ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಜುಲೈ 6, 2019

ಜಯದೇವಿತಾಯಿ ಲಿಗಾಡೆಯವರ ಶ್ರೀ ಸಿದ್ಧರಾಮೇಶ್ವರ ಪುರಾಣ

ಶ್ರೀ ಸಿದ್ಧರಾಮೇಶ್ವರ ಪುರಾಣ
ಕರ್ತೃ :
ಜಯದೇವಿತಾಯಿ ಲಿಗಾಡೆ

“ ಜಯದೇವಿ ಮತ್ತು ಅವರು ಹತ್ತು ವರ್ಷಗಳ”  ವಾಙ್ಮಯ ತಪಸ್ಸಿನಿಂದ ಆರುನೂರು ಪುಟಗುಳ ಬೃಹತ್ಕೃತಿಯನ್ನು ರಚೀಸಿದ್ದಾರೆ. ಇಂಥ ಕಾವ್ಯಗಳಲ್ಲಿ ಮೊದಲನೆಯದು ಮಾಸ್ತಿ ಅವರ “ನವರಾತ್ರಿ” ; ಎರಡನೆದು “ಕುವೆಂಪು” ಅವರ “ ಶ್ರೀ ರಾಮಾಯಣ ದರ್ಶನಂ” ಮೂರನೆಯದು, ತಾಯಿಯವರ “ಸಿದ್ಧರಾಮೇಶ್ವರಪುರಾಣ”. ಕವಿಯಿತ್ರಿ ಸೊಲ್ಲಾಪುರ ಕನ್ನಡ ಕೊಟೆಯ ತಾಯಿ ಜಯದೇವಿ ಇವರು ಸಂಚಿಯ ಹೊನ್ನಮ್ಮನ ನಂತರ ಕಾವ್ಯ ರಚನೆಯಲ್ಲಿಯಶಸ್ಸೈ ಸೃಧೆಸೆದವರು. ಇನ್ನೂ ಒಂದು  ವಿಶೇಷವೆಂದರೆ ಸರ್ವಜ್ಞ ಕವಿಯ ತ್ರಿಪದಿ ಛಂದದಲ್ಲಿ ನಾಲ್ಕು ಸಾವಿರ ಪದ್ಗಳ ಮಹಾಕಾವ್ಯ ರಚೆಸಿದವರು ಇವರೊಬ್ಬರೇ. ಈ ದೃಷ್ಟಿಯಿಂದ ಇದೂ ಒಂದು ಮಹಾಕಾವ್ಯವೆಂಬುದರಲ್ಲಿ ಸಂದೇಹವಿಲ್ಲ.

ಅನುಕ್ರಮಣಿಕೆ
ಕಥೆ, ಸಂಧರ್ಭಸೂಚಿ
ಮಂಗಳ :

ಕವಯಿತ್ರಿಯ ಆತ್ಮ ನಿವೇದನೆ- ಸಿದ್ಧರಾಮೇಶ್ವರ ಪುರಾಣ ರಚನೆಯ ಹಿನ್ನೆಲೆ. ವ್ಯಾಸಂಗಮಾಡಿದ ಗ್ರಂಥಗಳು. ಮೂಡಿದ ಭಾವ- ಅನುಭಾವ. ಹಿಂದೆ ರಚಿಸಿದ ಮತ್ತು ಮುಂದೆ ರಚಿಸುವ ಕೃತಿಗಳ ವಿವರ. ಸಕಲ ಶರಣ ಶರಣೆಯರನ್ನುಕುರಿತು ಪ್ರಾರ್ಥನೆ. ಸಾವಿಲ್ಲದ ಸಡಗರ ಭಾವದಲ್ಲಿ ಮೂಡಿದುದೈ. ಬಲ್ಲವಳೆಂಬ ಭ್ರಮೆಯಿಲ್ಲದೆ ಬಲ್ಲವರ ಪಾದಕ್ಕೆ ಮಣಿಯುವುದು,
ಬಲ್ಲವರು ಕಲಿಸುವುದು, ನೈಡಿಸುವುದು.

ಮಂಗಳ  ಶುಭಸಮಯ। ಹಿಂಗದ ಸಂಭ್ರಮ।
ಕಂಗೊಳಿಸಿತು ಲಿಂಗವು- ಸಿದ್ಧರಾಮ
ಬಂಗಾರ ಬಂಣ ಬೀರೂತ॥೧॥

ಶುಭವನೆ ಕೋರುತ। ಅಭಯವ ಬೇಡುತ।
ನಭದ ನೀಲಿಯಲಿ ಸಿದ್ಧನ- ಕಾಣುತ
ಅಭವನ ಪಾಡುವೆಮನತುಂಬಿ॥೨॥

ಮಂಗಳ ಗಳಿಗೆಯಲಿ।ಸಿಂಗಾರ ಶಿವಸಿರಿ ।
ಕಂಗೊಳಿಸಿದವು ಪದಗಳು-ಸಿದ್ಧರಾಮ
ಅಂಗಾಂಗರೋಮರೋಮಾಂಚ॥೩॥

ಕಂಗಳ ತುಂಬೆನ್ನ । ಮಂಗಳಮೂರುತಿ।
ಪಿಂಗದೆಲೆ ನಾನು ಕಾಣುತ- ಪಾಡುವೆ
ಸಂಗರಹಿತ  “ಸಿದ್ಧ ಪುರಾಣ “॥೪॥

ಘನವಾದ ನೆನವೆನ್ನ । ಮನತುಂಬಿ ನೀಡಿದಿ।
ಮೌನದಲಿ ಮಹಾಕಾವ್ಯವ -ಬರೆಸಿದಿ
ಅನುದಿನದಲಿ ರೂಪ ತೋರಿದಿ॥೫॥

ತುಂಬಿತ್ತು ತುಳುಕಿತ್ತು । ಸಾಂಬನ ನೆನೆವಲ್ಲಿ।
ಇಂಬಿಲ್ಲ ಯಾವ ಯಾವುದಕೆ -ಒಳಹೊರಗು
ಬಿಂಬೆಸಿ ನೀನಾಗಿ ನುಡೆಸಿರೈವಿ॥೬॥

ನಿನ್ನ ಹುಟ್ಟಿನ ಊರು । ಸೊನ್ನಲಾಪುರದೊಳು।
ಎನ್ನನು ಪೈಟ್ಟಿಸಿ ಬರೆಸಿದಿ- ಸಿದ್ಧರಾಮ
ಕನ್ಯೆಯ ಮೇಲಿನಮಮತೆಯಲಿ॥೭॥

ಗಡಿಭಾಗವೆಂದರು। ಕಡಿಮಿಲ್ಲ ಕನ್ನಡಕೆ।
ಉಡಿಯ ತುಂಬುವೆ ಕನ್ನಡ- ತಾಯಿಗೆ
ಒಡವೆಯ ಇಡಿಸುವೆ ಪದಗಳ॥೮॥

ಪಂಡಿತರ ಪಂಡಿತ । ಚಂಡಕೀರುತಿ ಕವಿ।
ಪಂಡಿತ ರಾಘವಾಂಕನ-ಕೃತಿಯ
ಕಾಂಡಕರ್ಮವ ವಿವರೆಸುವೆ॥೯॥

ಸಿದ್ಧವೀರಣ್ಣರ। “ಸಿದ್ಧ ಸಂಪಾದನೆ”।
ಶುದ್ಧ “ ಪ್ರಭುಲಿಂಗಲೀಲೆ”ಯ-ಆಧಾರ
“ಸಿದ್ಧರಾಮನ ಈ ಪುರಾಣ” ಕೆ॥೧೦॥

“ ಗುರು ರೇವಣಸಿದ್ಧರ। ಚರಿತೆ”ಯಲ್ಲಿಯ ಭಾಗ।
ಹರಸೂತ ಪುರಾಣ ಪವಣಿಸುವೆ-ಸಿದ್ಧೇಶ
ನರುಹಿದ “ತ್ರಿವಿಧಿ” ಸ್ಮರೆಸುವೆ॥೧೧॥

“ಲಿಂಗಲೀಲಾ ವಿಲಾಸ”। ಸಂಗವು ಈ ಕೃತಿಗೆ।
ಮಂಗಲಮಯ ಸಿದ್ಧೇಶನು-ಶ್ರೀಗುರು
ಲಿಂಗ ಜಂಗಮರ ನುತಿಸಿದ್ದು॥೧೨॥

“ಕಾಲಜ್ಞಾನ”ದೊಳು। ಬಲ್ಲಮುನ್ನೋಟವ ।
ಚಲ್ಲಿದರು ಶರಣರು ಬಯಲಿಗೆ -ಅಲ್ಲಲ್ಲಿ
ಇಲ್ಲಿ ಅರೈಹುವೆ ನಂಬುಗೆಯ॥೧೩॥

“ತಾಯಿಪದ ಧಾಟಿ। ಹಾಯಾಗಿ ನುಡಿಸುವೆ।
ಬಾಯಿಂದ ಬಾಯಿಗೆ ಸಾಗಲಿ- ತ್ರಿಪದಿ
ತಾಯೆ ಸಾವಿರ ಸಾವಿರಾರು॥೧೪॥

ಸುಲಭ ಕನ್ನಡದೊಳು। ಸಲ್ಲಲಿತ ವಚನದಿ।
ಸಲಿಸಿದರು ಅನುಭಾವದಾಸೋಹ-ನಮ್ಮವರು
ಕಲಿಸಿದರು ಸರಳ ಶೈಲಿಯನು॥೧೫॥

ನನ್ನಿಯಿದು ಕಂಡದ್ದು।ತಾನಾಗಿ ಬಂದದ್ದು।
ಜೇನು ಸವಿದಂತೆ ತುಂಬಿದ-ಪದಗಳ
ದನಿ ದನಿಗೂಡಿಸಿ ಹಾಡುವೆನು॥॥೧೬॥

“ಸಿದ್ಧನ ಬಸವನ।ಗೆದ್ದ ಮಹದೇವಿಯರ ।
ಸಿದ್ಧ ವಚನಗಳ” ಅನುವಾದ- ಈ ಮೊದಲು
ಶುದ್ಧ ಮರಾಠಿಯಲಿ ಮಾಡಿದೆ॥೧೭॥

ಸಿದ್ಧ ನಿನೂನ “ತ್ರಿವಿಧಿ”। ಶುದ್ಧ ಆರೇದಾಗ ।
ತಿದ್ದದಲೆ ಬರೆದು ಮುಗಿಸಿದೆ-ದಿಕ್ಕೆಲ್ಲ
ಆದ್ಯರ ಆಣತಿ ಹರಡಲಿ॥೧೮॥

“ಜಯಗೀತೆ ಪಾಡಿದೆ”।ಭಯಭಕ್ತಿಯಿಂದ ।
ಜಯವೆಂದು ಸಿದ್ಧರಾಮನಿಗೆ-ಅರ್ಪಿತ
ಸ್ವಾಯತ ಸನ್ನಿಹಿತವೆನ್ನುತ॥೧೯॥

ಸಾಸಿರ ಪದಗಳ । ಉಸುರಿದೆ ನಿನ ಹಾಡಿ ।
ಹೆಸರಿಟ್ಟೆ “ತಾಯಿ ಪದ”ವೆಂದು-ಮುಂದಿನ್ನು
ಏಸೊಂದು ಮೂಡುವವು ನಾನರಿಯೆ॥೨೦॥

ಕರುಣಾಳು ಬೇಡುವೆ। ಸೆರಗೊಡ್ಡಿ ನಿನ್ನಡಿಗೆ ।
ಅರೆಮಾತಿನಲಿ “ದಾನಮ್ಮ-ಅಕ್ಕನ
ಪುರಾಣ” ಬರೆಯಲು ವರವಾಗು॥೨೧॥

ಶರಣರ ಬಳಿವಿಡಿದು । ಧರೆಗಿಳಿದ “ಗಾಂಧೀಜಿ” ।
ಬರೆವೆನವನ ಅಮರ ಕಾವ್ಯವ-ಶರಣರೆ
“ಪುರಾಣ ಸಿದ್ಧ”ನ ಮುಗಿದಿರೆ॥೨೨॥

ಸಾವಿಲ್ಲದ ಸಡಗರ। ಭಾವದಲಿ ಕಾಣುವೆನು।
ದೇವನ ಕೈಯ ಹಿಡಿದಾಗ - ಈ ಭವ
ಭವದ ಮಾಲೆ ಬಯಲಾಯಿತು॥೨೩॥

ಶಿವಯೋಗಿ ಸಿದ್ಧೇಶ। ದೇವ ಚನ್ನಬಸವ ।
ರೇವಣಸಿದ್ಧ ಪ್ರಭುದೇವ- ಬಸವಂಣ
“ಸರ್ವಜ್ಞ” ಅಣ್ಣಗೆ ಶರಣೆಂಬೆ॥೨೪॥

ಸುಗಲವ್ವೆ ರುದ್ರವ್ವೆ। ಮಿಗಿಲಾದ ಶರಣಿಯರೆ ।
ಸುಗಮದಿ ಹಾಡ ನಡಿಸರಿ-ದಾನಮ್ಮ
ಸಾಗಿಸಿರಿ “ಸಾವಿರ ಪದ”ಗಳ॥೨೫ ॥

ಅಕ್ಕ ನಾಗಲತಾಯಿ। ಅಕ್ಕಮಹಾದೇವಿಯೆ।
ಮಿಕ್ಕೀದ  ನೀಲಮ್ಮ ಗಂಗಮ್ಮ -ಸಂಗವ್ವೆ
ಚಿಕ್ಕಮಗಳಾನು ಸಲುಹೀರಿ॥೨೬॥

ಎಲ್ಲ ಬಲ್ಲವಳೆಂಬ। ಇಲ್ಲವದು ಭ್ರಮೆ ಎನಗೆ ।
ಬಲ್ಲವರ ಪಾದ ಹಿಡಿಯುವೆ- ಬಲ್ಲಿದರು
ಕಲಿಸಿರಿ ಮತ್ತೆ ನುಡಿಸರಿ॥೨೭॥

ಪುರಾಣ ಪೀಠಿಕೆ:

ಸಂಧಿ :೧

ಕೈಲಾಸದ ವರ್ಣನೆ- ಶಿವನ ಆಸ್ಥಾನ. ಭೃಂಗಿಯ ನಾಟ್. ಗಂಧರ್ವರ ನಗೆ -ಭೃಂಗಿಯ ಶಾಪ. ಗಂಧರ್ವರು ಭೂಲೋಕದ ಸೊನ್ನಲಿಗೆಯ ಮುದ್ದುಗೌಡ ಮತ್ತು ಸುಗ್ಗಲದೇವಿ ದಂಪತಿಗಳಾಗಿ ಹುಟ್ಟಿದುದು. ಸುಗ್ಗಲದೇವಿ ಗಂಡನ ಮನೆಗೆ ಹೋದುದು. ಅರುವತ್ತು ವರುಷ ದಾಟಿದರೂ ಸೈಗ್ಗಲೇಗೆ ಮಕ್ಕಳಿರಲಿಲ್ಲ.
ಎತ್ತ ನೋಡಿದರತ್ತ। ಸುತ್ತೀತು ಸಾಗರವು।
ಮತ್ತೆ ಭೂಮಿಯ ಮಧ್ಯದಿ- ಮೇರು ತಲೆ
ಎತ್ತಿ ನಿಂತಿತ್ತು ಧರೆಯೊಳು॥೧॥

ಮೇರು ಪರ್ವತದಿಂದಾ। ದಾರಿ ಉತ್ತರದಿಕ್ಕಿನ।
ಸಾರಿ ಕೈಲಾಸಕ್ಕ್ಹೋಗುವ-ಅಲ್ಲಿ ನಮ್ಮ
ಮಾರಹರ ಮಾದೇವನ ವಾಸವು॥೨॥

ಭೂಮಿ ಸುವರ್ಣವು। ಸೋಮ ಬೆಳಗಿನ ಗೋಡೆ।
ಧಾಮ ಶತಕೋಟಿ ಸೂರ್ಯನ -ತೇಜದಿ
ಅಮಮ! ಬೆಳಗು ಬೆಳಗಿದೆ॥೩॥

ಕಂಭಕ್ಕೆ ಒಪ್ಪಿಹವು। ಒಂಬತ್ತು ಬಣ್ಣಗಳು।
ಶಂಭು ಸಿಂಹಾಸನದ ರತ್ನಗಳು- ಬೀರಿದವು
ಹೊಂಬೆಳಗು ಸುತ್ತಮುತ್ತಲು॥೪॥

ಮಿಂಚಿನ ಮಾಲೆಗಳು। ಹಂಚಿಲ್ಲದೆ ತಾನೆ।
ಪಂಚಸೂತ್ರದಿಂದ ಕೂಡಿಹವು- ಈ ನಮ್ಮ
ಪಂಚಮುಖದವನ ಮಂಟಪಕೆ॥೫॥

ಯತ್ನದ ಆಚೆಯ। ರತ್ನ ಖಚಿತ ಪೀಠ।
ಜತನಾಗಿ ತಂತಾನೆ ನಿಂತಿತ್ತು-ಮಾದೇವ
ಅತಿಹರೈಷದಿ ಕೂತಿಹನು॥೬॥

ಜಡೆಯೊಳು  ಶ್ರೀಗಂಗಾ। ತೊಡೆಮೇಲೆ ಶ್ರೀಗೌರಿ।
ಹೆಡೆ ತೆಗೆದು ಆಡುವ ಸರ್ಪವೆ-ಆಭರಣ
ಮಡಿಮಾಡಿ ಐಟ್ಟಿಹನು ಗಜಚರ್ಮ॥೭॥

ಹೊಳೆವ ಕೆಂಜಡೆಮೇಲೆ। ಎಳೆಯ ಚಂದಿರಬೆಳಕು।
ಸುಳಿಪಲ್ಲ ಹೊಳೆಯುತ ಥಳಥಳ- ಮೈಯೆಲ್ಲ
ಬಳಿದಿಹನು ಶಾವನು ಬಿಳಿ ಭಸಿತ॥೮॥

ವಿಷವನೆ ಸೇವಿಸಿ। ತೃಷೆಯನೆ ನೀಗಿದನು।
ಪಶುಪತಿಯಾಗಿ ಸಕಲಕ್ಕೆ- ಸಲವೂತ
ದೆಸೆದಿಕ್ಕು ಮುಖವಾಗೆಹನು॥೯॥

ಕೊರಳಿಗೊಪ್ಪುವದು। ಗರಳ ನೀಲಿಯಬಣ್ಣ।
ದುರುಳ ಅಸುರರ ರುಂಡಗಳ- ಮಾಲೆಯು
ಹರನಿಗೆ ಕೊರಳ ಸರವಹುದು॥೧೦॥

ರುದ್ರಾಕ್ಷಿ ಮಾಲೆಯ। ಚಿದ್ರೂಪ ಧರಿಸಿಹನು।
ಭದ್ರ ಕಪಾಲವ ಕೈಯಲ್ಲಿ - ಪೆಡಿದಿಹ
ರುದ್ರ ಲೋಕಾದಿ ಒಡೆಯನು॥೧೧॥

ಸುರ ಮುನಿ ಯತಿಗಳು। ಸುರವನ ಪುಷ್ಪಗಳು।
ವರ ಭಕುತಿಯಲಿ ಧರಿಸಿಹರು- ಹರಪಾದ
ಅರ್ಚಿಸಿ ನಿಂತಿಹರು ಸಾಲಾಗಿ॥೧೨॥

ದೇವಗಣರು ಭಕ್ತಿ । ಭಾವದಿಂ ಬರುತಿಹರು।
ಧಾವಿಸಿ ಕೈಲಾಸ ಬಾಗಿಲಿಗೆ-ದೇವರ
ದೇವನಡಿಗೆ ಶರಣೆನುತ॥೧೩॥

ಯತಿ ಮುನಿ ಋಷಿಗಳು। ಅತಿ ಬಕುತಿಯಲಿ।
ನುತಿಸುತ ನಿಂದಿಹರು ಹರನನ್ನು- ನೀವೆಮ್ಮ
ಗತಿ ಮತಿ ನೀಡಿ ಸಲುಹೆಂದು॥೧೪॥

ಹರನನ್ನ ಅರ್ಚಿಸಿ। ಹರಿಯು ವಿಷ್ಣುಪದವ।
ದೊರಕಿಸಿ ಚರಾಚರವೆಲ್ಲವ -ಸಾಕೂತ
ಪೊರೆವನು ಸ್ಥಿತಿಗೆ ಒಡೆಯ॥೧೫॥

ಶಿವನನ್ನು ಪೂಜಿಸಿ। ಜೀವರಾಶೀಗಳಿಗೆ।
ಭುವಿಯೊಳು ಹುಟ್ಟಿಸುವಾತ-ಬ್ರಹ್ಮನು
ಶಿವಸಭೆಯೊಳು ಕೂತಿಹನು॥೧೬॥

ಇಂದ್ರನಿಗೈಸಿರಿ । ಚಂದ್ರನೆಗೆ ಕಲೆಗಳ।
ಸಾಂದ್ರ ಫಲಪದವ ನೀಡುವಾತ - ಮಾದಾನಿ
ಆದಿತ್ಯಗೆ ತೇಜ ಕೊಟ್ಟಿಹನು॥೧೭॥

ಮನು ಮುನಿಗಳಿಗೆಲ್ಲ। ಅನುರಾಗದಿಂದಲಿ।
ಘನ ಪದವ ನೀಡಿಸಲುವಿದನು- ದೇವನು
ಅನುಮತದಿ ಶಕ್ತಿಗಳಿಗೆಲ್ಲ॥೧೮॥

ಹರನ ಉರಿಗಣ್ಣಿಂದ। ವೀರಭದ್ರನ ಜನಿಸಿ।
ಧರಿಸಿಹನು ಉಗ್ರರೂಪವ- ದ್ರೋಹೀಗಳ
ಗರುವಿನ ಗರಳವ ಕೊಯ್ಯಲು॥೧೯॥

ಬಾಲ ಗಣಪತಿಯು । ಲೀಲೆಯಲಿ ಲೋಕದ।
ಕುಲ ಕೋಟಿಗಳ ಸಂಕಟ -ಹರಿಸಲು
ಬಲಗಡೆ ಕೂತಿಹನು ತಂದೆಯ॥೨೦॥

ಷಣ್ಮುಖನೆಂದನು। ಮುಕ್ಕಣ್ಣನಧಿಕನೆಂದು।
ಮಣಿಸಿಲ್ಲ ತಾಯಿಗೆ ತನ್ನ ತಲೆ -ತಂದೆಗೆ
ಮಣಿಮಣಿದು ಶರಣು ಮಾಡುವ॥೨೧॥

ಹಸನಾದ ಮನಸೀನ । ಬಸವ ಕುಳಿತಿಹನು।
ವಸುಧೆಯ ಜನಕೆ ಅಶನವ - ನೀಡುತ
ಕಸುವಿನಿಂದ ಕಸವ ತೆಗೆಯುತ॥೨೨॥

ಪರಮನ ದರುಶನಕೆ।ಸುರ ಮುನಿ ಶಿವಗಣ।
ಭರದಿಂದ ಬಕುತಿಲಿ ಸರಗೊಂಡು-ಬರೈವಾಗ
ಹರಸುತ ಭೃಂಗಿಯ ಆಗಮನ॥೨೩॥

ಚೆಲುವಿಕೆ ಚಿಮ್ಮಿತು। ಒಲಿದಿಹಳು ಸಿರಿದೇವಿ।
ಸಲೆ ಯೌವನವು ಮೂಡಿತು-ಗೆಳೆಯರು
ಬಲು ಬಕುತಿಯಲಿರುತಿಹರು॥೨೪॥

ವಾರಿಗಿ ಗೆಳೆಯರು। ಹರನ ಸಭೆಯೊಳಗೆ।
ಬರುವಾಗ ಸುರಾಸುರರೆಲ್ಲ- ನುಡಿವರುಮ
ಕೊರತಿಲ್ಲ ಅಧೊ ಊರ್ಧ್ವರಿಗೆ॥೨೫॥

ಸದ್ಗುಣ ಶೀಲರು । ಮದನನ ಚಲುವಿಕೆ ।
ವಿದ್ಯೆಯಲಿ ಬಲು ನಿಪುಣರು- ಗಂಧರ್ವರು
ಅದ್ರಿಶಿರ ಊರ್ಧ್ವಶಿರರು॥೨೬॥

ಗಂಧರ್ವರಿಬ್ಬರು। ಒಂದೆ ಮನಸಿನವರು।
ಇಂದುಧರನ ದರುಶನ -ತಕ್ಕೊಂಡು
ಮಂದಹಾಸ ಬೀರುತ ನಿಂತಿಹರು॥೨೭॥

ಭೃಂಗಿ ನೋಡದನಾಗ। ಶೃಂಗಾರ ಮದವೇರಿ ।
ಮಂಗನಂತೆ ನೋಡಿ ನಗುವಿರಿ-ಮರುಳರೆ
ಭಂಗವಾಗಲಿ ಸಿಂಗರದಿರುವಿಕೆ॥೨೮॥

ಭುವಿಯೊಳು ಜನಿಸಿರಿ। ಭವಿತನದಿ ಇಬ್ಬರು ।
ನವ ದಂಪತಿಗಳು ಬಾಳಿರಿ- ಮರೂಳರೆ
ಶಿವನಿಂದಗಲಿ ಅಲ್ಲಿ ಹೋಗಿರಿ॥೨೯॥

ನುಡಿ ಕೇಳಿ ಗದಗದ। ನಡುಗಿದರಿಬ್ಬರು ।
ಗುಡ್ಡ ತಲೆ ಮೇಲೆ ಬಿದ್ದಂತೆ- ನಿಂತಲ್ಲಿ
ಜಡರಾಗಿ ಕಂಣು ಮುಚ್ಚಿದರು॥೩೦॥

ರೂಪದೈಸಿರಿ ಗರುವ। ಈ ಪರಿ ತಲೆಗೇರಿ।
ಶಾಪಕ್ಕೆ ಗುರಿಯಾಯಿತು-ಮೂಢರೆ
ಪಾಪ ತೊಳೆ ಮರ್ತ್ಯಕ್ಕೆ ಹೋಗಿರಿ॥೩೧॥

ನಿಮ್ಮ ನೋಡಿ ನಗಲಿಲ್ಲ। ಹೆಮ್ಮೆಮಗೆ ಇನಿತಿಲ್ಲ।
ದಮ್ಮಯ್ಯ ನಿಮಗೆ ಶರಣೆಂದು-ಕೋರೈವೆವು
ಎಮಗೇಕೆ ಘೋರ ಶಾಪವು॥೩೨॥

ಮೂರುಪಾದವ ನೋಡಿ । ಗರವಿಲಿ ನಗುವಿರಿ ।
ಬರೆಕಾಯದ ತುತ್ತಾಗಿ- ಬಾಳಿದಿರಿ
ಹರಗಣ ಮಹಿಮೆ ಅರಿಯದೆ॥೩೩॥

ನಿತ್ಯದಿ ಕಾಣುವೆವು। ಸತ್ಯಮೂರುತಿ ನಿಮ್ಮ।
ಕತ್ತು ಬಾಗಿಸಿ ಶರಣೆಂಬೆವು - ಶಿವಸುತ
ಇತ್ತು ಉಶಾಪ ಸಲುವಯ್ಯ॥೩೪॥

ಕೊರಗೀನ ನುಡಿ ಕೇಳಿ। ಕರುಣಿಸಿ ಭೃಂಗಿಯು।
ಪರ ನಿಮ್ಮುದರದಿಹುಟ್ಟುವನು -ನೀವು ಅ-
ಮರರಾಗುವಿರಿ ಇಳೆಯೊಳು॥೩೫॥

ಭಗ್ನ ಹೃದಯದಿಂದ। ವಿಘ್ನಕ್ಕೆ ಒಳಗಾಗಿ ।
ದಿಗ್ ಮೂಢರಾಗಿ ಶಿವಪಾದ- ಹಿಡಿದಾಗ
ಮೊಗ ಎತ್ತದೆ ಧಾರೆ ಹರಿದವು॥೩೬॥

ಮೃಡನ ಅಡಿಮೇಲೆ । ಗಡಗಡ ಉರುಳಿದರು।
ಸಿಡಿಲು ಮಿಂಚಿನ ಸೆಳೆಯೊಂದು - ಹೊಳೆದಾಗ
ದೃಢಮನದಿ ಪಾದ ಪಿಡಿದಿಹರು॥೩೭॥

ಹರ ಹರ ಮಹಾದೇವ। ಸುರವರ ವಂದೀತ।
ಮಾರಹರ ನಿನಗೆ ಶರಣೆಂದು-ನಲಿವಾಗ
ವರ ಗಣ ಭೃಂಗಿ ಶಪಿಸುವದೆ॥೩೮॥

ಪಾಪ ತೊಳೆಯಲು ಹೋಗಿ । ಕೂಪದೊಳು ಬಿದ್ದಂತೆ ।
ವಿಪರೀತ ಇಂದು ಘಟಿಸಿತ್ತು--ಓ ತಂದೆಟ
ಶಾಪ ನಿಮ್ಮೆದುರು ಉಚಿತವೆ॥೩೯॥

ನನ್ನಾಧೀನ ಏನಿಲ್ಲ। ನನ್ನಧಿಕ ನಮ್ಮವರು।
ಅನುಗಾಲ ಅವರ ಸೇವಕನು-ಆಗಿರುವೆ
ಏನು ಮಾಡಲೀಗ ಬಾರದು॥೪೦॥

ನೆರಳೀನ ನೆರವಿಗೆ। ಹೊರಳಿ ಬಂದಿತು ಬಿಸಿಲು।
ಗರಳಕಂಠನ ನುಡಿ ಕೇಳಿ-ಗಂಧರ್ವರ
ಮರಳಿ ಉಮ್ಮಳಿಸಿತು ದುಃಖವು॥೪೧॥

ಶಿವ ನಿನ್ನ ಪಾದಕ್ಕೆ। ತವೆ ಬಕುತಿಲಿ ಬಂದರೆ।
ಭವಮಾಲೆಗೊಳಗಾಗಿ ಹೋಗುವದೆ-ದೇವನೆ
ಸಾವು ಹುಟ್ಟಿನ ತವರೂರಿಗೆ॥೪೨॥

ಭುವಿಯೊಳ್ ನಿಮ್ಮುದರದಿ। ಶಿವಯೋಗಿ ನಾನಾಗಿ।
ಭವ ಪರೆಹರೆಸಲು ಜನಿಸುವೆ-ಸೊನ್ನಲಿಗೆ
ಅವಿಮುಕ್ತ ಕ್ಷೇತ್ರವೆನಿಸುವೆ॥೪೩॥

ಸೊನ್ನಲಿಗೆ ಗ್ರಾಮದಿ। ಸನ್ನುತ ಸತಿಪತಿ।
ಮನ್ನಣೆ ಪಡೆದ ಗೌಡರ-ಮನೆತನದಿ
ಚೆನ್ನಿಗರೆ ಹುಟ್ಟಿ ಬಾಳುವಿರಿ॥೪೪॥

ಶಂಭುವಿನ ಮುಖದ। ಅಭಯ ವಚನವ ಕೇಳಿ।
ಸಭಿಕರು ಅಚ್ಚರಿಗೊಳುತ- ಹರಹರ
ಶುಭವೆನ್ನಿ ಜಯ ಜಯವೆನ್ನಿ॥೪೫॥

ತಲ್ಲಣಗೊಳ್ಳುತ। ಮೆಲ್ಲನೆ ನುಡಿದರು।
ಬಲ್ಲ ಪ್ರಥಮರ ಕೋಪಕ್ಕೆ-ಗುರಿಯಾಗಿ
ಎಲ್ಲಿ ಹೋಗೋಣ ನಿಮ್ಮಗಲಿ॥೪೬॥

ನಿಮಗಾಗಿ ಬರುವೆ।ಶಮನವಾಗಲಿ ಶೋಕ।
ಸುಮನದಿ ನೀವು ನಡೆಯಿರಿ-ಜನಕೆಲ್ಲ
ನೇಮ ನಿತ್ಯ ಸತ್ಯ ಅರುಹಲು॥೪೭॥

ಕೂಡಒಕ್ಕಲಿಗರ। ಗೌಡರ ಮನೆತನದಿ।
ಜಡರಹಿತ ಬಾಲಕನು ಜನಿಸಿಹನು-ಸೀಮೆಯ
ಅಡವಿ ಹೊಲ ಹಸಿರುಹಸಿರಾಗಿ॥೪೮॥

ಹಾಳ ಬಿದ್ದ ಹೊಲ। ಬೀಳಬಿದ್ದ ಅಡವಿ।
ಮೊಳೆತು ಬೆಳೆದಾವ ಬೆಳೆಗಳು- ಒಕ್ಕಲಿಗ
ಉಳಿಗಾಲ ಬಂತೆಂದು ಸಂತೈಸಿ॥೪೯॥

ಮೊರಡಿ ಮೈದಾಳಿದವು। ಬರಡು ಹಯನಾಗಿ।
ಕೊರಡು ಕೊನರಿದ ದಿನಗಳು-ಉದಯಿಸೆ
ಮೊರಡಿ ಮುದ್ದುಗೌಡನ ಜನನದಿ॥೫೦॥

ಧನ್ಯಧನ್ಯ ನಿಮ್ಮಯ। ಪುಣ್ಯ ತನುಜನಿಂದ।
ಅನ್ನ ಉಣ್ಣುವೆವು ಹೊಟ್ಟೆತುಂಬ-ಸುಖ ಸಂ
ಪನ್ನ ದಿನಗಳ ಕಂಡಿಹೆವು॥೫೧॥

ಮುದ್ದಾದ ಅಂಗಾಂಗ। ತಿದ್ದಿ ಮಾಡಿದಹಂಗ।
ಎದ್ದು ಕಂಡಿತ್ತು ಸ್ವರೂಪ- ಕೂಸಿಗೆ
ಮುದ್ದುಗೌಡನೆಂದು ಕರೆದರು॥೫೨॥

ಸಂಣಊರ ಗೌಡನು। ಹುಂಣಿಮೆಯ ಚಂದಿರನು।
ಕಂಣ್ಣು ಕೊರೆಯುವ ರೂಪದ- ಪುತ್ಥಳಿ
ಗುಣನಿಧಿಯಾಗಿ ಬೆಳೆದಿಹನು॥೫೩॥

ಸೊನ್ನಲಗಿ ಊರಲ್ಲಿ। ಇನ್ನೊಂದು ಮನೆಯಲ್ಲಿ ।
ಚಿನ್ನದಂಥ ಹೆಣ್ಣುಹುಟ್ಟಿತು-ಜನುಮಕ್ಕೆ
ಹೊನ್ನಿನ ಮಳೆಯು ಕರೆದಂತೆ॥೫೪॥

ಸುಗ್ಗಿಯ ದಿನಗಳು। ಹಿಗ್ಗಿದ ಒಕ್ಕಲಿಗ।
ವೆಗ್ಗಳ ಹಾಲು ತುಂಬಿದ-ತೆನೆಹೊತ್ತು
ಬಾಗಿ ನಿಂತಿಹವು ಪೈರುಗಳು॥೫೫ ॥

ಹೊಲದ ರಾಶಿಯ ತಂದು। ಕುಲವೆಲ್ಲ ಹಿಗ್ಗಿತು।
ಬಾಲೆಗೆ ಸುಗ್ಗವ್ವೆ ಎಂದು ಹೆಸರು- ಕರೆದರು
ಬಲ ನಮ್ಮ ಭೂಮಿಗೆ ಬಂತೆಂದು॥೫೬॥

ದೇವಲೋಕದ ರೂಪ। ಭೂಮಿಯೊಳು ಮೂಡಿತ್ತು।
ಸವಿನಯ ಶಾಂತಿಗೆ ತವರಾಗಿ-ತೋರುತ
ಶಿವಸುತೆ ಬೆಳೆಯುತಿಹಳು॥೫೭॥

ನಿಂಬೆ ಹಂಣ್ಣಿನ ಬಂಣ್ಣ। ತುಂಬಿದ ಮೈಕಟ್ಟು।
ರಂಭೆ ರತಿಯರಂತೆ ಚಲುವಿಕೆ- ಸುಗ್ಗವ್ವೆ
ಇಂಬಿಲ್ಲ ಯಾವ ಕುಂದಿಗೆ॥೫೮॥

ಮಮತೆಯ ಮಗಳು। ಸಮತೆಯ ಪುತ್ಥಳಿ।
ನೇಮದಿ ಹರನ ಸೇವೆಯ- ಮಾಡೂತ
ಸೋಮನ ಕಳೆಯು ಬೆಳೆಯುತಿರೆ॥೫೯॥

ಬಂದಿಹಳು ಮದುವಿಗೆ। ಚಂದಾದ ವರನನ್ನು।
ಕಂದಮ್ಮಗಿನ್ನು ನೋಡಬೇಕು-ಎಂದರು
ತಂದೆ ತಾಯಿಗಳು ಮನವಾರೆ॥೬೦॥

ಗೊತ್ತಿಲ್ಲ ಅವರಿಗೆ। ಸತ್ ಚಿತ್ತಾನಂದನ।
ಹೆತ್ತವ್ವಳಾಗಿ ಜನಿಸಿದ್ದು- ಭವದಲ್ಲಿ
ಕತ್ತಲೆ ಕಳೆಯಲು ಬಂದದ್ದು॥೬೧॥

ಒಕ್ಕಲಿಗರ ಮಗಳು। ಸೊಕ್ಕು ಹಮ್ಮುಗಳಿಲ್ಲ।
ಚಿಕ್ಕ ಮಕ್ಕಳಂತೆ ತಿಳಿಮನ- ಸುಗಲವ್ವೆ
ಮುಕ್ಕಣ್ಣನ ಮಗಳು ಬೆಳೆಯುವಳು॥೬೨॥

ಸುಗ್ಗವ್ವೆಯ ತಾಯ್ ತಂದಿ। ಹಿಗ್ಗಿದರು ವರ ನೋಡಿ।
ಮೊಗ್ಗು ಅರಳುವ ಮೊದಲಿಗೆ-ಗೌಡರ
ಮಗ ಮುದ್ದುಗೌಡನಿಗೆ ಒಪ್ಪಿಸಲು॥೬೩॥

ಮಗನೀಗೆ ಒಪ್ಪುವ। ಸುಗುಣಿ ಸೊಸೆಯ ತಂದು।
ಸಗ್ಗದ ಸುಖವು ಮರ್ತ್ಯದಿ-ಇಳಿದಿತ್ತು
ಹಿಗ್ಗಿದರು ಗೌಡರು ಗೌಡತಿ॥೬೪॥

ಮುದ್ದುಗೌಡರ ಮದುವಿ। ಸುದ್ಧಿ ಕೇಳಿದ ಜನ।
ಹಾದಿಬೀದಿ ತುಂಬಿ ಬರುತಿತ್ತು-ಕಾಲ್ ಧೂಳಿ
ಎದ್ದು ಮುಖಕೆಲ್ಲ ಒರಸಿತ್ತು॥೬೫।॥

ಕಳಸ ಕನ್ನಡಿಯಿಂದ। ಹೊಳೆದೀತು ಮಂಟಪ।
ತಳಿರ ತೋರಣ ಕಟ್ಟಿಹರು-ಅಲ್ಲಲ್ಲಿ
ಬಾಳಿ ಕಂಬಗಳ ನಿಲ್ಲಿಸಿಹರು॥೬೬॥

ಸುರಗಿ ಸುತ್ತಿಹರವರು। ಹರದೆಯರೆಲ್ಲರು।
ಅರಿಸೀಣ ಹಚ್ಚಲು ನೆರೆದಿಹರು-ಮಂಟಪದಿ
ವರ ವಧುವಿಗೆ ಕರೆತಂದು॥೬೭॥

ಮುತ್ತೈದೆರೆಲ್ಲರು। ನತ್ತಿಟ್ಟು ನಲಿಯೂತ।
ಮುತ್ತಿನಾರರುತಿ ಬೆಳಗೂತ- ಹಾಡಿದರು
ಸತಿಪತಿಗೆ ಜಯ ಜಯವೆಂದು॥ ೬೮॥

ಗುರುವೀಗೆ ನೆನೆಯೂತ। ಹರನೀಗೆ ಸ್ತುತಿಸೂತ।
ಪರಮ ಪಾವನ ನೈಯಂಣಿ-ಎರೆಯೂತ
ಕರುಣೆಯ ಕೋರಿದರು ಸತಿ ಪತಿಗೆ॥೬೯॥

ಹಂದರದೊಳಗಿನ। ಇಂದುಮುಖಿಯರೆಲ್ಲ।
ಮಂದಹಾಸವ ಬೀರೂತ- ದೇವಕಾರ್ಯ
ನಂದದಿ ಮಾಡಿಹರು ನಲಿಯೂತ॥೭೦॥

ಧಾರೆಯ ಎರೆದರು। ನೀರೆ ಸುಗ್ಗಲದೇವಿಗೆ।
ಪರಮ ಸಂತಸದಿ ಸಂಸಾರ -ಮಾಡಿ ಇಹ-
ಪರ ಸಾಧೀಸೆಮಗಳೆಂದು॥೭೧॥

ತಂದೆತಾಯಿಗಳಿಗೆ। ಬಂಧು ಬಾಂಧವರಿಗೆ।
ಕಂದಳಾಗಿ ಬೆಳೆದ ಸುಗ್ಗವ್ವೆ- ಈ ದಿನ
ತಂದೆತಾಯ ಮನೆಗೆ ಎರವಾಗಿ॥೭೨॥

ಅತ್ತಿ ಮಾವಂದಿರು। ಹೆತ್ತ ತಾಯಿತಂದೆಗಳು।
ತೊತ್ತೆಲ್ಲ ನಿನ್ನ ಮಕ್ಕಳು- ನೋಡಿಕೊಳೆ
ಉತ್ತುಮರ ಮಗಳೆ ಬಾಳವ್ವ॥೭೩॥

ಪತಿಯ ನೆರಳಾಗಿ। ಹಿತದ ಸ್ನೇಹಿತೆಯಾಗಿ।
ಪತಿಯೆ ಪರದೈವ ಎನುತಲಿ- ಸೇವೆಯ
ಮತಿವಂತೆ ಮಗಳೆ ನೀಮಾಡೆ॥೭೪॥

ದೇವನಲ್ಲಿ ಬಕುತಿ। ಭಾವದಲ್ಲಿ ನಿಷ್ಠೆ।
ನೋವಿಗೆ ಹೆದರಬೇಡವ್ವ - ಸಂಸಾರದ
ಧಾವತಿ ತಿಳಿದು ನಡೆಯವ್ವ॥೭೫॥

ನಸುಕಿನಲಿ ಏಳವ್ವ। ಕಸಕಡ್ಡಿ ತಗೆಯವ್ವ।
ಈಶನ ಸ್ಮರಿಸುತಮನೆಗೆಲಸ- ಮಾಡವ್ವ
ನಸುನಗುತ ಮಾತ ಆಡವ್ವ॥೭೬॥

ನಯಬೇಕು ನುಡಿಯಲ್ಲಿ। ಭಯಬೇಕು ನಡೆಯಲ್ಲಿ।
“ದಯಬೇಕು ಸಕಲ ಜಿವರಲಿ” -ತಂಗೆಮ್ಮ
ಲಯಬೇಕು ಶಿವನ ನೆನೆವಲ್ಲಿ॥೭೭॥

ಕಾಯಕದಲ್ಲಿ ನಿನ್ನ। ಕಾಯವ ಉಳಿಸದೆ।
ಮಾಯದ ಬಲೆಗೆ ಸಿಲುಕದೆ-ಎಲ್ಲರ
ಬಾಯಲ್ಲಿ ನಿನ್ನ ಹೆಸರಿರಲಿ॥೭೮॥

ಕಲ್ಲಿನಂಥ ಗುಣವ। ಕಲಿಬೇಡ ನನ ಮಗಳೆ।
ಬಲ್ಲ ಸಂಸ್ಕಾರ ನಿನ್ನ ಮೇಲೆ- ಬೀರಿದೆ
ನೆಲ್ಲಿಕಾಯಿಯಂತೆ ಇರಬೇಕು॥೭೯॥

ಶಿವನು ಮನ ನೋಡಲು।ಭವಕೆ ತಂದಾನವ್ವ।
ದೇವಲೋಕದ ಮಗಳೆಂದು-ಎನಿಸವ್ವ
ತವರೀನ ಹೆಸರ ತರಬೇಕು॥೮೦॥

ಬುದ್ಧಿ ಮಾತವ ಹೇಳೆ। ಗೆದ್ದರು ತಾಯಿತಂದೆ।
ಬಿದ್ದಿಹಳು ಅವರ ಪಾದಕ್ಕೆ- ಸುಗ್ಗಲವ್ವೆ
ತಿದ್ದಿರೆಂದಳು ತನ್ನ ಮನವ॥೮೧॥

ಸುಗುಣ ಮೂರುತಿ ನಮ್ಮ। ಭಾಗ್ಯದ ದೇವತೆ।
ಸುಗ್ಗವ್ವೆ ನಿನ್ನ ಪಡೆದಂತ- ನಮಗರುಳು
ಹಿಗ್ಗೀನ ಮಡಲಲ್ಲಿ ಮುಳಿಗೀತು॥೮೨॥

ಕಂಣು ತುಂಬಿದವಾಗ। ಸಂಣಾಗಿಹುದು ದನಿ।
ಹೆಂಣ್ ಹಡೆದಗರುಳು ತಂಣಗಾಗಿ-ಜಗದ
ಕಂಣಾಗಲೆಂದು ಹರಸಿದರು॥೮೩॥

ಹಸನಾದ ಮನಸಿನ। ಸೊಸೆ ಬಂದು ನಡೆವಾಗ।
ಹೊಸಪೈರು ಮೊಳೆತು ಹಸಿರಾಗಿ- ಹೂವಾಗಿ
ಲೇಸ ದಿನಗಳ ಮುನ್ ಸೂಚಿ॥೮೪॥

ಸೊನ್ನಲಿಗಿಗಿಳಿದಳು। ಅನ್ನಪೂರ್ಣದೇವಿಯು।
ಅನ್ನ ನೀರಿಗೆ ಕೊರತಿಲ್ಲ-ಸೊನ್ನಲಗಿ
ಹೊನ್ನಿನಶಕಣಿಯಾಗಿಕಂಡೀತು॥೮೫॥

ಏಸು ಜನ ಬಂದರು। ಬೇಸರ ಇನಿತಿಲ್ಲ।
ಬಿಸಿಮಾಡಿ ನೀಡುವಳು ಅಡಗಿಯ- ದೇವಿಯ
ಹೆಸರಾಯ್ತು ಹಳ್ಳಿ ಪಳ್ಳಿಯಲಿ॥೮೬॥

ಬಡವರಮೇಲೆ ದಯೆ। ದುಡಿಯುವ ಆಳಿಗೆ।
ಹಡದವ್ವ ಆಗಿ ಸಲುವುವಳು- ಸುಗ್ಗಲವ್ವೆ
ಗೌಡತಿ ಎಂಬ ಗರೈವಿಲ್ಲ॥೮೭॥

ಮಿತ ಭಾಷೆ ಸುಗ್ಗವ್ವೆ । ಅತಿಭಕ್ತಿ ಉಳ್ಳವಳು।
ಸತಿಯರ ರೀತಿ ಅರಿತವಳು- ತಾಯವ್ವ
ಪತಿಯ ನೆರಳಾಗಿ ನಡೆವಳು॥೮೮॥

ಅತ್ತಿ ಸೊಸೆಯ ಜಗಳ।ಹೆತ್ತತಾಯಿಯ ಗೋಳ।
ಅತ್ತತ್ತು ಹೇಳುವ ನೊಂದವರಿಗೆ-ಧೀರದ
ಮಾತ್ ಹೇಳಿ ಮನೆಗೆ ಕಳುಹುವಳು॥೮೯॥

ವರಪ್ರಾಯ ಮೂಡಿತ್ತು। ಮಿರಿ ಮಿರಿ ಮಿಂಚೂತ।
ಸಿರಿ ಶಿವತೇಜವು ಹೊರಹೊಮ್ಮಿ-ಕಂಡಿತ್ತು
ಧೀರ ಗಂಭೀರ ಮುಖವು॥೯೦॥

ಮಕ್ಕಳು ಇಲ್ಲಂತ । ಕಕ್ಕುಲಾತಿಯ ಮಾತು।
ಪಕ್ಕದವರ ಮುಂದೆ ಆಡಿಲ್ಲ- ಲೋಕದ
ಮಕ್ಕಳ ತಾಯಾಗಿ ಇರುವಳು॥೯೧॥

ಹರೆಯತನ ಉರುಳಿ। ನರೆಯಾಗಿ ತಲೆ ತುಂಬ।
ತೋರಿತು ಮುಪ್ಪಿನ ಛಾಯೆಯು-ತಾಯಿಯ
ಹಿರಿಯತನ ಸಾರಿ ಹೇಳಿತ್ತು॥೯೨॥

ಪತಿಯ ನೆರಳಾಗಿ । ಸತಿತನ ಜತನಾಗಿ।
ಹಿತದ ನುಡಿಗಳ ಹೇಳೂತ- ಕಳೆವಳು
ಸತಿಯಳಿವರ ಬಳ್ಳಿ ಹಬ್ಬಲಿ॥೯೩॥

ಮುದ್ದುಗೌಡನು ಊರ। ತಿದ್ದುವ ಜನಮನವ।
ಸಾಧುತನಕೆ ತವರಾಗಿ- ಸೊನ್ನಲಗಿ
ಮೇದಿನಿಯೊಳು ಹೆಸರಾಗಿ॥೯೪॥

ಊರಲ್ಲಿ ಜಗಳಿಲ್ಲ। ಚೋರರ ಭಯವಿಲ್ಲ।
ಜಾರತನದ ಸುಳಿವಿಲ್ಲ- ಜನರೊಳು
ಹಿರಿ ಕಿರಿದೆಂಬ ಭೇದವಿಲ್ಲ॥೯೫॥

ಶಾಂತವೃತ್ತಿಯವರು। ಕಾಂತ್ಯುಳ್ಳ ಮುಖದವರು।
ಭ್ರಾಂತಿಯ ಮೂಲ ತಿಳಿದವರು- ಸತಿಪತಿ
ಅಂತಕಾಂತಕನಗೆಲಿದವರು॥೯೬॥

ಪೂರ್ವಜನುಮದ ನೇಹ। ಉರ್ವಿಯೊಳು ಜನಿಸಿ।
ಈರ್ವರು ಸುಖವಾಗಿ ಇರುತಿಹರು-ಎಲ್ಲವು
ಸರ್ವೇಶಗರ್ಪಿಸಿ ನಡೆದಿಹರು॥೯೭॥

ವರದಾನಿಗಳೆಂದು। ಪರಮ ಧರ್ಮಿಗಳೆಂದು।
ಸಾರಿತ್ತು ಕೀರುತಿ ಸುತ್ತಲು- ಮಕ್ಕಳ
ಕೊರತ್ಯೊಂದು ಎದ್ದು ಕಂಡೀತು॥೯೮॥

ಮುಟ್ಟು ತಟ್ಟಾಗಿ । ಸುಟಗೊಂಡು ಶುಚಿಯಾಗಿ।
ದಿಟಯೋಗಿ ಹುಟ್ಟಿನ ನೆಲವಾಗಿ- ನಿಂದಳು
ಸಾಟಿ ದಾಟೀದ ಸುಗ್ಗಲವ್ವೆ ॥೯೯ ॥

ಸಂಧಿ:೩

ಶ್ರೀ ಸಿದ್ಧರಾಮೇಶ್ವರ ಜನನ- ಜೋಗುಟಳ, ಹುಟ್ಟುಮೌನಿ ಹೆಸರು ಧೂಳಿಮಾಕಾಳ

ಜಗವೆಲ್ಲ ಮಲಗಿತ್ತು। ಯೋಗಿ ತಾ ಎಚ್ಚತ್ತು।
ಬಗೆದು ತಾಯ್ ತನ ಹೊರಬಂದ- ಸಿದ್ಧರಾಮ
ಮುಗಿಲ ಚಂದಿರನ ಬೆಳಗಿನಲಿ॥೧॥

ಬೇನಿಲ್ಲ ಬೆವರಿಲ್ಲ।ತನು ಮನಕೆ ದಣುವಿಲ್ಲ।
ಕನಿಕರದಿ ತಾಯಿ ಮಿಡುಕಿಲ್ಲ- ಪರಮ ಅ-
ಯೋನಿಜಗೆ ಜನುಮ ಕೊಟ್ಟಳು॥೨॥

ಥರಥರ ನಡುಗಿಲ್ಲ। ನಾರಿಯರ ನೆರವಿಲ್ಲ।
ಮೋರೆ ಕೆಡಿಸಿ ಬೇನೆ ತಿನಲಿಲ್ಲ-ಸುಗ್ಗವ್ವೆ
ಪರಮನ ತಾಯಾಗಿ ಮಲಗಿಹಳು॥೩॥

ಮುಟ್ಟು ಮೈಲಿಗೆ ಇಲ್ಲ। ಬಟ್ಟಲಗಂಣೀನ।
ದಿಟಯೋಗಿ ತಾ ಮಲಗಿಹನು- ಸಿದ್ಧರಾಮ
ದಿಟ್ಟಿ ಶಿವನಲ್ಲಿ ಇಟ್ಟಿಹನು॥೪॥

ಹಸನೀಲಿಯ ಕಂಣು। ನಸುಗೆಂಪಿನಲಿ ನಿಂತು।
ಅಸು ಬೆಳಗಿನಲ್ಲಿ ಕೂಡಿತ್ತು-ಸಿದ್ಧೇಶ
ಶಿಶು ಶಿವತೇಜ ಹೊಂದಿತ್ತು॥೫॥

ತೊಳೆದ ಮುತ್ತಿನಂತೆ। ಹೊಳೆವ ಮಾಣಿಕದಂತೆ।
ಒಳಹೊರಗು ಬೆಳಗು ಬೀರಿತು- ಮೈಬಂಣ
ಥಳಥಳಿಪ ಕಾಂತಿ ಹೊಳದೀತು॥೬॥

ಸಿದ್ಧರಾಮನು ಭುವಿಗೆ। ಬಿದ್ದ ಆ ಚಣದಲ್ಲಿ।
ಮುದ್ದಾಡಿ ಎತ್ತಿದಳು ಗಿರಿಜಾತೆ- ನನ ಕಂದ
ಉದ್ಧರಿಸು ಭೂಲೋಕ ಮಾನವರ॥೭॥

ಕರಗಳೆ ತೊಟ್ಟೀಲ। ಹರಸೂತ ತೂಗಿದಳು।
ಹರಸಿದ್ಧರಾಮನೆ ಜಯ ಜಯ- ಮಂಗಲ
ಸಿರದಡವಿ ಮಾದೇವಿ ಪಾಡಿದುಳು॥೮॥

ಹೆತ್ತವ್ವ ಎಚ್ಚತ್ತು । ಅತ್ತಿತ್ತ ನೋಡಿದಳು।
ಅತ್ತತ್ತು ಭೂಮಿಗೆ ಬಿದ್ದಿಲ್ಲ-ಕೂಸಿನ
ಸುತ್ತುಮುತ್ತು ಬೆಳಕು ಬೀರಿತು॥೯॥

ನಂಜುಂಡ ಜೀವದ। ಬಂಜೆತನವಳಿಯಿತು।
ಕೆಂಜೆಡೆಯವನ ದಯದಿಂದ-ಬದುಕಿನ
ಸಂಜೆ ಮುಂಜಾವು ಆಯಿತು॥೧೦॥

ಒಳಹೊರಗು ಶಿವತೇಜ। ತೊಳಗಿ ಬೆಳಗಿತ್ತು।
ಎಳೆ ಮುಖದಕಾಂತಿ ತೇಲಿತು-ಸಿದ್ಧನ
ಕಳೆಯು ಶಿವನಂತೆ ಹೊಳೆದೀತು॥೧೧॥

ಬೆಳಗಾಗುತಲೀ ಸುದ್ಧಿ। ಏಳುತ ಜನ ಕೇಳಿ।
ಹಳ್ಳಿ ತುಂಬೆಲ್ಲ ಹರಡೀತು- ದೂರದೂರ
ಕೇಳುತ ಅಚ್ಚರಿಗೊಂಡಿಹರು॥೧೨॥

ಸುಗ್ಗಲವ್ವೆ ಹಡೆದ। ಹಿಗ್ಗೀನ ಸುಗ್ಗಿಯು।
ಸಾಗಿ ಬಂದಿತ್ತ ನಮ್ಮನಿಗೆ- ಸತ್ಯಕ್ಕ
ಹೋಗಿ ನೋಡೋಣ ಕೂಸಿಗೆ॥೧೩॥

ಹೆಚ್ಚಿತು ಶಿವಭಕ್ತಿ। ಮೆಚ್ಚಿದರು ಲೀಲೆಯ।
ಅಚ್ಚರಿಗೊಂಡರು ಕಂದನ- ಕಂಡವರು
ಸಚ್ಚಿದಾನಂದನ ನುತಿಸಿದರು॥೧೪ ॥

ಒಂಬತ್ತು ತಿಂಗಳು। ತುಂಬಿಲ್ಲ ತಾಯೀಗೆ।
ಗೊಂಬಿಯಂಥಕೂಸು ಬದುಕುವುದು-ಹೆಂಗೆಂದು
ಕಂಬನಿ ಸುರಿಸಿದರು ನಾರಿಯರು॥೧೫॥

ಎವೆಯಿಕ್ಕದ ಕಂದನ। ಹವ್ ಹಾರಿ ನೋಡೂತ ।
ಸಾವ ಬಂತೇನವ್ವ ಕೂಸಿಗೆ-ಈ ಪರಿ
ದೇವರ ಕೋಪೇನ ತಾಯಿಗೆ॥೧೬॥

ಮುತ್ತಿನಂಥ ಕೂಸು। ಅತ್ತಿದ್ದು ಕೇಳಿಲ್ಲ।
ಎತ್ತಿಕೊಂಡರೆ ನಗಲಿಲ್ಲ-ಈ ಕೂಸು
ಅತ್ತಿಲ್ಲ ಕೆಳಗೆ ಇಳುಹಿದರು॥೧೭॥

ಅರವತ್ತು ವರುಷಕ್ಕೆ । ಅರುಹಲು ಹುಟ್ಟಿದನು।
ಅರವು ಮರವಿನ ತೊಡಕವ -ಬಿಡಿಸಲು
ಕುರುಹು ಆಗಿ ಬಂದಿಹನು ಭೂಮಿಗೆ॥೧೮॥

ಆಕಳಿಕೆ ಅವಗಿಲ್ಲ। ಬಿಕಿಬಿಕ್ಕಿ ಅತ್ತಿಲ್ಲ।
ಮಕ್ಕಳಂತೆ ಕೈಕಾಲು ಜಾಡಿಸಿ-ಆಡಿಲ್ಲ
ನಕ್ಕು ತಾ ತಾಯಿಗೆ ನಗಿಸಿಲ್ಲ॥೧೯॥

ಅತ್ತತ್ತು ದಣದಿಲ್ಲ। ಹೆತ್ತವ್ವಗ ಕುಣಿಸಿಲ್ಲ ।
ಸುತ್ತ ನೆರೆಯವರ ಜಾಗರಣೆ - ಮಾಡಿಸಿಲ್ಲ
ಸತ್ ಚಿತ್ ಆನಂದ ಮೂರುತಿ॥೨೦॥

ಹಸಿದ್ಹಾಲು ಕುಡಿದಿಲ್ಲ। ತುಸು ನಿದ್ದೆ ಮಾಡಿಲ್ಲ।
ಉಸಿರಾಕಿ ಕಂಣು ಮುಚ್ಚಿಲ್ಲ -ಯೋಗಿಯು
ಕೂಸಾಗಿ ಚಿಟಿಚಿಟಿ ಚೀರಿಲ್ಲ॥೨೧॥

ಸ್ವಾನಂದ ಲೀಲೆಯಲಿ । ಸಾನಂದ ಮೂರುತಿ।
ತಾನೊಂದೆಯಾಗಿ ಆಡುತಿರೆ- ಜನರೆಲ್ಲ
ಏನೊಂದು ಪರಿ ನುಡಿಯುವರು॥೨೨॥

ಅಮರತ್ವ ಅರಿತವರು। ವಿಮಲತ್ವ ತಿಳಿದವರು।
ಸುಮತಿಯರು ಮಾತನಾಡಿದರು- ಈ ಕೂಸು
ಅಮಮ! ದೇವನ ಲೀಲೆಯದು॥೨೩॥

ಅವರವರ ಕಂಣಿಗೆ। ಭಾವದಿ ಕಾಣೂತ।
ಸಾವು ಹುಟ್ಟಿನ ಹೊರೆಯನು- ಹರಿದು ಮಾ-
ನವರೊಳು ಬೆಳೆಯುತಿರೆ॥೨೪॥

ಪರಮ ಹರುಷದಿಂದ। ಪುರದ ಜನರೆಲ್ಲರು।
ನೆರೆದು ತೋಟ್ಟೀಲ ಕಾರ್ಯಕ್ಕೆ-ಸೊನ್ನಲ-
ಪುರವೆಲ್ಲ ಸಿಂಗಾರ ಮಾಡಿದರು॥೨೫ ॥

ಕಳೆಗುಂದದ ಕೂಸು। ತೊಳೆದ ಮುತ್ತಿನಂತೆ।
ಬೆಳೆದನೂ ತಿಂಗಳ ಬೆಳಗಿನ- ಪರಿಕಂಡು ಬೆ-
ರಳು ಕಚ್ಚಿದರು ಪುರಜನರು॥೨೬॥

ಬಂಧು ಬಳಗಕ್ಕೆಲ್ಲ। ಅಂದಳು ಸುಗ್ಗಲವ್ವೆ ।
ಕಂದಗೆ ಹೆಸರೇನು ಇಡಬೇಕು-ನೀವೆಲ್ಲ
ಒಂದೆ ಮನಸಿನಿಂದ ಹೇಳಿರಿ॥೨೭ ॥

ಗುಜುಗುಜು ಗುಣುಗುತ। ಗುಜ್ಜೆಯರೆಂದರು।
ಸೋಜಿಗವಲ್ಲೇನೆ ಹಡೆದದ್ದು-ದೇವರ
ತೇಜವು ಧರೆಗೆ ಬಂದೀತು॥೨೮॥

ಮುನಿದೇವ ಕೊಟ್ಟನು। ಅನ್ಯರ ಹೆಸರೇಕೆ।
ಮನ್ನಿಸಿ ಹೆಸರಿಡು ತಾಯವ್ವ- ಕಂದಗೆ
ಮನಿದೇವ ಧೂಳಿಮಾಕಾಳ॥೨೯॥

ಸಿಟ್ಟಿನ ದೇವರು।ಕೊಟ್ಟಿರಲಿಲ್ಲ ಕೂಸು॥
ಕಟ್ಟಕಡೆಗೆ ಕೊಟ್ಟಿಹನು-ಸುಗ್ಗವ್ವೆ
ಮೊಟ್ಟಮೊದಲವನ ನೆನೆಯವ್ವ॥೩೦॥

ದೇವರ ಸಿಟ್ಟೆಂಬುದು। ಭಾವಕ್ಕೆ ಬಡಿಯಿತು।
ಯಾವ ಮಾತಾಡದೆ ಸತಿಪತಿ-ಒಪ್ಪೂತ
ದೇವ ಮಾಕಾಳನೆಂದು ಕರೆದರು॥೩೧॥

ಬಾಗಿಣಕೆ ಬಂದವರು। ಜೋಗುಳ ಪಾಡಿರೆ।
ಯೋಗಿಯ ವರದಿಂದ ಹುಟ್ಟಿದ- ಚಲುವಗೆ
ಬಾಗಿ ಹೆಸರಿಡರಿ ಮುದದಿಂದ॥೩೨॥

ರೂಢಿಯ ಕೈಯಾಗ। ಆರೂಢ ಸಿಕ್ಕಿಹನು।
ಜೋಡಾಗಿ ಬಪ್ಪಣ ಆಡಿಸುತ-ಕಂದನ
ಸಡಗರದಿ ತೂಗಿರೆ ಜೊ ಜೊ ಜೊ॥೩೩॥

ಹುಟ್ಟುವ ಮುನ್ನವೆ । ದಿಟ ರೇವಣಸಿದ್ಧನ।
ದಿಟ್ಟಿಗೆ ಕಂಡ ವರಶಿಶುವೆ- ಈ ನಮ್ಮ
ತೊಟ್ಟಿಲ ಕೂಸಾದೆ ಜೊ ಜೊ ಜೊ॥೩೪॥


ಸಂಧಿ : `೧೪

ಖರ್ರ ಜೋಗಿಯ ಕುಟಿಲ ಕಾರಸ್ಥಾನ ವೆಫಲವಾದುದು- ಸಿದ್ಧರಾಮನ ಉರಿಗಣ್ಣು ತೆರೆದುದು.ಅಗ್ನಿ ಉರಿನಾಲಿಗೆ ಚಾಚಿದುದು. ಕರುಣೆಯಿಂದ ಅವರೆಲ್ಲರಿಗೆ ಕಾಪಾಡಿದುದೈ.ಸುಟ್ಟ ಸೃಷ್ಟಿ ಮತ್ತೆ ಹೊಸ ರೂಪ ತಾಳಿತು. ಎಲ್ಲ ಜೋಗಿ ಜೋಗಿಣಿಯರುಶ್ರೀಸಿದ್ಧನನ್ನು ಹಾಡುತ್ತ ಹರಸುತ್ತ ಮರಳಿ ಹೋದುದು.

ಬಿರುಗಾಳಿ ಬೀಸಿತು। ಉರಿ ಉಡುಗಿ ಹೋಯ್ದಿತು।
ಸುರಿದೀಪ ಮಳೆಧಾರಿ ಒಮ್ಮೆಲೆ- ಯಜ್ಞಕುಂಡ
ನೀರಿನಿಂದ ತುಂಬಿ ತುಳುಕೀತು॥೧॥

ಕೊಟ್ಟ ಬೋನ ತುಪ್ಪವು। ಇಟ್ಟ ದ್ರವ್ಯಂಗಳೆಲ್ಲ।
ತಟ್ಟನೆ ಜಲದೊಳು ನಡೆದಾಗ - ಜೋಗಿಯ
ದಿಟಯೋಗಿಯು ಮಾಟ ಅರಿತನು॥೨॥

ಜೋಗಿಯ ಕುಟಿಲಾಟ। ಯೋಗಿನಾಥನು ಅರಿತು ।
ಆಗ ಉರಿಗಂಣು ತೆರೆದನು- ಸಿದ್ಧಪತಿ
ಅಗ್ನಿ ನೇತ್ರದಿ ಹೋಮ ಹೊತ್ತಿಸಿ॥೩॥

ಹೋಮ ಮಾಡುವ ಮಹಾ। ನೇಮಕ್ಕೆ ಅಡ್ಡಿ ತಂದ ಅ- ।
ಧಮನ ಮಾಟ ತಿಳಿಕೊಂಡ - ಶ್ರೀಸಿದ್ಧ-
ರಾಮನು ಅತಿ ಕೋಪಗೊಂಡನು॥೪॥

ಸಿಟ್ಟೀಲಿ ಉರಿಗಂಣ। ಬಿಟ್ಟಾಗ ಸಿದ್ಧಪತಿ।
ತಟ್ಟನೆ ಧಿಗಿಲ್ ಭುಗಿಲ್ ಧಿಗಿಲೆಂದು- ನೆಟ್ಟನೆ
ಸುಟ್ಟೀತು ಅಬ್ಬರದಿ ಜೋಗಿಯರ॥೫

ನಾಲೀಗಿ ಚಾಚೂತ। ಬಲೈ ವೇಗದಿ ಹೊರಟ।
ಜ್ವಾಲೆಯನು ಕಂಡು ಎನೆಸಿತು- ಧರೆಗೆ
ಕಾಲರುದ್ರನು ಬಂದನೇನೊ॥೬॥

ಕೋವೂರ ತನಕಲೂ। ಜೇವಿಗಳಿಗೆ ಸುಡುತ।
ಧಾವೀಸಿ ದಳ್ಳುರಿ ಪಸರೀಸಿ- ದಯೆ-ದೋ-
ರೂತ ದೇವನು ಮರುಗಿದನು॥೭॥

ಲೋಕ ಕಲ್ಯಾಣಕ। ನೇಕ ಕರ್ಮವ ಮಾಡಿ ।
ಯಾಕೆ ಎನಗೀ ಕೋಪ ಬಂದೀತು-ನಿಷ್ಪಾಪಿ
ಲೋಕ ಜೀವಿಗಳ ಬಲಿದಾನ॥೮॥

ಉರಿಯ ಬಾಯಲಿ ಸಿಕ್ಕ। ಚರಾಚರರಾಹುತಿ।
ಕೊರಗೂತ ಕಂಡ ಸಿದ್ಧೇಶ-ಅಕಟಕಟ
ಘೋರ ಅಪರಾಧ ಘಟಿಸೀತು॥9॥

ಎಚ್ಚತ್ತು ಸಿದ್ಧರಾಮ। ಬೆಚ್ಚಿ ಬಿದ್ದನು ಆಗ।
ಕಿಚ್ಚಿನೊಳು ಬೆಂದು ಬೆಂಡಾದ- ಜೀವಿಗಳ
ಎಚ್ಚರದಿ ಪೊರೆಯಲು ಅಣಿಯಾದ॥೧೦॥

ದುಷ್ಟರ ಶಿಕ್ಷಿಸಲು। ಶಿಷ್ಟರ ಪಾಲಿಸಲು।
ಇಷ್ಟದೇವ ಚೆನ್ನಮಲ್ಲನು-ಇರುತಿರೆ
ದುಷ್ಟ ಶಿಷ್ಟರ ಹೊಣೆ ನಮಗೇಕೆ॥೧೧॥

ನೊಂದನು ಬೆಂದನು। ನಂದ ಮೂರುತಿ ಸಿದ್ಧ।
ಇಂದುಧರನಿಗೆ ನೆನೆದನು- ಓ ತಂದೆ
ಮಂದಮತಿಗೆ ಸಲುಹೆಂದನು॥೧೨॥

ಕರುಣೆಯ ನೋಟದ । ಕಿರಣವ ಬೀರೂತ।
ಕರುಣಾಕರ ಸಿದ್ಧನೋಡೂತ- ಜೀವರು
ಹರಣ ತುಂಬಿ ಹರುಷಗೊಂಡರು॥೧೩॥

ಸುಟ್ಟ ಊರವೆಲ್ಲ। ಪಟ್ಟಣಾಗಿ ಕಂಗೊಳಿಸಿ।
ದಿಟ ಯೋಗಿಯ ಕಾರುಣ್ಯದಿ- ಹೊಸತು
ಪುಟ ತಿರುವಿದಂತೆ ಆಗಿ॥೧೪॥

ನಿದ್ದೀಗಂಣಿನಿಂದ । ಎದ್ದು ಬಂದವರಂತೆ।
ಸಿದ್ಧನ ಬಳಿ ಸಾರಿ ಬಂದರು- ಯೋಗೀಶ
ಬದ್ಧರಿಗೆ ಉದ್ಧರಿಸು ಎಂದರು॥೧೫

ಜೋಗಿ ಜೋಗಿಣಿಯರು। ಯೋಗಿ ಮುಕ್ಕಣ್ಣನಿಂದ।
ಬೇಗೆಯಲಿ ಸುಟ್ಟು ಶುಚಿಯಾಗಿ- ನಮ್ರದಿ
ಯೋಗಿವರೇಣ್ಯನೆ ಕಾಪಾಡೆಂದು॥೧೬॥

ದುಷ್ಟತನದಿ ಬಲು। ಕಷ್ಟ ಕೊಡದಿರು ಜನಕೆ।
ನಷ್ಟವಾಗೆ ಕುಟಿಲ ವಿದ್ಯೆಯು- ಮುಂದೆಯು
ಶ್ರೇಷ್ಠಶಿವನನ್ನು ಭಜಿಸಿರಿ॥೧೭॥

ಸಿದ್ಧಪತಿ ನಿನ್ನಿಂದ। ಗೆದ್ದೆವು ಭವ ದುಃಖ ।
ಶುದ್ಧವಾದವು ನಮ್ಮ ತನುಮನ-ಎಂದನು
ವಿದ್ಯಾಸಾಗರ ಖರ್ಪರ ಜೋಗಿಯು॥೧೮॥

ಭೂತೇಶ ನಿನ್ನಡಿಗೆ। ಸೋತು ಶರಣಾದೆವು।
ಯತಿವರೇಣ್ಯನೆ ಭೂತಪ್ರೇಮಿ - ಸಿದ್ಧೇಶ
ಗತಿ ಮತಿ ನೀಡಿ ಸಲುಹೆಂದು॥೧೯॥

ವಾದಿಸಲು ಬಂದವನು। ಪಾದಕ್ಕೆ ಎರಗಿದನು।
ಸದಮಲ ಸಿದ್ಧೇಂದ್ರಶರಣೆಂದು ಜೋಗಿಯು
ಮದವಳಿದು ಮುದದಿಂದ ಬೇಡಿದ॥ ೨೦॥

ಜೋಗಿಗಳ ಉಪಚರಿಸಿ । ಯೋಗ ಕ್ಷೇಮವ ಕೇಳಿ।
ಯೋಗಿ ಚಕ್ರವರ್ತಿ ಸಿದ್ಧರಾಮ -ಕಳುಹಿದ
ಜೋಗಿ ಖರ್ಪರನ ಪರಿವಾರ॥೨೧॥

ನೆನಕೆಗಳು:
ಕರ್ತೃ: ಜಯದೇವಿತಾಯಿ ಲಿಗಾಡೆ
“ಜಯನಿಕೇತನ”
ಸೊಲ್ಲಾಪುರ.
ಪ್ರಕಾಶಕರು:
ಶಂಕರ ಡಿ. ಮಳಗಿ
ಅಡ್ವೋಕೇಟ್:
ಸುಪ್ರೀಮ್ ಕೋರ್ಟ
ಅಧ್ಯಕ್ಷ : ಕನ್ನಡ ಕೋಟೆ,
21.ಈಸ್ಟ ಪಾರ್ಕ ರೋಡ್
18 ನೇ ಕ್ರಾಸ್, ಬೆಂಗಳೂರು.

1 ಕಾಮೆಂಟ್‌: