ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಬುಧವಾರ, ಜೂನ್ 21, 2017

ಪಂಪಮಹಾಕವಿ ವಿರಚಿತಂ ಆದಿ ಪುರಾಣಂ

ಪಂಪಮಹಾಕವಿ ವಿರಚಿತಂ
ಆದಿ ಪುರಾಣಂ

ಪ್ರಥಮಾಶ್ವಾಸಂ
ಶ್ರೀದೇವೇಂದ್ರಮುನಿಂದ್ರವಂದಿತಗುಣವ್ರಾತಂ ಜಗತ್ಸ್ಮಿಮಿ ಸಂ
ದಾದಿಬ್ರಹ್ಮನಗಾಧಬೋಧನಿಳಯಂ ದುರ್ವಾರಸಂಸಾರವಿ
ಚ್ಛೇದೋಪಾಯುಕ್ತಸೂಕ್ತಿ ವೃಷಮಾರ್ಗಾಗ್ರೇಸರಂ ಪಾಪಹೃ
ತ್ಪಾದಾಬ್ಜಂ ದಯೆಗೆಯ್ವನಕ್ಕೆಮಗೆ ಮುಕ್ತಿಶ್ರೀಸುಖವಾಪ್ತಿಯಂ ||೧||

ವರದಂ ಪದ್ಮಾಂಕಿತಂ ತೋಳೆರಡು ನಿಶಿತವಜ್ರಪ್ರಭಾಭಾಸುರಂ ತೋ
ಳೆರಡುದ್ಯಚ್ಛಕ್ರೋಜ್ಜ್ವಳತರತರಳಜ್ಜೋತಿ ತೋಳೆಂಟಗುರ್ವಾ
ಗಿರೆ ಬಣ್ಣಂ ಪೊನ್ನಬಣ್ಣಕ್ಕೆಣೆಯೆನೆ ಗರುಡಂ ವಾಹಮಾಗಿರ್ಪ ಚಕ್ರೇ
ಶ್ವರಿ ಭಾಸ್ವದ್ಧರ್ಮಚಕ್ರಾಕ್ರಮಿಗಳನಲೆದಾಟಿಕ್ಕೆ ವಿಕ್ರಾಂತದಿಂದಂ ||೭||

ಪರಮಜಿನೇಂದ್ರವಾಣಿಯ ಸರಸ್ವತಿ ಬೇಱದು ಪೆಣ್ಣರೂಪಮಂ
ಧರಿಯಿಸಿ ನಿಂದುದಲ್ತದುವೆ ಭಾವಿಸಿಯೋದುವ ಕೇಳ್ವ ಪೂಜಿಪಾ
ದರಿಸುವ ಭವ್ಯಕೋಟಿಗೆ ನಿರಂತರಸೌಖ್ಯಮನೀವುದಾನದ
ರ್ಕೆರೆದಪೆನಾ ಸರಸ್ವತಿಯೆ ಮಾಳ್ಕೆಮಗಿಲ್ಲಿಯೆ ವಾಗ್ವಿಳಾಸಮಂ ||೯||

ಭಾಷಾವಿದರ್ಕವಿತ್ವ ವಿ
ಶೇಷಜ್ಞರ್ನಿಕಷರಪ್ಪೊದಪ್ಪುದು ಸಭೆಯೊಳ್
ಮಾಷಮುಖದಂತೆ ದೋಷಗ
ವೇಷಣಪರರಪ್ಪರೆಂದೊಡದು ತೆಗಳಲ್ತೇ ||೨೧||

ಧಿಷಣರ ಕೃತಿಗಳೊಳೆಸೆವಭಿ
ಲಷಿತಗುಣಂಗಳನೆ ಬಿಸುಟು ಮಾತ್ಸರ್ಯಮಹಾ
ವಿಷಮಮತಿಯಿಂದೆ ದೋಷಾ
ವಿಷಮನೆ ಪೊರ್ದಿರ್ಪುವಲ್ತೆ ಕುಕವಿಬಕಂಗಳ್ ||೨೨||

ಇರು ಮರುಳೆ ಶುಷ್ಕವೈಯಾ
ಕರಣಂಗಂ ಶುಷ್ಕತಾರ್ಕಿಕಂಗಂ ಬೆಳ್ಳ
ಕ್ಕರಿಗಂಗಂ ವಿಷಯಮೆ ಕಾ
ವ್ಯರತ್ನಮತಿಚತುರಕವಿಕದಂಬಕವಿಷಯಂ ||೨೪||

ಗುರು ದೇವೇಂದ್ರಮುನೀಂದ್ರನಿಂದ್ರನಮಿತಂ ದೇವಂ ಕಥಾನಾಯಕಂ
ಪುರುದೇವಂ ಕಥೆಯುಂ ತದಾದಿಪುರುಷಪ್ರಸ್ತುತ್ಯಜನ್ಮಾಳಿಬಂ
ಧುರಮೆಂದಂದೆ ಮದೀಯವಾಗ್ವಿಭವವಿನ್ಯಾಸಂ ಬಲಂಬೆತ್ತುದಿ
ನ್ನಿರು ಬಲ್ಲಿತ್ತರ ಕೋಡು ಕೂರಿದನಂತಿಂತುಂತೆನಲ್ಬರ್ಕುಮೆ ||೨೫||

ಇದು ನಿಚ್ಚಂ ಪೊಸತರ್ಣವಂಬೊಲತಿಗಂಭೀರಂ ಕವಿತ್ವಂ ಜಗ
ಕ್ಕದರಿಂದಂ ಕವಿತಾಗುಣಾರ್ಣವನಿಳಾಲೋಕೈಕವಿಖ್ಯಾತನ
ಭ್ಯುದಯಪ್ರಾಪ್ತಿನಿಮಿತ್ತಮುತ್ತಮಯಶಂ ಸಂಸಾರದೊಳ್ಸಾರಮ
ಪ್ಪುದರಿಂ ಧರ್ಮಮದಂ ನಿಮಿರ್ಚುವುದಱಿಂ ಸಂಸಾರಸಾರೋದಯಂ ||೨೭||

ಅತಿಸುಭಗೆಗೆ ಸಂದ ಸರ
ಸ್ವತಿಗೀತನ ಲಲಿತವಾಗ್ವಿಳಾಸಮೆ ದಲಲಂ
ಕೃತಿಯವೊಲೆಸದಪುದು ಜಗ
ತ್ಪ್ರತೀತನೀತನೆ ಸರಸ್ವತೀಮಣಿಹಾರಂ ||೨೮||

ಕದಳೀಗರ್ಭಶ್ಯಾಮಂ
ಮೃದುಕುಟಿಲಶಿರೋರುಹಂ ಸರೋರುಹವದನಂ
ಮೃದುಮಧ್ಯಮತನು ಹಿತಮಿತ
ಮೃದುವಚನಂ ಲಲಿತಮಧುರಸುಂದರವೇಷಂ ||೨೯||

ವನಿತಾಕಟಾಕ್ಷಕುವಲಯ
ವನಚಂದ್ರಂ ಯುವತಿಜಘನಕಾಂಚೀರತ್ನಂ
ಸ್ತನಭರವಿನಮ್ರಗಣಿಕಾ
ಸ್ತನತಟಹಾರಂ ಸರಸ್ವತೀಮಣಿಹಾರಂ ||೩೧||

ಕೇರಳವಿಟೀಕಟೀಸೂ
ತ್ರಾರುಣಮಣಿ ಮಲಯಯುವತಿದರ್ಪಣನಾಂಧ್ರೀ
ನೀರಂಧ್ರಬಂಧುರಸ್ತನ
ಹಾರನುದಾರಂ ಸರಸ್ವತೀಮಣಿಹಾರಂ||೩೨||

ಪುರುದೇವಾದಿಜಿನೇಂದ್ರಮಾಳೆ ಗಣಭೃತ್ಸಂತಾನಮೆಂದೀಪರಂ
ಪರೆಯಿಂ ವಿಶ್ರುತವೀರಜಿನಸೇನಾಚಾರ್ಯಪರ್ಯಂತಮಾ
ಗಿರೆ ಬಂದೀಕಥೆ ಗುಣ್ಪುವೆತ್ತುದವರುಂ ಜ್ನಾನರ್ಧಿಸಂಪನ್ನರೆಂ
ದಿರದಾ ಧೃಷ್ಟನೆನೀಕಥಾಬ್ಧಿಯುಮನೇನೀಸಲ್ಮನಂದಂದೆನೋ ||೩೫||

ಇದುವೆ ಸುಕವಿಪ್ರಮೋದ
ಪ್ರದವಿದುವೆ ಸಮಸ್ತಭವ್ಯಲೋಕಪ್ರಮದ
ಪ್ರದಮೆನೆ ನೆಗಳ್ದಾದಿಪುರಾ
ಣದೊಳಱಿವುದು ಕಾವ್ಯಧರ್ಮಮಂ ಧರ್ಮಮುಮಂ ||೩೮||

ಪ್ರಾಣಿಹಿತಮಂ ವಿನೇಯ
ಪ್ರೀಣನಕರಮಂ ಜಗತ್ತ್ರಯಪ್ರಕಟಿತಕ
ಲ್ಯಾಣಮನೀನೆಗಳ್ದಾದಿಪು
ರಾಣಮನಪರಿಮಿತಭಕ್ತಿಯಿಂ ವಿರಚಿಸುವೆಂ ||೪೨||

ನನೆಯನೆ ಪೇಱಿ ಕೆಂದಳಿರೊಳೆಯ್ದೆ ಬಳಲ್ದೆಳಮಾವು ಬಂದ ಮಾ
ವನೆ ಮಱೆಗೊಂಡು ಬಗ್ಗಿಸುವ ಕೋಗಿಲೆ ಕೋಗಿಲೆಯಿರ್ಕೆದಾಣದೊಳ್
ಜಿನುಗುವ ತುಂಬಿ ತುಂಬಿಯೊಳರಲ್ದಲಲರೆಂಬಿವಱಿಂ ಬಸಂತರಾ
ಜನ ಮನೆಯಂತೆ ಕಣ್ಗೆಸೆದು ತೋರುಗುಮಲ್ಲಿಯ ನಂದನಾಳಿಗಳ್ ||೬೫||

ಚತುರ್ದಶಾಶ್ವಾಸಂ

ಅಱುವತ್ತು ಸಾಸಿರಂಗಳ್
ನೆರೆದುವು ಬರಿಸಂಗಳೆಂದು ದಿಗ್ವಿಜಯದೊಳ
ಳ್ಕಱಿನೊಳಯೋಧ್ಯೆಗೆ ಮೊಗಸಿದ
ನಱಿಕೆಯ ಪರೆ ಪಲವುಮೆಸೆಯೆ ಭರತಮಹೀಶಂ ||೨||

ವಚನ ||
ಅಂತು ಕೆಲವು ಪಯಣಂಗಳಿಂದಂ ನಿಜಾನ್ವಯರಾಜಧಾನಿಯನಯೋಧ್ಯಾಪುರಮನೆಯ್ದಿದಾಗಳ್

ಹತವೈರಿಕ್ಷತ್ರಚಕ್ರಂ ಭಯಚಕಿತಜಗದ್ವೀರಚಕ್ರಂ ವಿನಮ್ರ
ಕ್ಷಿತಿಚಕ್ರಂ ದೀಪದೀಪ್ತಿಪ್ರತಿಹತದಿನಕೃಚ್ಚಕ್ರತೀವ್ರಾಂಶುಚಕ್ರಂ
ಜಿತದಿಕ್ಚಕ್ರಂ ಪ್ರಭಾಪ್ರಜ್ವಳಿತ ದಶದಿಶಾಚಕ್ರಮುಗ್ರಪ್ರತಾಪೋ
ರ್ಜಿತತೇಜಶ್ಚಕ್ರಮಿರ್ದತ್ತೊಳಪುಗದೆ ಪುರೋಪಾಂತದೊಳ್ ಚಕ್ರಿಚಕ್ರಂ ||೩||

ವ|| ಅಂತು ಚಕ್ರರತ್ನಮಯೋಧ್ಯಾಪುರಮಂ ಪುಗದೆ ತಱುಂಬಿನಿಂದುದಂ ಕಂಡುಮದಂ
ರಕ್ಷಿಸುವ ಯಕ್ಷಸಹಸ್ರಂಬೆರಸು ಗಣಬದ್ಧ ದೇವರೆಲ್ಲಂ

ಪುರಗೋಪುರದೊಳಗಂ ಚ
ಕ್ರರತ್ನಮಿಂತೇಕೆ ಪುಗದೆ ಮಾಣ್ದಿರ್ದುದೊ ಮ
ಚ್ಚರಿಪದಟನಿನ್ನದಾವನೊ
ಭರತೇಶ್ವರಚಕ್ರವರ್ತಿಗಿನ್ನುಂ ಜಗದೊಳ್ ||೪||

ಆವಂಗಕಾಲಚಕ್ರಮ
ನೋವದೆ ಮಾಡಲ್ಕೆ ಚಕ್ರಮಿದು ಬಗೆದುದೊ ಶೌ
ರ್ಯಾವಿರ್ಭೂತದವಾನಳ
ನಾವನ ಚತುರಂಗಬಲಮನಿಂ ಸುಟ್ಟಪುದೋ ||೫||

ಆತಂಗೆ ಚಕ್ರಿವೇಳ್ಕುಮೆ
ಪೋ ತಳ್ತಿಱಿದಾಮೆ ಗೆಲ್ವಮೆಂದನಿಬರುಮು
ತ್ಪಾತಮರುದಾಭಿಘಾತೋ
ದ್ಭೂತಪಯೋನಿಧಿಗಳಂತೆ ಮಸಗಿದರಾಗಳ್ ||೬||

ವ|| ಆ ಪ್ರಸ್ತಾವದೊಳ್ ಚಕ್ರೇಶ್ವರಂಗೆ ಚಕ್ರರತ್ನಸ್ಖಲನಮಂ ಪತಾಕಿನೀಚಕ್ರಪ್ರಧಾನಪ್ರಭು
ಗಳಱಿಯೆ ಬಿನ್ನಪಂಗೈದೊಡಸ್ಖಲಿತಗತಿಯಪ್ಪ ಚಕ್ರರತ್ನಸ್ಖಳನಕ್ಕೆ ನಾಡೆಯುಂ ಚಕ್ರಿ ಮನಸ್ಖಳನಮಾಗೆ
ವಿಸ್ಮಯಂಬಟ್ಟು ಪುರೋಹಿತರತ್ನಮಂ ಬರಿಸಿ

ಪದಿನಾಲ್ಕು ರತ್ನಕ್ಕಂ
ಮೊದಲೆನಗೀಚಕ್ರರತ್ನಮಿದರಿಂ ಮೇಲಾ
ವುದು ದೈವಮೆನಗಯೋಧ್ಯೆಯ
ನಿದು ಪೊಗದೆ ತರುಂಬಿನಿಂದ ಕಾರಣಮೇನೋ ||೭||

ಆ ಪೂರ್ವದಕಕ್ಷಿಣಾಪರ
ಕೂಪಾರದ ರಜತಗಿರಿಗುಹಾದ್ವಯದೆಡೆಯೊಳ್
ಪೋಪಂದುಮಣಮೆ ತೊಡಱದು
ದೀ ಪುರಗೋಪುರದೊಳೇಕೆ ತೊಡರ್ದುದೊ ಚಕ್ರಂ ||೮||

ಎನಗಮರಾತಿಗಳೊಳರೆಂ
ಬಿನಿತು ಪರಾಭವಮನೀಗಳೀಚಕ್ರಂ ಸೂ
ಚನೆಗೈದುದಿನ್ನಾವಂ
ತನಗಿರಲೆಡೆಮಾಡಿದಪ್ಪನಂತಕಮುಖಮಂ ||೯||

ಇದು ಪಗೆವರುಳ್ಳುದಂ ತೋ
ಱಿದಪುದು ನಿನಗರಿನೃಪರ್ಕಳಿಲ್ಲದಿದಿಂತಿರ್ಪು
ದೆ ದುರ್ನಿರೀಕ್ಷ್ಯಮಿನಬಿಂ
ಬದಂತೆ ಪಜ್ಜಳಿಸಿ ಬಾಗಿಲೊಳ್ ಪುರವರದಾ ||೧೩||

ನಿನಗರಸ ಬಹಿರ್ಮಂಡಳ
ಮನೆ ಸಮಱಲ್ಕಿನಿತುಬರಿಸಮುಂ ಪೋದುವು ಕೇ
ಳಿನಿಸಂತರ್ಮಂಡಲಶೋ
ಶೋಧನಮುಂಟೆಂದುಱೆಸದದುಮನಿನ್ನಱಿಪುವೆವೇ ||೧೫||

ಪುರುತನಯಂ ತಾನಾಮುಂ
ಪುರುತನಯರೆಮೆಮಗೆ ತಂದೆಯಿತ್ತವನಿತಳಂ
ಪೊರೆಯುಂಟೆ ತಮಗೆ ಭಾಗ್ಯಾ
ನುರೂಪದಿಂ ಬಾಳ್ವೆಮೆಱಗೆವೆಂಬತಿಮದದಿಂ ||೧೬||

ನಿನ್ನನುಜರನಿಬರುಂ ಮಾ
ನೋನ್ನತರಣಮೆಱಗರವರೊಳಗ್ಗಳದದಟಂ
ತನ್ನಭಿಮಾದ ಭುಜಬಲ
ದುನ್ನತಿಯನೆ ಮೆಱೆವ ಬಾಹುಬಲಿ ಮುನ್ನೆರಗಂ ||೧೭||

ಆದಿಬ್ರಹ್ಮರ ಕೊಟ್ಟೀ
ಮೇದಿನಿಗಾನೊಡೆಯನಾತನರಸಿನಿವಿರಿದಿಂ
ದಾದೊಡಮೇನೆನಗೆಂಬ ಮ
ದೋದಯದೊಳ್ ದೇವ ಬಾಹುಬಲಿ ಬಲ್ದಿರ್ದಂ ||೧೮||

ಭರತೇಶ್ವರ ನಿನ್ನ ಪದಾಂ
ಬುರುಹಕ್ಕವರೆಱಗಿ ಸುಖಮನನುಭವಿಸುಗೆ ಮೇಣ್
ಪುರುಪರಮೇಶ್ವರನ ಪದಾಂ
ಬುರುಹಕ್ಕವರೆಱಗಿ ತಪಮನನುಭವಿಸುಗೆ ಮೇಣ್ ||೨೧||

ಬಗೆಯಳಗೆ ಬಳೆದ ಭೀತಿಯೆ
ಮಿಗೆ ಭವದಾಸ್ಥಾನಭೂಮಿಯಂ ಪುಗುಗೆ ವನಂ
ಬುಗುಗಲ್ಲದಂದು ಪೆಱೆತಡೆ
ಪುಗುವೆಡೆಯಿಲ್ಲವರ್ಗೆ ಬೆಸಸು ಶಾಸನಹರರಂ ೨೨||

ಎನೆ ಬಳೆದ ಮುನಿಸಿನೊಳ್ ಕೆ
ಚ್ಚನಾದ ಕಣ್ ದೆಸೆಗೆ ಕೆಂಪನೊದವಸಿದುದು ದಿ
ಗ್ವನಿತೆಯರ್ಗೆ ರಕ್ತ ಬಲಿಯಂ
ಮನಕ್ಕೆವರೆ ಬಳೆದ ಮುನಿಸೆ ಕುಡುವಂತಾಗಳ್ ||೨೩||

ವಿಕಸಿತನಾಸಾಪುಟನತಿ
ವಿಕಂಪಿತಾ ತಾಮ್ರದಶನವಸನಂ ಬದ್ಧ
ಭ್ರುಕುಟಿಪುಟಂ ಭರತೇಶ್ವರ
ನಕಾಲಯಮರಾಜಲೀಲೆಯಂ ಕೈಕೊಂಡಂ ||೨೪||

ಏನೇನೋ ಮದನುಜರೆನ
ಗಾನತರಣಮಾಗದಿರ್ದರಾಮದಮವರ್ಗೇ
ನೇನೇತಱೊಳಾದುದನಿನಿ
ಸಾನುಂ ಬೇಗದೊಳೆ ಕಳೆದು ತೋಱೆನೆ ರಣದೊಳ್ ||೨೫||

ಎನಿಬರರಸುಗಳುಮೆಱಗಿದೊ
ಡೆನಗೇವಂದಪುದೊ ಬಾಹುಬಲಿ ಪೊಱಗೆನೆ ಪೇ
ಳಿನಿತುಂ ಪುರಮೇವುದೊ ಪೌ
ದನಪುರಮೆನ್ನಾಳ್ಕೆಗಿಂತು ಪೊಱಗೆನಿಪಾಗಳ್ ||೨೮||

ಏವನೆಮಗೆಂಬ ಶೌರ್ಯಮ
ದಾವಷ್ಟಂಭದೊಳವಂದಿರಿಂತುಱದಿರೆ ಪೇ
ಳಾವುದು ಬಾಯ್ಕೇಳಿಸಿಯುಮಿ
ದೇವುದೊ ಷಟ್ಕಂಡಮಂಡಿತಂ ಭೂವಳಯಂ ||೨೯||

ಎಂದೊಡೆ ಪುರೋಹಿತಂ ನಿನ
ತೊಂದೋಲೆಗೆ ತೀರ್ವದೊಂದುಮನೆವಾರ್ತೆಗಿದೇ
ನೆಂದರಸ ಬಳೆಯೆ ನುಡಿದಪೆ
ಯೆಂದಟ್ಟಲೆವೇಳ್ದನವರ್ಗೆ ಶಾಸನಹರರಂ ||೩೦||

ಎನಗೊರ್ವಂಗುಪಭೋಗ್ಯಮಲ್ತು ವಸುಧಾಸಾಮ್ರಾಜ್ಯಮೋರಂತೆ ನಿ
ಮ್ಮನಿಬರ್ಗಂ ಪಿರಿಯಣ್ಣನೇಂ ಜನಕನೇನೆಂಬೊಂದು ಕೊಂಡಾಟದಿಂ
ವಿನಯಂ ಸಲ್ವುದು ತಾಮುಮಾಮುಮೊಡನಿರ್ಪಂ ಬರ್ಪುದೆಂಬೀಶಶಾ
ಸನಮಂ ನೆತ್ತಿಯೊಳಾಂತು ಬನ್ನಿಮೆರಗಿಂ ಚಕ್ರೇಶಪದಾಬ್ಜದೊಳ್ ||೩೧||

ವ|| ಎಂದು ನುಡಿದ ದೂತನ ನುಡಿಯುಮಂ ರಾಜಾದೇಶಮುಮನವಧಾರಿಸಿ ಬಂದ ದೂತನಂ
ಮನ್ನಿಸಿ ಸಂತೋಷಂಬಡಿಸಿ ಪೋಗಲ್ವೇಳ್ದು

ಪಿರಿಯಣ್ಣಂ ಗುರು ತಂದೆಯೆಂದೆಱಗುವಂ ಮುನ್ನೆಲ್ಲಮಿಂತೀಗಳಾ
ಳರಸೆಂಬೊಂದು ವಿಭೇದಮಾದೊಡೆಱಕಂ ಚಿಃ ಕಷ್ಟಮಲ್ತೇ ವಸುಂ
ಧರೆಗಯ್ಯಂ ದಯೆಗೆಯ್ಯೆ ಮುಂ ಪಡೆದುದರ್ಕಿಂತೀತನೊಳ್ ತೋಟ್ಟ ಕಿಂ
ಕರಭಾವಂ ನಮಗಕ್ಕಿಗೊಟ್ಟು ಮಡಗೂಳುಣ್ಬಂದಮಂ ಪೋಲದೇ ||೩೨||

ಪೊಡೆವಟ್ಟು ದೇವ ನೀಂ ಕುಡೆ
ಪಡೆದೆವಿಳಾತಳಮನೊಡನೆ ಪುಟ್ಟಿದ ಮೇಳ
ಕ್ಕಡಿಗೆಱಗಿಮೆಂದು ಭರತಂ
ಜಡಿವಂ ನಿನಗೆಱಗಿ ಪರಮ ಪೆಱರ್ಗೆಱಗುವೆವೇ ||೩೬||

ಭವದಂಘ್ರಿಕಮಳರಜದಿಂ
ಪವಿತ್ರಮಾದೆಮ್ಮ ಮಕುಟಮೆಱಗದು ಪೆಱರ್ಗೆಂ
ಭವಭಯಹರ ಭರತನನೆಮ
ಗವಯವದೆಱಗಿಸುವ ತಪಮನೀಗಳೆ ದಯೆಗೈ ||೩೭||

ಭರತಂಗೆಱಗುವರೆಂಬಿದೆ
ಪರಿಭವಮೆಮಗಿಂತು ಮಾನಭಂಗಂ ಬರೆ ಬ
ರ್ಪರಸೇವುದೆಂದು ಪೂಣ್ದರ್
ಪರಮತಪೋಭರಮನನಿಬರುಂ ಪುರುತನಯರ್ ||೩೯||

ಎನಗನುಜರಾಗಿಯುಂ ಚಲ
ದೆನಗೆಱಗದೆ ಪೋಗಿ ಭುವನಗುರುಗೆಱಗಿದರಂ
ತನಿಬರುಮವಱಿಂದಗ್ಗಳ
ಮೆನೆ ನೆಗಳ್ದ ಬಾಹುಬಲಿಯನೆಂತೆಱಗಿಸುವೆಂ ||೪೧||

ಖರಕಿರಣಸ್ಫುರಿತಕ್ಕಿದಿ
ರುರಿವಂತಿರೆ ಸೂರ್ಯಕಾಂತಮೆನ್ನೀತೇಜ
ಸ್ಫುರಿತಕ್ಕೆ ಸೆಣಸಿನೊಳ್ ಮಾ
ಱುರಿಗುಂ ಸೈರಿಸದು ತೇಜಮಾ ಭುಜಬಲಿಯಾ ||೪೨||

ಅದಱಿಂದಮಾತನಂ ಸಾ
ಮದಿಂದಮಳವಡಿಸಿ ನೋಡುವೆಂ ಸಾಮದೊಳಂ
ಪದವಡದೊಡೆ ಬಳಿಕಿರ್ದ
ಪ್ಪುದಲ್ತೆ ಪದವಡಿಸಲೆನ್ನ ಬಯ್ಕೆಯ ದಂಡಂ||೪೩||

           ||ಹರಿಣೀ ವೃತ್ತಂ ||

ಮರಕತನಗಂ ದಿವ್ಯಂ ಮರ್ತ್ಯೋತ್ತಮಾಕೃತಿಯೆಂಬಿನಂ
ವರಚಿಸಿದನಿಂತಾದಿಬ್ರಹ್ಮಂ ಹರಿನ್ಮಣೀವರ್ಣನಂ
ನೆರೆದುದಿದು ಮೇಣ್ ಕ್ಷಾತ್ರಂ ತೇಜಂ ಧರಾಧಿಪರೂಪದಿಂ
ಧರೆಗೆನುತುಮಾದೂತಂ ಕಣ್ಣುಳ್ಕೆ ನೋಡಿ ಕುಮಾರನಂ ||೪೪||

ಪುರುಪರಮೇಶ್ವರಪುತ್ರಂ
ಭರತೇಶ್ವರಚಕ್ರವರ್ತಿಗನುಜನೆನಲ್ ಸುಂ
ದರರೂಪನೀಕುಮಾರನೆ
ದೊರೆ ಚಕ್ರಿಗಮೆಸೆಯದಿನಿತು ತೇಜಸ್ಫ್ಸುರಿತಂ ||೪೫||

ಮತ್ತಪ್ಪುದೆನಲೊಡಂ ಮಾಣ್
ಮತ್ತತ್ತಣ ಕಾರ್ಯಮಱಿಯಲಾದುದು ಪೇಳ್ ಭೂ
ಪೋತ್ತಮನಿರ್ದನೆ ಸುಖದಿನು
ದಾತ್ತಯಶಂ ನೆಗಳೆ ನೆಗಳ್ದಯೋಧ್ಯಾಪುರದೊಳ್ ||೪೭||

ಎಂತಾನುಂ ನೆನೆದಂ ಬಹು
ಚಿಂತಂ ಚಕ್ರೇಶನೆಮ್ಮ ದಿಗ್ವಿಜಯಮುಮಾ
ದಂತೆಡಱದೆಯ್ದೆ ನಡೆದುದೆ
ಸಂತಮೆ ದಕ್ಷಿಣಭುಜಕ್ಕೆ ಭೂವಲ್ಲಭನಾ ||೪೮||

ಅರಸುಗಳೆಲ್ಲಂ ಬಾಯ್ಕೇ
ಳ್ದರೆಂದುಮಾಶಾಂತರಂಗಳಳ್ಕಿದುವೆಂದುಂ
ಧರಣಿತಳಂ ಕೀರ್ತಿಸಿ ಕೇ
ಳ್ದು ರಾಗಿಸುತ್ತಿರ್ಪಿವಿನ್ನುಮೇಂ ತೊದಳುಂಟೆ ||೪೯||

ನೆಗಳ್ದಿಕ್ಷ್ವಾಕುಕುಲಾಂಬರೇಂದು ಭರತಂ ನಿನ್ನಗ್ರಜಂ ಸಾಹಸಂ
ಮುಗಿಲಂ ಮುಟ್ಟೆ ನಿಜಪ್ರತಾಪದಳವಂ ತೋರಲ್ಕೆ ಮಾಱಾಂಪ ಜ
ಟ್ಟಿಗರಾರಪ್ಪೊಡಮಿಲ್ಲದಂತು ಸಕಳಾಶಾಚಕ್ರಮಂ ಚಕ್ರಮೊಂ
ದೆ ಗೆಲಲ್ಸಾಲ್ದಿರೆ ದಿಗ್ವಿಜಯಕ್ಕೆ ಪೊರಮಟ್ಟಾ ಪೆಂಪು ಸಾಮಾನ್ಯಮೇ ||೫೨||

ಎನ್ನಣುಗದಮ್ಮನಿಲ್ಲದೆ
ಬಿನ್ನನೆ ಸಾಮ್ರಾಜ್ಯಮಿನಿತುಮಾರೆಱಕಮ
ತ್ಯುನ್ನತಿಯಲ್ತೆನಗಾತಂ
ಮುನ್ನೆಱಗದೊಡೆಂದು ಬೆಸಸಿಯಟ್ಟಿದನೆನ್ನಂ ||೬೨||

ಮುನ್ನಂಸಾಮಮನೆಮ್ಮಮ
ನನ್ನೋಡಲ್ ನುಡಿದು ಭೇದಮಂ ದಂಡಮುಮಂ
ನಿನ್ನಱಿವಂತಂ ನುಡಿದೆಯಿ
ದೇನ್ನುಡಿಗಳೊ ಸಮಱಿಕೊಂಡನುಡಿಗಳ್ ನಿನ್ನಾ ||೬೪||

ಇನಿತೊಂದುನುಡಿದ ಬಲ್ಮೆಯೆ
ನಿನಗಿಲ್ಲದೊಡೇಕೆ ನಿನ್ನಾಳ್ದಂ ನಿನ್ನಂ
ಮನಮೊಲ್ದು ನಚ್ಚಿಯಟ್ಟಿದ
ನನಾಕುಳಂ ದೂತನಿಂತು ನುಡಿಯಲ್ವೇಳ್ಕುಂ ||೬೫||

ನೀನ್ನಿನ್ನ ನೃಪನ ದಿಗ್ವಿಜ
ಯೋನ್ನತಿಯಂ ಪೊಗಳ್ದು ಮೂರ್ಛೆವೋದೈ ಪೆಱತೇಂ
ನೀನ್ನಿನ್ನ ಮನದೊಳಿಂತಿದು
ಬನ್ನಮನೆತ್ತುವವೊಲಾಯ್ತು ನಿನ್ನವನಿಪನಾ ||೬೬||

ಮುಂದಿಟ್ಟು ಚಕ್ರಮಂ ತಿರಿ
ತಂದುದುಮಂ ಪಾಳಮಿರ್ದು ಬೈಕಂಗೊಳ್ವೊಂ
ದಂದದೆ ಕೊಂಡುದುಮನದೇ
ನೆಂದುನ್ನತಿಮಾಡಿ ಪೊಗಳ್ವೆಳಗಱಿಯದುದೇ ||೬೭||

ಪಸಿದುಣ್ಣಪಟ್ಟು ಬಿರ್ದಿ
ರ್ದು ಸಮುದ್ರದ ತಡಿಯೊಳುದಕಮಂತ್ರದ ಬಲದಿಂ
ನುಸುಳ್ದೊಡೆ ಜಳನಿಧಿಯಂ ಕರು
ಣಿಸಿ ಕೊಟ್ಟರ್ ಧನಮಂಜಿ ಕೊಟ್ಟರೆ ದಿವಿಜರ್ ||೬೮||

ಧರೆಯೊಳ್ ಕುಲಾಲಚಕ್ರಂ
ತಿರಿವಂತಿರೆ ತಿರಿಯೆ ಚಕ್ರಮದಱಯೆ ಬಳಿಯಿಂ
ತಿರಿತಿರಿದು ಮಾಡಿದಂ ಕುಲ
ಧರಕುಲದೊಳ್ ಪಿರಿದುಮಯಶಮಂ ನಿಮ್ಮರಸಂ ||೬೯||

ಉತ್ತರಭರತದೊಳಾದಾ
ಪತ್ತಂ ನೀನಱಿಯೆಯಕ್ಕುಮನಿತುಂ ಬಲಮಂ
ಮುತ್ತಿ ಚಿಲಾಕಾವರ್ತರ್
ಸುತ್ತಲುಮೇಸಾಡಿ ಪಿರಿದು ತಿಣಕಂ ತಂದರ್ ||೭೦||

ಧನಮೆಂಬುದು ವಿಭುಗೆ ಯಶೋ
ಧನಮದನಿಂತಳಿಪಿ ಕಳಿಪಿ ಕಿಡೆ ಮಾಡಿರ್ದಾ
ತನ ಪಡೆದ ಧನಮದೇತಱ
ಧನಮದಱಿಂ ನಿಧನಮೆಯ್ದಿದರ್ ಪಲರರಸರ್ ||೭೪||

ಪಿರಿಯಣ್ಣಂಗೆರಗುವುದೇಂ
ಪರಿಭವಮೇ ಕೀಱಿ ನೆತ್ತಿಯೊಳ್ ಬಾಳಂ ನಿ
ರ್ನೆರಮೂಱಿ ಚಲದಿನೆರಗಿಸ
ಲಿರೆ ಭರತಂಗೆಱಗುವೆಱಕಮಂಜಮೆಯಲ್ತೇ ||೭೫||

ವಿನಯಮುಮೆಱಕಮುಮಪ್ಪುದು
ಸನಾಭಿಗಳ್ ಸಂಗತರ್ಕಳಪ್ಪೊಡೆ ಪೆಸರ್ಗೊಂ
ಡನಿತಱೊಳೆನ್ನಂ ಸೈರಿಸ
ನೆನೆ ಭರತಂಗೆರಗಿ ಲೋಕದಿಂ ನಗಿಸುವೆನೇ ||೭೬||

ಭರತಂ ಷಟ್ಖಂಡಭೂವಲ್ಲಭನೆನೆ ಸಿರಿಯಂ ಗೆಂಟರೊಳ್ ಕೇಳ್ದು ರಾಗಂ
ಬೆರಸಿರ್ಪೀ ನಣ್ಪೆ ಸಾಲ್ಗುಂ ಕರೆದೊಡೆ ಬೆಸನೇನೆಂಬ ಜೀಯೆಂಬ ದೇವೆಂ
ಬರಸೆಂಬಾಳೆಂಬ ದೈನ್ಯಕ್ಕೆಲವೊ ತನುವನಾನೊಡ್ಡುವಂತಾದಿದೇವಂ
ಪುರುದೇವಂ ದೇವದೇವಂ ಕುಡೆ ಪಡೆದ ನೆಲಕ್ಕಾರೊಳಂ ಪಂಥಮುಂಟೇ ||೭೭||

ಧರೆಯಂ ಕುಡುವಂದೆನಗಂ
ಗುರು ತನಗಂ ರಾಜನಾಮಮಂ ಕೊಟ್ಟೊಡೆ ನೋ
ಡಿರೆ ತನಗೀಗಳ್ ರಾಜಾ
ಧಿರಾಜನೆಂದಿಟ್ಟುಕೊಂಡನಡಕಿಲ್ಪೆಸರಂ ||೭೮||

ಚಕ್ರಂ ಪುಟ್ಟಿದೊಡೀಗಳ್
ಚಕ್ರೇಶ್ವರನೆಂಬ ಪೆಸರುಮಾಯ್ತಕ್ಕೆಮ ತಾಂ
ಚಕ್ರೇಶನಾದೊಡಂ ತ
ನ್ನಾಕ್ರಮಣಮನೆನ್ನೊಳೇಕೆ ಕೆಮ್ಮನೆ ತೋರ್ಪಂ ||೭೯||

ದೊರೆಯಲ್ಲದಂಗೆ ನುಡಿವುದು
ಪುರುಳಿಲ್ಲದ ಮಾತನೆಮ್ಮೊಳಂ ನುಡಿವುದೆ ಪೇಳ್
ಎರಲೆಗೆ ಪಾಡುವ ಗೋರಿಯ
ನರಣ್ಯದೊಳ್ ಮೃಗವಿರೋಧಿಗಂ ಪಾಡುವುದೇ ||೮೦||

ಪುರುತನಯರ್ ಭುಜಬಲಿಯುಂ
ಭರತನುಮೆನೆ ದೊರೆಗೆವಂದೊಡಾರರಳವುಮನೀ
ಧರೆಯಱಿಯಲೊಡಂ ತೂಗಲ್
ಧರೆಗೆ ತುಲಾದಂಡಮಲ್ತೆ ಮದ್ಭುಜದಂಡಂ ||೮೧||

ನೆಗಳ್ದೀಷಟ್ಖಂಡಭೂಮಂಡಲಮನಿತುಮಂ ಗೆಲ್ದಖಂ ಡಪ್ರತಾಪಂ  
ನೆಗಳ್ದಂತಾಱುಂ ಬಲಂಗಳ್ವೆರಸೊದವಿದ ಸಂಗ್ರಾಮಸಂರಂಭದಿಂದಂ
ಬಗೆಯಂ ಪ್ರಾಣಪ್ರಿಯಸ್ತ್ರೀಜನತನಯಧನವ್ರಾತದೊಳ್ ಮಾಡದಾರ್ತಾ
ಜಿಗೆ ಬಂದೊಡ್ಡಲ್ಕೆ ಪೇಳ್ಸಿಂಗರನಿಕಷದೊಳೆಮ್ಮಂದಮಂ ನೀನೆ ಕಾಣ್ಬೈ ||೮೨||

ಕಿಸುಸಂಜೆವೆರಸು ಕಳ್ತಲೆ
ಪಸರಿಸಿದಪುದೆನಸಿ ಕಣ್ಣ ಕೆಂಪುಂ ಭ್ರುಕುಟ
ಪ್ರಸರಾಂಧಕಾರಮುಂ ದೆಸೆ
ದೆಸೆಗೆಸೆದುವು ಬಾಹುಬಲಿನೃಪಾಸ್ಥಾಯಿಕೆಯೊಳ್ ||೮೩||

ನಿನಗೀಷಟ್ಖಂಡಭೂಮಂಡಲಮೆರಗಿದುದೇಂ ಸಾಲದೇ ಬೇಡುದ್ವೃ
ತ್ತನೆನ್ನೊಳಿನ್ನೇನೆಂದು ದೇವರ್ಕಡೆಗಣಿಸಿರೆಸೌದರ್ಯಮಂಕಾದ ಪೆಂಪೀ
ವನಧಿದ್ವೀಪಾಂತರಾಳಕ್ಷಿತಿಯೊಳೆಸೆಗುಮಾಕ್ಷೇಪಮಂ ಮಾಣ ನೀಂ ಕ್ರೋ
ಧನನಾಗಲ್ನಿನ್ನ ತಮ್ಮಂ ನಿನಗೆಱಗನಿದಂ ನಂಬು ರಾಜಾಧಿರಾಜಾ ||೮೪||

ತುದಿಯೆಯ್ದಿತ್ತೆಮ್ಮ ವಿಶ್ವಕ್ಷಿತಿಳಜಯಮಿಂತೆಮ್ಮ ದಾಯಾದನುಂ ಕೋ
ಪದಿನೆನ್ನೊಳ್ ಕಾದಲೆಂದುಬ್ಬರಿಸಿದ ಸಮರಾಟೋಪದಿಂ ನಿಂದೊಡಂ ಮಾ
ಣ್ಬುದು ಸೂಳಲ್ತೆಮ್ಮಸಾಪತ್ನನ ಭುಜಬಲಮಂ ನೋಳ್ಪಮೆಂದಾಗಳಾಸ್ಥಾ
ನದಿನೆರ್ದಂ ಚಕ್ರಿ ರಾಜನ್ಯಕಮಕುಟಮಣಿಪ್ರೋಜ್ಜ್ವಳದ್ವ್ಯೋಮಚಕ್ರಂ ||೮೫||

ಇಸಲೆಂದಿರ್ದ ಧನುರ್ಬಲಂ ಪೊಳೆವ ಬಾಳುಳ್ಕಂಗಳಂ ಪೋಲೆ ಪಾ
ಯಿಸಲೆಂದಿರ್ದ ದಳಂ ಪೊದಳ್ದೆಸೆವ ಚಕ್ರಾರಾವಮೋರಂತೆ ಚೋ
ದಿಸಲೆಂದಿರ್ದ ರಥಂ ಕನಲ್ವ ಮುಳಿಸಿಂ ಮಾರಾನಲೆಂದಿರ್ದ ಖ
ಡ್ಗಿ ಸಮಂತೊರ್ಮೆಯೆ ನೂಂಕಲಿರ್ದ ಘಟೆ ನೋಟಕ್ಕೇನಗುರ್ವಾದುದೋ ||೧೦೦||

ಜಯಮಂ ಕೈಕೊಳ್ವುದು ದೃ
ಷ್ಟಿಯುದ್ಧ ಜಳಯುದ್ಧ ಮಲ್ಲಯುದ್ಧದೊಳೆ ಜನ
ಕ್ಷಯಕರಣದೊಳೇಂ ಪಾಪಮು
ಮಯಶಮುಮಪ್ಪನಿತೆ ದೇವ ಕಡೆಗಣಿಪುದಿದಂ ||೧೦೧||

ಉಳಿವುದು ಭುಜಬಲದಳವಂ
ಫಳಿಲನೆ ಕೊಳೆ ಹೀನಬಲನಧಿಕಬಲನಂ ತೊ
ತ್ತಳದುಳಿದನೆಂಬ ಲೋಕದ
ಪಳಿ ಪೊರ್ದದೆ ಮಾಣ್ಗೆ ಧರ್ಮಯುದ್ಧದೊಳೆಸಗಿಂ ||೧೦೨||

ಎನ್ನ ಚತುರಂಗಬಲಮನಿ
ದನ್ನರರಾಂಪರೆಂಬ ನಿಮ್ಮರಸನ ಗ
ರ್ವೋನ್ನತಿಯುಕಮನಿನಿಸಾ
ನುಂ ನೋಡಿಂ ಧರ್ಮಯುದ್ಧಮಕ್ಕೆಮ ಬಳಿಯಂ ||೧೦೩||

ಬಿಸುಡುವುದಸದಾಗ್ರಹಮಂ
ಪ್ರಸನ್ನಗಂಭೀರಚಿತ್ತದಿಂದಿದನವಧಾ
ರಿಸುವುದು ಯುವರಾಜ ಮನಂ
ಬೆಸೆದೊರ್ಮೆಗೆ ಸಲಿಪುದೆಮ್ಮ ಮುದುಗಣ್ತನಮಂ ||೧೦೪||

ಲಲಿತಮುಖಸರಸಿಜಂ ನಿ
ಶ್ಚಳಪಕ್ಷ್ಮಂ ಸ್ತಿಮಿತತಾರಕಂ ಭುಜಬಲಿ ಕ
ಣ್ಣೊಳೆ ತವೆಪೀರ್ವವೊಲೇ ನಿ
ಶ್ಚಳತನು ನಡೆನೋಡೆ ಭರತರಾಜಂ ಸೋಲ್ತಂ ||೧೦೫||

ವ||ಅಂತು ಬಾಹುಬಲಿತೇಜಃಪುಂಜಮೆ ಕಣ್ಣೊಳುಳ್ಕುವಂತೆ ಸೈರಿಸದೆಮೆಯಿಕ್ಕಿ ದೃಷ್ಟಿ
ಯುದ್ಧದೊಳ್ ಸೋಲೆ ಮತ್ತಮಿರ್ವರುಂಬಂದು,

ಕರಿಯೂಥಪತಿಗಳೆರಡುಂ
ಸರಸೀಜಳಮಂ ವಿಳಾಸದಿಂದಂ ಪುಗುವವೊಲಾ
ದರದಿಂದೆ ಪೊಕ್ಕು ತುಳುಕಿದ
ರರವಿಂದರಜಃಪಿಶಂಗಿತಾಚ್ಛೋದಕಮಂ ||೧೦೬||

ಭರತನಮುಖದೊಳ್ ಪರ್ವಿದ
ಖರಕೋಪಾನಳನೆಯ್ದೆ ನಂದಿಸುವವೊಲಾ
ಮರಕತವರ್ಣಂ ಕರಿಕರ
ಪರಿಘದಿನೊಡನೊಡನೆ ತುಳುಕಿದಂ ತಿಳಿನೀರಂ ||೧೦೭||

ವ|| ಭರತೇಶ್ವರಂ ಪಂಚಶತಶರಾನೋತ್ಸೇಧನಪ್ಪುದಱಿಂ ಪಂಚವಿಂಶತ್ಯುತ್ತರಪಂಚಶತ
ಶರಾಸನೋತ್ಸೇಧನಪ್ಪ ಬಾಹುಬಲಿಕುಮಾರನ ಮೇಗೆ

ಭರದಿಂದಂ ತುಳುಕಿದ ನೀ
ರುರದೊಳ್ ಹಾರಾಂಶುರುಚಿಯನಿರ್ಕುಳಿಗೊಳೆ ದು
ರ್ಧರಜಳಯುದ್ಧಮುಮಾದಮೆ
ಪರಿಭವಮಂ ಚಕ್ರವರ್ತಿಗಿತ್ತತ್ತಾಗಳ್ ||೧೦೮||

ವ|| ಅಂತು ಬಾಹುಬಲಿಯ ಸುರಕರಿಕರಾನುಮಪ್ಪ ಬಾಹುಗಳಿಂದಂ ತುಳ್ಕಿದ ನೀರ್ಗೆ
ಮೊಗಮನೊಡ್ಡಿ ಮೊಗಂ ಸೋಲ್ವದುಂ, ಕುಮಾರಂಗೆ ಘೋಷಿಸುವ ಜಯಘೋಷಣೆಯಂ ಕೇಳಲಾಱದೆ
ಮಣಿಮಯಕಿರೀಟೋದಗ್ರವಿಸಾಫುರಿತಸಂಚೂಳಕಾಕನಕಾಚಳಮನೆ ಪೋಲ್ತು ಮಲ್ಲಯುದ್ಧದೊಳ್
ಬಂದು ಪೊಣರ್ದು,

ಮರಕತಮಣಿಶೈಲಮನನು
ಕರಿಸುವ ಭುಜಬಲಿಯೊಳಿರದೆ ಪೊಣರ್ದುಮಾಗಳ್
ಸುರವಿದ್ಯಾಧರನರಬಲ
ಮೆರಡುಂ ದೆಸೆಯೊಳ್ ತೆರಳ್ದು ನೋಡಿತ್ತೆತ್ತಂ ||೧೦೯||

ಕರಣಂಗಳ ದಾಯಂಗಳ
ಪರಿಣತಿಯಂ ಮೆಱೆದು  ಪೊಣರ್ದು ಸಂದೊಂದೆಡೆಯೊಳ್
ಭರತನನವಯವದೊಳೆ ಮಣಿ
ಕಿರೀಟರುಚಿ ಬೆಳಗೆದೆಸೆಗೆ ಬೀಸಿದನಾಗಳ್ ||೧೧೦||

ಕನಕಾಚಳಮಂ ಪೊತ್ತುದು
ಘನಮರಕತಶೈಲಮೆನಿಸಿ ಭುಜಬಲಿ ಸಕಳಾ
ವನಿತಳವಲ್ಲಭನಂ ಭೋಂ
ಕೆನೆತ್ತಿ ಪೊತ್ತಿರ್ದನಿಕ್ಕಲೊಲ್ಲದೆ ನೆಲದೊಳ್ ||೧೧೧||

ಭರತಾವನೀಶಂ ಗುರು
ಪಿರಿಯಣ್ಣಂ ಚಕ್ರವರ್ತಿ ಮಹಿಮಾಕರನೀ
ದೊರೆಯನುಮಳವಳಿಯೆ ವಸುಂ
ಧರೆಯೊಳ್ ತಂದಿಕ್ಕೆ ಭಂಗಮಂ ಮಾಡುವೆನೇ ||೧೧೨||

ಎಂದೊಯ್ಯನಿಳಿಪೆ ನೆಲದೊಳ್
ದುಂದುಭಿರವದೊಡನೆ ವಿಜಯಘೋಷಣೆ ನೆಗಳ್ದ
ತ್ತಂದು ಕರಂ ಪಿರಿದುಮಾಯ್ತು ಭರತನ ಬಲದೊಳ್ ||೧೧೩||

ಚರಮತನುಸಾರ್ವಭೌಮಂ
ಪುರಪರಮೇಶ್ವರತನೂಜನಂತತಿಭಂಗಂ
ದೊರೆಕೊಂಡುದಿಂದು ಭರತೇ
ಶ್ವರಂಗೆ ಹುಂಡಾವಸರ್ಪಿಣೀವಳಸನದಿಂ||೧೧೪||

ನೆರೆದೆರಡುಂ ಬಲದರಸುಗ
ಳಿರೆ ಪರಿಭವಮಂತು ತನಗೆ ಬರೆ ಮುಳಿಸಿನ ದ
ಳ್ಳುರಿಗಳನುಗುಳುತ್ತುಂ ಚ
ಕ್ರರತ್ನಮಂ ಬಗೆದು ಬೆಸಸಿದಂ ಭರತೇಶಂ ||೧೧೫||

ವ|| ಆಗಳಾ ಪುರುಪರಮೇಶ್ವರತನೂಭವರ ಯುದ್ಧಾಡಂಬರೋಪಸರ್ಗದೊಳಮಾಕುಳ
ವ್ಯಾಕುಳರಾಗಿ ತತ್ಪ್ರಶಮನಪ್ರತೀಕಾರಮಾಗೆ ನಾಕಲೋಕಸೌಂದರಿಯರೊಡನೆ,

ಅನಿಮೇಷರ್ ನೂತನಪ್ರಸ್ತುತಸುರಭಿಸುಧಾಕ್ಷೀರಧಾರಾಭಿಷೇಕಾ
ರ್ಚನೆಯಂ ಸದ್ಯಸ್ತನಾಖಂಡಳವನಸುಮನೋಮಾಲಿಕಾಲಂಬಲೀಲಾ
ರ್ಚನೆಯಂ ಪ್ರತ್ಯಗ್ರಚಿಂತಾಮಣಿಮಯರಚನಾಶ್ಚರ್ಯನಿಶ್ಶೇಷಭೂಷಾ
ರ್ಚನೆಯಂ ಸರ್ವಜ್ಞಬಿಂಬಾವಳಿಗೆ ಪರಸಿದರ್ ಮಸ್ಸಕನ್ಯಸ್ತಹಸ್ತರ್ ||೧೧೬||

ವ|| ಆ ಪ್ರಸ್ತಾವದೊಳ್

ಬೆಸಸಿದೊಡದು ಮಾರ್ಕೊಳ್ಳದೆ
ಬೆಸನಂ ಬಲವಂದು ಬಾಹುಬಲಿಯನಣಂ ಭೇ
ದಿಸಲಾಱದುದಱಿನಿರ್ದುದು
ಮಸುಳ್ದೆಸೆಕಂಗೆಟ್ಟು ಬಲದ ಮುಯ್ಪಿನ ಕೆಲದೊಳ್ ||೧೧೭||

ವ|| ಆಗಳ್

ಧರೆಯಂ ಪರ್ಬಿದುದೀ ಬಾಹುಬಲಿನೃಪಯಶೋದುಂದುಭಿಧ್ವಾನವೆಂಬಂ
ತಿರೆ ದೇವಾನೀಕಿನೀದುಂದುಭಿರವಮಮರೀವೃಂದಮಾಂಗಲ್ಯಗೇಯ
ಸ್ವರದೊಳ್ ಕೈಗೂಡಿ ಪೊಣ್ಮುತ್ತಿರೆಮುದಿತಸುರಾನಂದಬಾಷ್ಪೋದಬಿಂದೂ
ತ್ಕರಮೆಂಬಂತಾಗೆ ತಂದತ್ರರಲ ಮಳೆಗಳಂ ಪುಷ್ಪಮೇಘಪ್ರತಾನಂ ||೧೧೮||

ತನಗಲ್ಲದುದಂ ಮಾಡಿದ
ನಿನಿಸಂ ಚಕ್ರೇಶನೆಂಬ ಕುಲವೃದ್ಧರ ಭೂ
ವನಿತಾಧೀಶರ ನುಡಿಗ
ಳ್ಗೆ ನಾಣ್ಚಿದಂ ಭರತರಾಜನವನತಮಕುಟಂ ||೧೧೯||

ಬಾಹುಬಲಿ ತನ್ನ ದಕ್ಷಿಣ
ಬಾಹುವ ಕೆಲದಲ್ಲಿ ನಿಂದ ಚಕ್ರಮನಾಗಳ್
ಸಾಹಸರಸಿಕಂ ಕಂಡೀ
ಸಾಹಸಮಂ ನೆಗಳ್ದನೆನ್ನೊಳಂ ಭರತೇಶಂ ||೧೨೦||

ಕಳೆದಿಡುವುದೆ ಕಷ್ಟಂ ಭೂ
ತಳರಾಜ್ಯವಿಮೋಹಮಚಿರುಚಿಸಂಚಳಮಿಂ
ತಳಲಗಿಡಿಸಿದುದು ಮನುಕುಲ
ತಿಳಕನುಮಂ ಖಳಮಹೀಶರುಳಿದವರಳವೇ ||೧೨೧||

ಸೋದರರೊಳ್ ಸೋದರರಂ
ಕಾದಿಸುವುದು ಸುತನ ತಂದೆಯೆಡೆಯೊಳ್ ಬಿಡದು
ತ್ಪಾದಿಸುವುದು ಕೋಪಮನಳ
ವೀದೊರೆತೆನೆ ತೊಡರ್ವುದೆಂತು ರಾಜ್ಯಶ್ರೀಯೊಳ್ ||೧೨೨||

ಪಾತಕಿಯೊಳ್ ಲಕ್ಷ್ಮಿಯೊಳತಿ
ಕಾತರಕಾಪುರುಷಗಣನೆಯೊಳ್ ನೆರೆಯಲ್ಕಿಂ
ತೀತನೆ ಬಗೆಗಾಂ ಪುರುತನು
ಜಾತರ ಬಗೆದುದನೆ ಬಗೆವನಳಿಪಂ ಬಗೆಯೆಂ ||೧೨೩||

ವಿಷಧಿಗಳೊಳಗೊಯ್ದರ್ದುವ
ವಿಷಮರಣಾಂಗಣಮನಿರದೆ ಪುಗಿಸುಉವ ನಾನಾ
ವಿಷಯಂಗಳಂ ತೊಢಡರ್ಚುವ
ವಿಷಯಸುಖಂಗಳೊಳೆ ತೊಡರ್ದು ಬಿರ್ದಪುದು ಜಗಂ ||೧೨೪||

ಇನಿಯವು ಮೊದಲೊಳ್ ನಂಜಿನ
ಪನಿವೊಲ್ ಬಳಿಕೆಯ್ದೆ ಮುಳಿದು ಕೊಂದಿಕ್ಕುವುವಿಂ
ತೆನೆಯೆನೆ ವಿಷಯಸುಖಾಸ್ವಾ
ದನದೊಳ್ ಲಂಪಟರಿದೇಕೆಯೋ ನರಪಶುಗಳ್ ||೧೨೫||

ಕಿವಿ ಮೆಯ್ ಕಣ್ ನಾಲಗೆ ಮೂ
ಗಿವು ಶಬ್ದಸ್ಪರ್ಶರೂಪರಸಗಂಧಸಮು
ದ್ಭವಸುಖದೊಳ್ ತೊಡರ್ವುದೆ ಸುಖ
ಮವಿಲ್ಲದಂದಿರ್ಕತೀಂದ್ರಿಯಮೆ ಸುಖಂ ||೧೨೬||

ಕಿಡುವೊಡಲ ಕಿಡುವ ರಾಜ್ಯದ
ಪಡೆಮಾತುಗೊಳಲ್ಕಮೆನ್ನ ಮೆಯ್ಯಗಿದಪುದೀ
ಗಡೆ ಜೈನದೀಕ್ಷೆಯಂ ಕೊಂ
ಡಡಿಗೆರಗಿಸುವೆಂ ಸಮಸ್ತ ಸುರಸಮುದಯಮಂ ||೧೨೭||

ಎಂದಿಂತು ಬಗೆದು ಭರತನ
ನೆಂದಂ ಚಕ್ರೇಶ ಸಿಗ್ಗನುಳಿ ಮುಳಿಸಂ ನೀ
ನೆಂದಿಂಗಂ ಬಿಸುಡೀ ತ
ಮ್ಮಂದಿರೊಳಿನಿತು ಕಟ್ಟುವರ್ಪುದು ಪೆಂಪೇ ||೧೨೮||

ನಿನ್ನೀ ಬೆಸಸಿದ ಚಕ್ರಮ
ದೆನ್ನೀ ದೇಹಾದ್ರಿಯಂ ಗೆಲಲ್ ನೆಱೆಯದು ನೀಂ
ಬಿನ್ನನಿದೇಕಿರ್ಪೆಯದೆಂ

ತೆನ್ನ ಗೆಲಲ್ ವಜ್ರಗಿರಿಯನಾರ್ಕುಮೆ ವಜ್ರಂ ||೧೨೯|
ನೆಲಸುಗೆ ನಿನ್ನ ವಕ್ಷದೊಳೆ ನಿಚ್ಚಳಮೀಭಟಖಡ್ಖಮಂಡಲೋ
ತ್ಪಲವನವಿಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ ಭೂ
ವಲಯಮನಯ್ಯನಿತ್ತುದಮನಾಂನಿನಗಿತ್ತೆನಿದೇವುದಣ್ಣ ನೀ
ನೊಲೆದ ಲತಾಂಗಿಗಂ ಧರೆಗಮಾಟಿಸಿದಂದು ನೆಗಳ್ತೆ ಮಾಸದೆ ||೧೩೦||

ಅವಧರಿಸದೆ ನಿನ್ನೊಳ್ ಪಿರಿ
ದವಿನಯಮಂ ನೆಗಳ್ದ ದೋಷಮಂ ತಪದೊಳ್ ನೀ
ಗುವೆನಸದಾಗ್ರಹಮಂ ಬಿಸು
ಡುವುದೊರ್ಮೆಗೆ ಮಱೆವುದೆನ್ನ ದುರ್ವಿಳಸನಮಂ ||೧೩೧||

ವ|| ಎಂದು ಬಾಹುಬಲಿಕುಮಾರಂ ತಪಶ್ಚರಣನಿಶ್ಚಳನಿಶ್ಚಯಮನನಾದಾಗಳ್

ಮನದೊಳ್ಮುಂ ಪುದಿದಿರ್ದ ಕೋಪಮನಿತುಂ ತೂಳ್ದಾಗಳೆತ್ತೆತ್ತಗೆ
ಯ್ದೆನಿದಂ ತಮ್ಮನೊಳೆಂಬುದೊಂದುಪಶಮಂ ಕೈಗಣ್ಮಿ ನೀನೊರ್ಬನೈ
ಮನುವಂಶಕ್ಕೆ ಲಲಾಮನಪ್ಪನುಜನೈ ಬೇಡಮ್ಮ ನೀನುಂ ತಪೋ
ವನಮಂ ಸಾರ್ವುದುಮಾನದಾರ್ಗೆ ಮೆಱೆವೆಂ ಪ್ರ್ಜಾಜ್ಯಸಾಮ್ರಾಜ್ಯಮಂ ||೧೩೨||

ನಿಜಪಾದಾಂಬುರುಹಕ್ಕೆ ಪಾದ್ಯವಿಧಿಯಂ ನೇತ್ರಾಂಬುವಿಂ ಮಾಡುವ
ಗ್ರಜನತ್ಯುನ್ನತಮಪ್ಪ ಮಸ್ತಕದ ಮೇಗೋರಂತೆ ಪಾಯ್ವಾತ್ಮಬಾ
ಷ್ಪಜಳೌಘಂಗಳಿನಂದು ಬಾಹುಬಲಿ ತನ್ನಿಂದಂ ನಿಧೀಶಂಗೆ ವಂ
ಶರಾಜ್ಯಾಭಿಷವೋತ್ಸವಂ ನೆಗಳ್ದುದೆಂಬಾಶಂಕೆಯಂ ಮಾಡಿದಂ ||೧೩೩||

ವ|| ಅಂತು ಭರತೇಶ್ವರನಂ ಬಾಹುಬಲಿಕುಮಾರನೆಂತನುಮೊಡಂಬಡಿಸಿ ಮಹಾಬಲಿಯೆಂಬ
ನಿಜತನೂಜನನಾತ್ಮೀಯಪದವಿಯೊಳ್ ನಿಱಿಸಿ

ಕ್ಷಿತಿತಳದೊಳ್ ನೆಗಳ್ದಿರ್ದ
ಪ್ರತಿಮಲ್ಲನನಿಕ್ಕಿ ಮುಯ್ವನಣಮಾನದೆ ದ
ರ್ಪಿತದುರಿತಮಲ್ಲನುಮನುಡಿ
ವ ತಕ್ಕಿನಿಂ ಸಭೆಗೆ ನಡೆದನಿಂದ್ರಾರ್ಚಿತನಾ ||೧೩೪||

ಪುರಪರಮೇಶ್ವರಮುಖಚಂ
ದ್ರರಶ್ಮಯಿಂ ಚೋದ್ಯಮಿನ್ನಿಲ್ಲೆಂಬಿನೆಗಂ
ಕರವದನಹೃದಯಕಮಳದೊ
ಳೆರಡಲರ್ದುವದೊಂದು ಮುಗಿದುದಾ ಭುಜಬಲಿಯ ||೧೩೭|
ಮೊದಲೊಳ್ ದೇವರ ದಯೆಗೆ
ಯ್ದುದಲ್ತೆ ಯುವರಾಜಪದವಿಯೆನಗೀಗಳುಮ
ಭ್ಯುದಯಕರಪ್ರವ್ರಜ್ಯದ
ಪದವಿಯ ಯುವರಾಜಪದವಿಯಂ ದಯೆಗೆಯಿಸಿಂ||೧೩೮||

ಗುರುಪದಪದ್ಮಾಂತಿಕದೊಳ್
ಪರಮೇಶ್ವರದೀಕ್ಷೆಯಂ ಮನಂಬಿಡೆ ಕೊಂಡೀ
ಧರೆಯಂ ಪೊಗಳಿಸಿದನಿದೇಂ
ಪುರುಪರಮೇಶ್ವರಸುತರ್ ಪರಿಚ್ಛೇದಿಗಳೋ ||೧೩೯||

ವ|| ಅಂತು ಜೈನದೀಕ್ಷೆಯಂ ಕೈಕೊಂಡು ಗುರುವಿನನುಮತದಿಂ ದ್ವಾದಶಾಂಗಚತುರ್ದಶ
ಪೂರ್ವಂಗಳಂ ಕಲ್ತು ತದನುಮತದೊಳ್ ಬಳಿಯಮೇಕವಿಹಾರಿಯಾಗಿ ಸಂವತ್ಸರಾವಧಿವರಂ ಪ್ರತಿ
ಮಾಯೋಗದೊಳ್ ನಿಲೆ,

ಅಡಿವಿಡಿದಿಟ್ಟ ಪುತ್ತುಗಳ ನೆತ್ತಿಗಳಿಂ ನಿಮಿರ್ದಿರ್ದ ಬಳ್ಳಿಗ
ಳ್ವಿಡಿದು ವಿಷೋರಗಪ್ರತತಿ ನೋಳ್ಪೊಡಗುರ್ವಿಸೆ ಸುಯ್ವ ಸುಯ್ಗಳಿಂ
ಕಿಡಿ ಪೊಱಪೊಣ್ಮೆ ಬಾಹುಬಲಿಯೋಗಿಯ ಘೋರತಪೋಮಹಾಗ್ನಿಯಿಂ
ಸಿಡಿಸಿಡಿದುಣ್ಮುತ್ತಿರ್ಪ ಕಿಡಿಗಳ್ಗೆಣೆಯಾದವು ತತ್ಪ್ರದೇಶದೊಳ್ ||೧೪೦||

ವಿಜಯಶರಾಸನಗುಣಘಾ
ತಜಾತಕಾಳಿಕೆಯನೆತ್ತಮಗ್ಗಳಿಸಿದುದಾ
ಭುಜಬಲಿಯ ಭುಜದ್ವಯದೊಳ್
ಭುಜಂಗನಿಶ್ವಾಸಧೂಮವೇಣೀನಿಕರಂ ||೧೪೧||

ಬಳೆದ ಜಡೆ ನಿಮಿರ್ದ ಬಳ್ಳಿಗ
ಳೊಳೆ ಪೆಣೆದು ವಿಷೋರಗಾನಳಾರ್ಚಿಗಳಿಂದಂ
ಮಿಳಿರ್ದುವು ಮುನಿಪಧ್ಯಾನಾ
ನಳನಿರ್ಯದ್ಧೂಮವೇಣಿಕಾನಿಕರದವೊಲ್ ||೧೪೨||

ವ||  ಅಂತುಗ್ರೋಗ್ರತಪದೊಳಮಾ ಬಾಹುಬಲಿಮುನೀಂದ್ರಂಗೆ ಕೇವಲಜ್ಞಾನವಾಪ್ತಿಯಾಗ
ದುದರ್ಕೆ ಭರತೇಶ್ವರಂ ವಿಸ್ಮಯಮುತ್ತು ಪೋಗಿ ವೃಷಭನಾಥನಂ ಬೆಸಗೊಳೆ ತಪದೊಳ್ ನಿಂದುಂ
ನಿನ್ನ ನೆಲದೊಳ್ ನಿಂದೆವೆಂಬ ಮಾನಕಷಾಯಮವರ್ಗಿನ್ನುಪತ್ತುವಿಟ್ಟುದಲ್ತದಱಿಂ ಕೇವಲಜ್ಞಾ
ನೋತ್ಪತ್ತಿಯಾಗದಿರ್ದುದು. ನೀಂ ಪೋಗಿ ಕಾಲ್ಗೆರಗಲೊಡಂ ಕೇವಲಜ್ಞಾನಮಕ್ಕುಮೆಂದು ಬೆಸಸಿ
ದೊಡೆ ಲಬ್ಧೋಪದೇಶನಾಗಿ ವಿವಿಧಾರ್ಚನಾಸಮಗ್ರಪರಿಜನಪರಿವೃತಂ ರಾಜರಾಜಂ ಮುನಿರಾಜಚರ
ಣಾಂಭೋಜದೊಳ್ ಬಂದೆರಗಿ ವಿವಿಧಾರ್ಚನೆಗಳಿಂದಮರ್ಚಿಸಿ,

ನಿನ್ನ ಮಡಗೂಳ್ನೆಲಂ ಮಾ
ನೋನ್ನತ ನೀನೀಯೆ ಬಂದುದೆನಗಿದನೆನತೆಂ
ದೇನ್ನಿನಗೆ ಬಗೆಯಲಪ್ಪುದೆ
ನಿನ್ನನೆ ನೀಂ ಬಗೆಯ ಬಗೆಯದಿರ್ ಪೆಱಪೆಱತಂ ||೧೪೪||

ಎನಲೊಡಮಂತಃಕರಣದೊ
ಳಿನಿಸಾನುಂ ನಿಂದುದೊಂದು ಮಾನಕಷಾಯಂ
ಮುನಿಪತಿಗೆ ಪೋಗೆ ಪುಟ್ಟಿದು
ದನಂತವಸ್ತುಪ್ರಕಾಶಿಕೇವಳಬೋಧಂ ||೧೪೫||

ಆಗಳ್ ದೊರೆಕೊಂಡಿರೆ ದೇ
ವಾಗಮಮೇಕಾತಪತ್ರಮೆಸೆದಿರೆ ಕರಮಿಂ
ಬಾಗಿರೆ ಚಾಮರಯುಗ್ಮಮ
ದಾಗಳೆ ನಿಲೆ ದಿವ್ಯವಿಷ್ಟರಂ ಮಣಿಖಚಿತಂ ||೧೪೬||

ಜಯನಿನದಂ ಸುರದುಂದುಭಿ
ಚಯನಿನದಂ ಪುಷ್ಪವರ್ಷಮೊರ್ಮೆಯೆ ಸಕಲೋ
ರ್ವಿಯನೆಯ್ದೆ ಪರ್ವುತಿರೆ ಚಿ
ತ್ತೆಯ ಸರಿಯಂತೆರಗಿ ಪೋದುದಮರಸಮಾಜಂ ||೧೪೭||

ವ|| ಅಂತು ಬಾ ಹುಬಲಿಕೇವಳಿಯುಂ ನಾನಾದೇಶವವಿಹಾರದೊಳ್ ವಿಶ್ವಜನಮಂ ನಿಜವಚೋ
ಮೃತದಿಂ ಭವ್ಯಜನಸ್ರ್ಥಮಂ ತಣಿಪಿ ಬಂದು ಕೈಲಾಶಶೈಲದೊಳಾದಿದೇವರ ಸನ್ನಿಧಿಯೊಳಿರ್ದಂ.
ಇಂತು ಭರತೇಶ್ವರನುಮಾಮುನೀಶ್ವರನಂ ಪೂಜಿಸಿ.

ಪೆಸರ್ಗಂ ತೇಜಕ್ ಕಮೊಂದೋಜೆಗಮಹಿತಮಹೀಪಾಳಕರ್ಬೆಚ್ಚೆ ಬಾಯ್ಕೇ
ಳಿಸಿ ಹೈಮಾಕ್ಷ್ಮಚಳೇಂದ್ರಂಬರೆಗಮಖಿಳಷಟ್ಖಂಡಭೂಭಾಗಮಂ ಷ
ಷ್ಟಿಸಹಸ್ರಾಬ್ದಂಗಳಿಂ ದಿಗ್ವಿಜಯದೊಳೊಗೆದಾನಂದಭೇರೀರವಂ ಘೂ
ರ್ಣಿಸೆ ಸಾಕೇತಕ್ಕೆ ವಂದಂ ಸುಕವಿಜನಮನೋಮಾನಸೋತ್ತಂಸಹಂಸಂ ||೧೪೮||

ನೆನಕೆ.

ಶ್ರೀ ಕೆ. ಎಲ್. ನರಸಿಂಹಶಾಸ್ತ್ರಿ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ