂ
ಮೀಪಾಲರ ಮಕುಟಮಸ್ತಕದೆ ನಿಜ ತೇಜೋ
ರೂಪಕಮೆ ಪದ್ಮರಾಗದ
ದೀಪದವೊಲ್ ಮೆರೆವಿನಂ ಯಶೌಘಂ ಮೆರೆವಂ॥೨॥

ದೊರೆವಡೆದ ಯಶೌಘನ ಭೂ
ವರತಿಳಕನ ಕಣ್ಗಳಂಗರಕ್ಕರ್ ಮನಮಾ
ಭರಣಂ ರಾಜ್ಯಶ್ರೀ ಸಹ
ಚರಿಯೆನೆ ಸಂದತ್ತು ಚಂದ್ರಮತಿಗರಸಿತನ॥೩॥

ಅನತೆಸೆವ ಚಂದ್ರಮತಿಗಂ
ಜನಪತಿಗಂ ಪುಟ್ಟಿದಂ ಯಶೋಧರನೆಂಬಂ
ಜನಮೋಹನಬಾಣಂ ಕ
ರ್ಬಿನ ಬಿಲ್ಗಂ ನನೆಯ ನಾರಿಗಂ ಪುಟ್ಟಿದವೊಲ್॥೪॥

ನೋಡುವ ಕಣ್ಗಳ ಸಿರಿ ಮಾ
ತಾಡುವ ಬಾಯ್ಗಳ ರಸಾಯನಂ ಸಂತಸದಿಂ
ಕೂಡುವ ತೋಳ್ಗಳ ಪುಣ್ಯಂ
ನಾಡಾಡಿಯೆ ರೂಪು ಕುವರ ವಿದ್ಯಾಧರನಾ॥೫॥

ಎಳವೆಳ್ದಿಂಗಳ್ ನನೆಗಣೆ
ಮಳಯಾನಿಳನಿಲ್ಲಿ ಮೂವರೊಳಗಾರೊ ಕುತೂ
ಹಳಮಾದಪುದೆನ್ನದೆ ಕ
ಣ್ಣೊಳವೆ ಯಶೋಧರ ಕುಮಾರನಂ ಕಾಣಲೊಡಂ॥೬॥

ಅಮೃತಮತಿ ಗಡ ಯಶೋಧರ
ನಮನಃಪ್ರಿಯೆ ಆಕೆ ದೀವಮಾಗೆ ಪುಳಿಂದಂ
ಸುಮನೋಬಾಣಂ ತದ್ ಭೂ
ರಮಣನನೊಲಿದಂತೆ ಗೋರಿಗೊಳಿಸುತ್ತಿರ್ಕುಂ॥೭॥

ನರೆಯೆಂಬ ಹೊರಸು ಮೊಗೆಮೆಂ
ಬರಮನೆಯಂ ಪೊಕ್ಕೊಡಂಗನಾಲೋಕನಮೆಂ
ಬರಸೆಂತಿರ್ದಪನೆಂದಾ
ನರನಾಥಂ ತೊರೆದನಖಿಳ ವಿಷಯಾಮಿಷಮಂ॥೮॥

ಧರಣೀಭಾರಕ್ಕೆ ಯಶೋ
ಧರನನೊಡಂಬಡಿಸಿ ನೂರ್ವರರಸುಗಳೊಡನಾ
ದರದಿಂ ಕಂಬಂದಪ್ಪಿದ
ಕರಿಯಂತೆ ತಪೋವನಕ್ಕೆ ನಡೆದನಿಳೇಶಂ॥೯॥

ಅಳವಡೆ ಭುಜದೊಳ್ ಮೃಗಮದ
ತಿಳಕದವೊಲ್ ಸಕಲಧರಣಿ ಯಂವನಭೂಷಾ
ವಳಿಯೆನೆ ತಿರ್ದುವನಾ ನೃಪ
ಕುಲಶೇಖರನಮೃತಮತಿಯ ಮುಖದರ್ಪಣದೊಳ್॥೧೦॥
ಅವನಿಪನೊರ್ಮೆ ಸಭಾಮಣಿ
ಭವನದಿನಂಬರ  ತರಂಗಿಣೀ ಪುಳಿನಮನೇ
ರುವ ಹಂಸನಂತೆ ಶಯ್ಯಾ
ಧವಳ ಪ್ರಾಸಾದತಳಮನೇರಿದನರಸಾ॥೧೧॥

ಆಮೃತಮತಿ ಸಹಿತಮಾ ಚಂ
ದ್ರಮತಿಯ ಸುತನಂತು ಮೆರೆವ ದವಳಾರದೊಳ
ಭ್ರಮು ವೆರಸಭ್ರಗಜಂ ವಿ
ಭ್ರಮದಿಂದಂ ಸೆಜ್ಜರಕ್ಕೆ ಬಂದವೊಲೆಸೆಗುಂ॥೧೨॥

ಹೃದಯಪ್ರಿರಂತೊರಗಿದ
ಪದದೊಳ್ ಗರಟಿಗೆಯ ಜಾವದುಕ್ಕಡದುಲಿ ಮ
ಳ್ಗಿದ ಪೊತ್ತು ಸೂಳ್ಗೆ ಕರುಮಾ
ಡದ ಪಕ್ಕದೊಳಿರ್ದ ಪಟ್ಟದಾನೆಯ ಬದಗಂ॥೧೩॥

ಬಿನದಕೆ ಪಾಡುತ್ತಿರೆ ನುಣ್
ದನಿ ನಿದ್ರೆಗೆ ಕತಕಬೀಜಮಾಯ್ತೆನೆ ಮೃಗಲೋ
ಚನೆ ತಿಳಿದಾಲಿಸಿ ಮುಟ್ಟಿದ
ಮನಮಂ ತೊಟ್ಟನೆಪಪಸಾಯದಾನಂಗೊಟ್ಟಳ್॥೧೪॥

ಅಂತೆಸೆಯೆ ಪಾಡುತಿರೆ ತ
ದ್ದಂತಿಪನತಿನೂತ್ನಗೀತ ಪಾತನ ವಿಕಲ
ಸ್ವಾಂತೆಗೆ ನೋಡುವ ಕೂಡುವ
ಚಿಂತೆ ಕಡಲ್ವರಿದುದಂದು ಬೆಳಗಪ್ಪಿನೆಗಂ॥೧೫॥

ಮನದನ್ನಳಪ್ಪ ಕೆಳದಿಗೆ
ಮನಮಂ ಮುಂದಿಟ್ಟು ಬಳಿಕ ಕಳಿಪಿದೊಡವಳಾ
ತನ ರೂಪುಗಂಡು ಕಣ್ಗಂ
ಮನಕ್ಕಮುದ್ಗಾರವೆತ್ತು ಭೋಂಕನೆ ಮಗುಳ್ದಳ್॥೧೬॥

ಅಮೃತಮತಿಯೆತ್ತ ರೂಪಾ
ಧಮನಷ್ಟಾಂವಂಕನೆತ್ತ ಚಿತ್ರಮಪಾತ್ರೇ
ರಮತೇ ನಾರೀ ಎಂಬುದು
ಸಮನಿಸಿದುದು ಬೆಂದ ಬಿದಿಗೆ ಕಣ್ಣಿಲ್ಲಕ್ಕು॥೧೭॥

ಎನಿತುಂ ಬಂದು ವಿಷಣ್ಣಾ
ನನೆಯಂಮಮಾರ್ಗಾವಲಗ್ನನೇತ್ರೆಯನುಚ್ಛ್ವಾ
ಸ ನಿತಪ್ತಾಧರ ರುಚಿಯಂ
ಮನುಜೇಂದ್ರಾಂಗನೆಯನೆಯ್ದೆ ಕಂಡಿಂತೆಂದಳ್॥೧೮॥

ಕಂತುವಿನ ಕಯ್ಯ ಕೂರಸಿ
ಯಂತಿರೆ ಗರಗರಿಕೆವಡೆದು ಪೊಳೆವಸಿಯಳೆ ನೀನ್
ಇಂತಪ್ಪ ಕಾಮದೇವಂ
ಗೆಂತೆಂತಾಯ್ದರಸಿ ಕೂರ್ತೆಯೆಂದಾನರಿಯೆ॥೧೯॥

ಈ ದೊರೆಯನೆಂದು ತೋರಲ್
ಮೇದಿನೀಯೊಳಗಾತನಿಲ್ಲದಿಲ್ಲೆನೆ ಪೇಳ್ ಪೇಳ್
ಕಾದಲನಂತಿರೆ ಚೆಲ್ವನೆ
ದೂದವಿ ನೀನೆನ್ನ ಕೊಂದೆಯೆಂದೊಡೆ ಪೇಳ್ದಳ್॥೨೦॥

ಪರಿದಲೆ ಕುರಿನೊಸಲಳಿಗ
ಣ್ಣೊರೆವಾಯ್ ಹಪ್ಪಳಿಕೆಮೂಗು ಮುರುಟಿದ ಕಿವಿ ಬಿ
ಬ್ಬಿರುವಲ್ ಕುಸಿಗೊರಲಿಳಿದೆರ್ದೆ
ಪೊರಂಟ ಬೆನ್ ಬಾತ ಬಸಿರಡಂಗಿದ ಜಘನಂ॥೨೧॥

ಕರೆದೊವಲ ಪರೆಯ ಕುರಿಯಂ
ತೆರೆದಂದದ ಮೆಯ್ಯನಾತಮಾತನ ಕಯ್ಗಳ್
ಕುರುಗಣ್ಣು ಕೂನಬೆನ್ ಕಾಲ್
ಮರೆಯಿಸುವುದು ಟೊಂಕ ಮುರಿದ ಕತ್ತೆಯ ಕಾಲಂ॥೨೨॥

ಮುದುಗರಡಿಯ ಮುದುದೊವಲಂ
ದದ ಕರಿಯಂ ತಾಳಕಾಯ ಮೋಳಿಗೆಯೊಂದಂ
ದದ ಮುರುಡನಷ್ಟವಂಕಂ
ಮೊದಲೊಣಗಿದ ಕೂನ ಗೊರಡನಂದದ ಕೊಂಕಂ॥೨೩॥

ಎಂದೊಡೆ ದೂದವಿಗವಳಿಂ
ತೆಂದಳ್ ಗರಗರಿಕೆ ಕೊರಲೊಳೀಕ್ಷಣದೊಳ್ ವಾರ್
ಬಿಂದು ಮಿಡುಕೆರ್ದೆಯೊಳೊದವೆ ಪು
ಳಿಂದನ ಕಣೆಗಟ್ಟಿನಿಂದ ವನಹರಿಣಿಯವೊಲ್॥೨೪॥

ಕರಿದಾದೊಡೆ ಕತ್ತುರಿಯಂ
ಮುರುಡಾದೊಡೆ ಮಲಯಜಂಗಳಂ ಕೊಂಕಿದೊಡೇಂ
ಸ್ಮರಚಾಪಮನಿಳಿಕಯ್ವರೆ
ಮರುಳೇ ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್॥೨೫॥

ಒಲವಾದೊಡೆ ರೂಪಿನ ಕೋ
ಟಲೆಯೇವುದೊ ಕಾರ್ಯಮಾಗೆ ಕಾರಣದಿಂದಂ
ಫಲಮೇನಿಂದೆನಗಾತನೆ
ಕುಲದೈವಂ ಕಾಮದೇವನಿಂದ್ರಂ ಚಂದ್ರಂ॥೨೬॥
ಎಂದಾಕೆಗೆ ಲಂಚಮನಿ
ತ್ತೆಂದುದನೆಂದೆರವಿಗೊಂಡು ಕಳಿಪುವುದುಮವಳ್,
ಸಂಧಿಸಿದೊಡಮೃತಮ ರಾ
ತ್ರಿಂದಿವಮಾತನೊಳೆ ಸಲಿಸಿದಳ್ ತೆರಪುಗಳಂ॥೨೭॥

ಆ ವಿಕಟಾಂಗನೊಳಂತಾ
ದೇವಿಗೆ ರುಚಿಯಾಗೆ ರತಿಫಲಾಸ್ವಾದನದೊಳ್
ಬೇವಂ ಮೆಚ್ಚಿದ ಕಾಗೆಗೆ
ಮಾವಿಳಿದಪ್ಪಂತೆ ಪತಿಯೊಳಿಳಿದಾಯ್ತು ಮನಂ॥೨೮॥

ನೋಡುವ ಮಾತಾಡುವ ಬಾಯ್
ಗೂಡುವ ಪದನಮೃತಮತಿಗೆ ಪೂರ್ವಸ್ಥಿತಿಯಿಂ
ಪಾಡಳಿಯುತ್ತಿರೆ ನೋಡಲ್
ವೇಡಿಯಯಶೋಧರನೊರ್ಮೆ ಶಯ್ಯಾತಳದೊಳ್॥೨೯॥

ಮರೆದೊರಗಿದನಂತೆವೊಲಿರೆ
ಪರಮೆ ಪಗಲ್ ಮುಗಿಯೆ ಸಿಲ್ಕಿ ಕೈರವದಿನಿರುಳ್
ಪೊಲಮಡುವಂತರಸನ ತೋಳ್
ಸೆರೆಯಿಂ ನುಸುಳ್ದರಸಿ ಜಾರನಲ್ಲಿಗೆ ಪೋದಳ್॥೩೦॥

ಬೆನ್ನೊಳೆ ಪೋದಂ ದೋಷದ
ಬೆನ್ನೊಳೆ ಸಂಧಿಸುವ ದಂಡದಂತರಸಂ ಪ್ರ
ಚ್ಛ್ನನ್ನದಿನುರ್ಚಿದ ಬಾಳ್ ವೆರ
ಸನ್ನೆಗಮಾ ಬದಗನರಸಿ ತಡೆದೊಡೆ ಮುಳಿದಂ॥೩೧॥

ಮುಳಿದಾಕೆ ತಂದ ಮಾಲಾ
ಮಳಯಜ ತಿಂಬೂಲ ಜಾಲಮಂಕೆದರಿ ಕುರು
ಳ್ಗಳನೆಳೆದು ಬೆನ್ನ ಮಿಳಿಯಿಂ
ಕಳಹಂಸೆಗೆ ಗಿಡಿಗನೆರಗಿದಂತಿರೆ ಬಡಿದಂ॥೩೨॥

ತೋರ‌ಮುಡಿವಿಡಿದು ಕುಡಿಯಂ
ನಾರಂ ತದೆವಂತೆ ತದೆದು ಬೀಟೆಯ ಕಾಲಿಂ
ಬಾರೇಳೆ ಬದಗನೊದೆದೊಡೆ
ಕೇರೆ ಪೊರಳ್ವಂತೆ ಕಾಲಮೇಲೆ ಪೊರಳ್ದಳ್॥೩೩॥

ತಡವಾದುದುಂಟು ನಲ್ಲನೆ
ಬಡಿ ಮುಳಿಯದಿರರಸನೆಂಬ ಪಾತಕನೆನ್ನಂ
ತೊಡೆಯೇರಿಸಿ ಕೇಳಿಕೆಯಾ
ದೊಡೆ ನೋಡುತ್ತಿರ್ದೆನುಂತೆ ನಿಲಲಣ್ಮುವೆನೇ॥೩೪॥

ಕಿವಿಸವಿ ದನಿ ಕಣ್ ಸವಿ ರೂ
ಪವಧರಿಸೆಲೆ ಗಜವೆಡಂಗ ನೀನುಳಿದೊಡೆ ಸಾ
ವವಳೆನಗೆ ಮಿಕ್ಕ ಗಂಡರ್
ಸವಸೋದರರೆಂದು ತಿಳಿಸಿದಳ್ ನಂಬುಗೆಯಂ॥೩೫॥

ಆಗಳ್ ಬಾಳ್ ನಿಮಿರ್ದುದು ತೋಳ್
ತೂಗಿದುದು ಮನಂ ಕನಲ್ದುದಿರ್ವರುಮನೆರಳ್
ಬಾಗಂ ಮಾಡಲ್ ಧೃತಿ ಬಂ
ದಾಗಳ್ ಮಾಣೆಂಬ ತೆರದೆ ಪೇಸಿದನರಸಂ॥೩೬॥

ಪರನೃಪರನಲ್ಲದೀ ಪುಳು
ಕರನಿರಿವುದೆ ಮದ್ ಭುಜಾಸಿಯಿದು ಕಯ್ಯಿಕ್ಕಲ್
ಕರಿ ಕರಿಗಲ್ಲದಿರುಂಪೆಗೆ
ಪರಿವುದೆ ಹರಿ ಕರಿಯನಲ್ಲದಿರಿವುದೆ ನರಿಯಂ॥೩೭॥

ಅಸಿಲತೆ ರಣಧೌತಮದೀ
ಮಸಿಮುಸುಡನ ಜೀವ ಕಪ್ಪಿನಿಂ ಕಂದಿದೊಡೆಣ್
ದೆಸೆಯನಡರ್ದೆನ್ನ ಕೀರ್ತಿ
ಪ್ರಸರದ ಕುಡಿ ಕಯ್ಪೆಸೊರೆಯ ಕುಡಿಯಲಕ್ಕುಂ॥೩೮॥

ಅಳಿಪುಳ್ಳೊಡೆ ನೋಡಿರಿದೊಡೆ
ನಳಿವುದೆ ಪೆಣ್ ತಪ್ಪಿ ನಡೆಯೆ ಚಿಃ ಕಿಸುಗುಳಮೆಂ
ದುಳಿವುದೆ ಗೆಲ್ಲಂ ಕೊಂದಾ
ಪುಳು ಪುಟ್ಟುವ ನಲಕದೋಳಗೆ ಬೀಳ್ವನೆ॥೩೯॥
ಎಂದು ನೆನೆದಿರಿಯಲೊಲ್ಲದೆ
ಬಂದರಸಂ ಮುನ್ನಿನಂತೆ ಪವಡಿಸೆ ತಾನುಂ
ಬಂದು ಮರೆದರಸನೊರಗಿದ
ನೆಂದೊಯ್ಯನೆ ಸಾರ್ದು ಪೆರಗೆ ಪಟ್ಟಿರ್ಪಾಗಳ್॥೪೦॥

ಬದಗುಳಿಗನ ತೋಳ್ ಮುಟ್ಟಿದ
ಸುದತಿಯೊಳಿಂಪಾಗದಂತೆ ಕೆಟ್ಟುದು ಪುಳಿ ಮು
ಟ್ಟಿದ ದುಗ್ಧದಂತೆ ನೀರ್ ಮು
ಟ್ಟಿದ ಜೇನೆಯ್ಯಂತೆ ಪತಿಗೆ ಶಯ್ಯಾತಳದೊಳ್॥೪೧॥

ಆ ಗಂಡನಪ್ಪಿದ ತೋಳ್
ಪೋಗಂಡನನಪ್ಪುವಂತೆಮಾಡಿದ ಬಿದಿಯಂ
ಮೂಗಂ ಕೊಯ್ದಿಟ್ಟಿಗೆಯೊಳ್
ಪೋಗೊರಸದೆ ಕಂಡೆನಾದೊಡೇಂ ಬಿಟ್ಟಪನೆ॥೪೨॥

ಎನೆ ಕೇಳ್ದು ಮಾರಿದತ್ತಾ
ವನಿಪನವಂಗಭಯರುಚಿ ಬಳಿಕ್ಕಿಂತೆಂದಂ
ಮನಸಿಜನ ಮಾಯೆ ವಿಧಿವಿಳ
ಸನದ ನೆರಂಬಡೆಯ ಕೊಂದು ಕೂಗದೆ ನರರಂ॥೪೩॥

ಪದವಿಯ ರೂಪಿನ ಸೊಬಗಿನ
ಮದಮಂಮಾಡುವರ ಮೂಗಿನೊಳ್ ಪಾತ್ರಮನಾ
ಡದೆ‌ ಮಾಣದನಂಗನ ಕೃತಿ
ಸುದತಿಯರ ವಿಕಾರಮೆಂಬ  ವಿದ್ಯಿಬಲದಿಂ॥೪೪॥

ಆ ರಾಜಕುಮಾರಂ ಬಳಿ
ಕಾ ರೂಪಿನ ಪೆಂಡಿರಿಂತು ಕಳಿಪಾದೊಡೆ ಚಿಃ
ಕೂರಿಸುವಕೂರ್ಪ ಮಾತಂ
ಮಾರಿಗೆ ಕುಡು ಸಿರಿಯನೊಟ್ಟಿ ಸುಡು ಹೋಗೆಂದಂ॥೪೫॥

ಒಲಿಸಿದ ಪೆಣ್ ಪೆರರೊಳ್ ಸಂ
ಚಲಿಸಿದೊಡಿದು ಸುಖಮೆ ಪರಮಸುಖ ಸಂಪದಂ
ಸಲಿಸಿ ಸಲೆನೆರೆವ ಮುಕ್ತಿಯ
ನೊಲಿಸುವೆನಿನ್ನೊಲ್ಲೆನುಳಿದ ಪೆಂಡಿರ ನಣ್ಪಂ॥೪೬॥

ಎಂದಿಂತು ಬಹು ವಿಕಲ್ಪದ
ದಂದುಗದೊಳೆ ಬೆಳಗುಮಾಡಿ ಮೆಯ್ ಮುರಿದೆರ್ದಂ
ಬಂದು ತೊಡೆವೊಯ್ದು ಬೋಧಿಸಿ
ದಂದದಿನೆಸಗಿತ್ತು ಸುಪ್ರಭಾತಾತೋದ್ಯಂ॥೪೭॥

ಕೃತನಿತ್ಯದಾನನಾವೀ
ಕ್ಷಿತಘೃತನಾಸ್ಪೃಷ್ಟಕಪಿಳನೊಯ್ಯನೆ ಸಾರ್ದಂ
ಕತಿಪಯ ಪ,ರಿಚಿತ ಪರಿಜನ
ಚತುರ ವಚಃಪ್ರಚಯ ರುಚಿಯನರಸಿಯನರಸಂ॥೪೮॥

ಲಂಪಣನವೊಲೇನಾನುಮ
ಲಂಪಿನ ನಗೆನುಡಿಯ ನೆವದೆ ನೆಯ್ದಿಲ ಪೂವಿಂ
ದಂ ಪೊಯ್ಯೆ ಮೂರ್ಛೆವೋದಳ್
ಸಂಪಗೆಯಲರ್ಗಂಪು ಪೊಯ್ದ ತುಂಬಿಯ ತೆರದಿಂ॥೪೯॥

ಅಕಟಕಟ ನೊಂದಳೆತ್ತಿರೆ
ಸುಕುಮಾರಿಯನೆನುತುಮಿನಿತು ಕೊಂಕಿಂ ನುಡಿದಂ
ಪ್ರಕುಪಿತಚಿತ್ತಂ ಭೂನಾ
ಯಕನೇನಣಕಕ್ಕೆ ಸವಣನಂ ಸೈರಿಪನೇ॥೫೦॥

ದೈವದಿನೆಂತಕ್ಕಿಂದಿನ
ಸಾವೋಸರಿಸಿದುದು ಕರ್ಣಭೂಷಾವಳಿ ಭೂ
ಷಾವಳಿಯಾಗದೆ ಸೆಳೆದೊಡೆ
ಸಾವಲ್ಲಿಗೆ ಕಯ್ದವಾಯ್ತು ನೆಯ್ದಿಲ ಕುಸುಮಂ॥೫೧॥

ಪೋದಿರುಳಿನ ಕಿತ್ತಡಮಂ
ಮೂದಲೆಯಾಗಿಂತು ನುಡಿದೊಡರಿದುದನರಿದಾ
ಪಾದರಿಗೆ ಸತ್ತವೋಲಿರೆ
ಪೋದಂ ಬಗೆ ಕದಡಿ ತಾಯ ಪೊರೆಗೆ ನೃಪೇಂದ್ರಂ॥೫೨॥

ಮಗನೆ ಮೊಗಮಂ ನೀಡು ನೋಡುತ್ತುಮಳ್ಕರಳುರ್ಕೆಯಿಂ
ದುಗುವ ಮೊಲೆವಾಲ್ ಪುಣ್ಯಸ್ನಾನಾಂಬುವಾಗೆ ಪದಾಬ್ಜದಿಂ
ನೆಗಪಿ ಪಲವಪ್ಪಾಶೀರ್ವಾದಂಗಳಿಂದಮರ್ದಪ್ಪಿ ಜೋ
ಜೋಲ್ದುಗುವ ಕುರುಳಂ ತಿರ್ದುತ್ತಿಂತೆಂದಳಂದಿನ ಭಂಗಿಯಂ॥೫೩॥

ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾ
ರಭಸಮತಿಗೆ ಸಯ್ಪಂ ಪೇಳ್ದು ಧರ್ಮಕ್ಕೆ ತಂದೀ
ಶುಭಕಥನಮನತ್ಯಿನಂದದಿಂ ಕೇಳ್ವ ಭವ್ಯ
ಪ್ರಭುಸಭೆಗೆಸೆದಿರ್ಕುಂ ಮಂಗಳಂ ಶ್ರೀ ವಿಲಾಸಂ॥೫೪॥

ಮೂರನೆಯ ಅವತಾರ

ಕೊರತೆ ನಿನಗಿಲ್ಲದೇಕೆಂ
ದರಿಯೆ ನೀರೋಡಿ ನಿನ್ನ ತನುವಿನ ಬಣ್ಣಂ
ಬರುಗೊಳದವೊಲಾಯ್ತೀಕ್ಷಿಸಿ
ಮರುಗಿದುದರುನೀರ ಮೀನ್ ಬೊಲಿಂದೆನ್ನ ಮನಂ॥೫॥

ಎಂದು ಬೆಸಗೊಂಡ ತಾಯ್ಗೆ ಮ
ನಂದೋರದೆ ನೆವದಿನರಸನಿಂತುಸಿರ್ದಂ ಸುಯ್
ಕಂದಿಸಿದಧರಕ್ಕೆ ಸುಧಾ
ಬಿಂದುಗಳಂ ತಳಿಯೆ ದಂತಕಾಂತಿ ಪ್ರಸರಂ॥೬॥

ದೇವಿಯರ ಪರಕೆಯಿಂದೆನ
ಗಾವುದರೊಳ್ ಕೊರತೆಯಿಲ್ಲ ಪೋದಿರುಳೊಳ್ ಪೊಂ
ದಾವರೆಗೊಳದಂಚೆ ಕಳ
ಲ್ದಾವರೆಗೊಳದೊಳಗೆ ನಲಿವ ಕನಸಂ ಕಂಡೆಂ॥೭॥

ಗೋದಾಮೆಗಂಡ ನವಿಲಂ
ತಾದುದು ಕಾರ್ ಗಂಡ ಹಂಸನವೊಲಾದುದಲರ್
ವೋದ ಲತೆಗಂಡ ವಿರಹಿವೊ
ಲಾದುದು ದುರ್ನಯದ ಕಾಣ್ಕೆಗೆನ್ನಯ ಚಿತ್ತಂ॥೮॥

ವನಿತೆಯ ಕೇಡಂ ಜನಪತಿ
ಕನಸಿನ ನೆವದಿಂದೆ ಮರಸೆ ತಲ್ಲಣದಿಂ ತಾಯ್
ನನೆದಳ್ ಪೊಲ್ಲಮೆಯಂ ವಂ
ಚನೆಯೆಲ್ಲಿಯುಮೊಳ್ಪನಾಗಲೀಯದು ಕಡೆಯೊಳ್॥೯॥

ಅಡಸಿದ ನಲ್ಲಳ ತಪ್ಪಂ
ತಡವಿಕ್ಕಿದೊಡೇಳು ಭವದ ಕೇಡಡಸುವ ಕಿಳ್
ನುಡಿಯಂ ನುಡಿದಳ್ ತಾಯ್ ಒಂ
ದಡಸಿದೊಡೇಳಡಸಿತೆಂಬ ನುಡಿ ತಪ್ಪುಗುಮೇ॥೧೦॥

ದೇವ ಕನಸಿದು ಕರಂದೋ
ದೋಷಾಹಮಿಳಿಕಯ್ಯಲಾಗ ನಿನ್ನಸಿ ಮುಖದಿಂ
ದಾವಣಿಗುರಿಯಂ ತರಿದೊಡೆ
ದೇವಿ ಶುಭೇತರ ವಿನಾಶಮಂ ದಯೆಗೆಯ್ಗುಂ॥೧೧॥

ಮುಂತರಿಪೆ ತಾಯ ವಚನದೊ
ಳಂತು ಶುಭೇತರ ವಿನಾಶಶಬ್ದಮಿಳೇಶಂ
ಶಾಂತಂ ಪಾಪಮೆನುತ್ತುಂ
ಶಾಂತಮನಂಪೇಸಿ ಮುಚ್ಚಿಕೊಂಡಂ ಕಿವಿಯಂ॥೧೨॥

ಮೇಗಂ ಬಗೆವೊಡ ವಧೆ ಹಿತ
ಮಾಗದು ಮರ್ತ್ಯಂಗೆ ನಿತ್ಯಮೇ ಮಾನಸವಾಘಳ್
ಈಗಳೊ ಮೇಣ್ ಆಗಳೊ ಮೇಣ್
ಸಾಗುದುರೆಗೆ  ಪುಲ್ಲನಡಕಿ ಕೆಡುವನೆ ಚದುರಂ ||೧೩||

ಎಂದೊಡೆ ಮುಶಿಲಂಬಿಕೆಯಯಿಂ
ತೆಂದಳ್ ನಿಜಮಪ್ಪ ಮೋಹದಿಂ ಸಲುಗೆಯಿನೆಯ್
ತಂದಳ್ ನಾಡೆ ನೃಪೇಂದ್ರನ
ಮುಂದಣ ಗತಿಗಪ್ಪ ಬಟ್ಟೆಯಂ ಕಟ್ಪುವವೊಲ್ ||೧೪||

ಪರಿಹರಿಪೆಯೆಮ್ಮ ನುಡಿಯಂ
ಗುರುವಚನಮಲಂಘನೀಯಮೆನ್ನದೆ ನೀನಾ
ದರದಿಂ ಕೈಕೊಳ್ ಧರ್ಮದೊ
ಳರಸುಗಳೇಂ ಶಾಂತಿಯೆಂದೊಡನುಸರಿಸರೆ ಪೇಳ ||೧೫||♡

ಇವು ಧರ್ಮಮೆಂದು ಬಗೆವೊಡ
ಮವಿವೇಕದೆ ಶಾಂತಿಮಾಡೆ ಬೇತಾಳಂ ಮೂ
ಡುವ ತೆಱದೆ ಹಿಂಸೆಯಿಂ ಮೂ
ಡುವ ಮುಂತಣ ಕೇಡನೆಂತು ಕಳಿವೆಂ ಬಳಿಯಂ ||೧೬||

ಜೀವದಯೆ ಜೈನಧರ್ಮಂ
ಜೀವಹಿತಂ ನಂಬುವರ್ಗೆ ಹಿಂಸೆಯ ಮೋಹಂ
ಭಾವಿತಮೆ ತಪ್ಪಿನುಡಿದಿರ್
ಕಾವರೆ ಕಣೆಗೊ ಘಳ್ವೊಡಬ್ಬೆ ಬಾರಿಪರೊಳರೇ||೧೭||

ಆದೊಡೆ ಪಿಟ್ಟಿನ ಕೋಳಿಯ
ನಾದೊಡಮಿಂದೊಂದನಿಕ್ಕವೇಳ್ಪುದು ಮಿಕ್ಕಂ
ದಾ ದೇವಿಗೆನ್ನನಿಕ್ಕಿಯು
ಮೀ ದುರಿತಮನಿಂದು ಮಗನೆ ರಿಹರಿಸದಿರೆಂ||೧೮||

ಎನೆ ತಾಯ ಮೋಹದಿಂದಂ
ಜನಪನೊಡಂಬಟ್ಟು ಮನದೊಳಿಂತೆಂದಂ ಭಾ
ವನೆಯಿಂದಮಪ್ಪುದಾಸ್ರವ
ಮೆನಗಿನ್ನೆಂತ ಪಾಪಮಿದಿರ್ ವಂದಪುದೋ ||೧೯||

ಮಾಡದೊಡೆ ತಾಯ್ಗೆ ಮರಣಂ
ಮಾಡಿದೊಡೆನ್ನೊಂದು ಗತಿಗೆ ಕೇಡಿಂದೇನಂ
ಮಾಡವೆನೆಂದಾಂದೋಳಮ
ನಾಡೆ ಮನಂ ತಮಮನಪ್ಪ್ಪುಕಯ್ದನಿಳೇಶಂ ||೨೦||

ಆ ನೃಪತಿ ಬಳಿಕ ತಾಯುಂ
ತಾನುಂ ಚಂಡಿಕೆಯ ಪೂಜೆಗೆಂದೆಳ್ತಂದಂ
ನಾನಾವಿಧದರ್ಚನೆಯಿಂ
ಮಾನೋಮಿಯ ಮುಂದೆ ಬಂದ ಭೌಮಾಷ್ಟಮಿಯೊಳ್ ||೨೧||

ಕರಮೆಸೆಯೆ ಸಮೆದು ಬಂದುದು
ಚರಣಾಯುಧಮದಱ ಚಿತ್ರಪರಿಶೋಭೆಗೆ ಬೆಂ
ತನೊರಂದಾಶ್ರಯಿಸಿರ್ದುದು
ಪರಸಿದಳುಗ್ಗಡಿಸಿ ಜನನಿ ಪುತ್ರಂ ಪೊಯ್ದಂ ||೨೨||卐

ತಲೆಯಿಂ ಕುಕ್ಕೂಕೂ ಎಂ
ಬುಲಿ ನೆಗೆದದು ಕೂಗಿ ಕರೆವ ದುರಿತಂಗಳ ಬ
ಲ್ಲುಲಿಯೆನೆ ಪಿಟ್ಟಿನ ಕೋಳಿಯ
ತಲೆಯಂ ಪಿಡಿವಂತಿರಟ್ಟಿ ಪಾಱಿದುದಿನಿಸಂ||೨೩||

ಪೊಡೆಯೆ ಕೃಕವಾಕು ನಿನದಂ
ಬಿದಡದುಣ್ಮುತಿರಲ್ಕೆ ಕಯ್ಯ ಬಾಳ್ ಬೀಳ್ತರೆ ಪೊಯ್
ವಡೆದಂತೆ ಪಂದೆಯಂ ಪಾ
ವಡರ್ದಂತಾಗಿರೆ ಯಶೋಧರಂ ಬೆಱಗಾದಂ ||೨೪||

ಏಕೆ ಕನಸೆಂದು ನುಡಿದೆನಿ
ದೇಕಂಬಿಕೆ ಬಲಿಯಶೊಡ್ಡಿದಳ್ ಕೂಗಿದುದೇ
ಕೀ ಕೃತಕ ತಾಮ್ರಚೂಡನಿ
ದೇಕೆಂದಾರಱಿವರಯ್ಯ ವಿಧಿ ವಿಳಸನಮಂ ||೨೫||

ಅಮೃತಮತಿಯೆಂಬ ಪಾತಕಿ
ಯ ಮಾಯೆ ಬನಮಾಯ್ತು ಚಂದ್ರಮತಿಮಾತೆಯ ಮಾ
ತೆಮಗೆ ಬಲೆಯಾಯ್ತು ಹಿಂಸನ
ಮಮೋಘ ಶರಮಾಯ್ತು ಕೆಡೆದುದಾತ್ಮಕುರಂಗಂ ||೨೬||

ಎಂದು ಮನಂ ಮಱುಗುವಿನಂ
ನೊಂದಲ್ಲಿ ತಳರ್ದು ಮನೆಗೆ ಉಬ್ಬೆಗಮೆಳೆದೊ
ಯ್ವಂದದೆ ಬಂದೀ ರಾಜ್ಯದ
ದಂದುಗಮೇಕೆಂದು ತೊಱೆಯಲುದ್ಯತನಾದಂ ||೨೭||

ಪರಿವಾರಮಂ ಪ್ರಧಾನರ
ನಿರಿಸಿ ಯಶೋಮತಿಗೆ ರಾಜ್ಯಮಂ ಕೊಟ್ಟು ಯಶೋ
ಧರನಿಂತು ತಪಕೆ ನಡೆಯ
ಲ್ಕಿರೆ ಮೃತ್ಯುವಿನಂತೆ ಅರಸಿ ಬಂದಿಂಭತೆಂದಳ್ ||೨೮||

ದೇವರ ಬಳಿಯೊಳೆ ಬರ್ಪೆಂ
ಪೂವಿನ ಸೌರಭದ ಮಾಳ್ಕೆಯಿಂ ಗಮನ ಪ್ರ
ಸ್ತಾವನೆಯೊಳಿಂದು ನೀಮುಂ
ದೇವಿಯುಮಾರೊಗಿಸಲಕ್ಕೆ ಎನ್ನರಮನೆಯೊಳ್ ||೨೯||♡

ಎನೆ ಜನಪತಿ ಮನಮಲ್ಲದ
ಮನದೊಳೊಡಂಬಟ್ಟು ಬಂದು ತಾಯೊಡನುಣೆ ನಂ
ಜಿನ ಲಡ್ಡುಗೆಯಂ ಮಾಡಿದು
ದನುಣ್ಮಹಾರಾಜ ಎಂಬಿನಂ ಸವಿದುಂಡಂ||೩೦||

ಅರಸನ ಮೂದಲೆ ಮನದೊಳ
ಗಿರೆ ಮೇಳಿಸಿಕೊಂಡು ಬಂದು ಪಾತಕಿ ಕೊಂದಳ್
ಬೆರಗಿಂ ಗಂಡನನಾ ಸ್ತ್ರೀ
ಚರಿತಮದೇಂ ಕಳೆಯಲರಿದು ಪೆಂಡಿರ ಕೃತಕಂ ||೩೧||

ಆ ಪಕ್ವಾನ್ನಮೆ ಮೃತಿಗು
ದ್ದೀಪನ ಪಿಂಡದವೊಲಾಗೆ ಅಘದಿಂ ಬೀಜಾ
ವಾಪಮೆನೆ ಜನ್ಮಲತೆಗೆ ಕ
ಲಾಪಿಸ್ತ್ರೀಯುದರದಲ್ಲಿ ವಿಂಧ್ಯದೊಳೊಗೆದಂ ||೩೨||

3 ಕಾಮೆಂಟ್‌ಗಳು: