ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಜನವರಿ 25, 2020

ಕಿಟ್ಟೆಲರ ಕನ್ನಡ-ಇಂಗ್ಲಿಷ್ ನಿಘಂಟು ಇದರಿಂದ ಆರಿಸಿದ ಗಾದೆಗಳು

ಕಿಟ್ಟೆಲರ ಕನ್ನಡ-ಇಂಗ್ಲಿಷ್ ಇದರಿಂದ ಆರಿಸಿದ ಗಾದೆಗಳು.

ಮೊದಲನೇ ಸಮ್ಪುಟ. ( ಅ ಯಿನ್ದ - ಅಃ ವರೆಗೆ )

೧) ಅಕ್ಕ ನನ್ನವಳು ಆದರೆ ಬಾವ ನನ್ನವನೇ ?

೨)ಅಕ್ಕನ ಹಗೆ, ಬಾವನ ನೆಣ್ಟು.

೩) ಅಕ್ಕನ ಬಂಗಾರವಾದರೂ, ಅಕ್ಕಸಾಲೆ ಬಿಡ.

೪) ಅಕ್ಕಱದ ಅಕ್ಕ  ಬನ್ದಾಗ್ಯೆ ಸಕ್ಕರೆಯೆಲ್ಲಾ ಕಯ್ಯಿ ಆಯಿತು ?

೫) ಅಕ್ಕಸಾಲೆಗಿನ್ತ ಕಳ್ಳನಿಲ್ಲ, ಮಕ್ಕಿ ಗದ್ದೆಗಿನ್ತ ಬೆಳೆಯಿಲ್ಲ.

೬) ಅಕ್ಕಿಯ ಮೇಗಳ ಆಸೆ, ನೆಣ್ಟರ ಮೇಗಳ ಬಯಿಕೆ.

೭) ಅಕ್ಕಿ ಸರಿ ಆಗಬಾರದು, ಅಕ್ಕನ ಮಕ್ಕಳು ಬಡವು ಆಗಬಾರದು.

೮) ಅಕ್ಷರ ಬಾರದವನಿಗೆ ಶಿಕ್ಷೆಯೇ ಮುಖ್ಯ.

೯) ಅಗಡುತನ ಮಾಡಿದರೆ ದಗಡಿಮಗ ಅನ್ನಿಸಿ ಕೊಣ್ಡಾನು.

೧೦) ಅಗಸನಲ್ಲಿ ಬೊಗಸೆ ನೀರು ಸಿಕ್ಕದೋ ?

೧೧) ಅಗಸನ ಶವ ಹೊಱಗೆ ತೆಗೆದ ಮೇಲೆ ಗುಟ್ಟು ಸಿಕ್ಕೀತು.

೧೨) ಅಗುಳು ನುಂಗಲಿಕ್ಕೆ ತೀರದವನ ಬಾಯಲ್ಲಿ ಕಡುಬು ಹೆಟ್ಟಿದ.

೧೩ ಅಗ್ಗಳನ ಮುನ್ದೆ ವೆಗ್ಗಳನುಣ್ಟೇ?

೧೪) ಅಗ್ರಸಾಲೇ ಊಟ, ಚನ್ದ್ರಸಾಲೇ ನಿದ್ರೆ.

೧೫)ಅಂಗೆಯುಣ್ಣಿಗೆ ಕನ್ನಡಿ ಯಾಕೆ?

೧೬) ಅಂಗೆಯ್ ತೋಱಿಸಿ ಅವಲಕ್ಷಣ ಅನ್ನಿಸಿ ಕೊಣ್ಡ ಹಾಗೆ.

೧೭) ಅಂಕಣದ ಮನೆ ಆದರೆ ಕೊಂಕಣನಿಗೆ ಆಗದೆ?

೧೮) ಅರಸನ ಅಂಕೆಯಿಲ್ಲ, ದೈವದ ಕಾಟವಿಲ್ಲ.

೧೯) ಅಂಕೆಯಿಲ್ಲದ ಕಪಿ ಲಂಕೆ ಸುಟ್ಟಿತು.

೨ ೦) ಅಂಕೆ ತಿಳಿಯದವ ಮಂಕಗಿನ್ತ ಕಡೆ.

೨೧) ಅಂಗಡಿ ಮಾಱಿ ಗೊಂಗಡಿ ಹೊದ್ದ ಹಾಗೆ.

೨೨) ಅಂಗಡಿಯಲ್ಲಿ ಚುಂಗಡಿ ಸಿಕ್ಕದೆ ?

೨೩) ಅಂಗಡಿ ವ್ಯಾಪಾರ ಒಸರು ನೀರಿನ ಹಾಗೆ.

೨೪) ಅಂಗಲಾಗಿ ಬಿತ್ತಿದ್ದು ಅಗಲವಾಗಿ ಏೞುವುದು.

೨೫) ಅಂಗಳದಲ್ಲಿ ಹೇತು, ಮಂಗಳ ಕಷ್ಟ ಅನ್ದ ಹಾಗೆ.

೨೬) ಅಂಗವಸ್ತ್ರ ಇಲ್ಲದಿದ್ದರೆ ಅಂಗಾರಕ ಇಡಬಾರದೇ ?

೨೭) ಅಂಗಿ ಕೊಟ್ಟು,ಬಂಗಿ ಸೇದಿ, ಮಂಗನಾದ.

೨೮) ಅಂಗನೆ ಬರುವಾಗ ಅಂಗಿ ತೊಡಬೇಡವೇ?

೨೯) ಅಂಗಿ ಇಲ್ಲದಿದ್ದರೇ ನುಂಗಲಿಕ್ಕೆ ಬೇಡವೇ?

೩೦) ಅಚ್ಚುಕಟ್ಟಾದ ಕೆಲಸ ಚನ್ದ, ಬನ್ದು ಕಟ್ಟಾದ ಊಟ ಚನ್ದ.

೩೧) ಅಚ್ಚಿನ ಮನುಷ್ಯನಿಗೆ ನುಚ್ಚಿನ ಅನ್ನ.

೩೨) ಅಚ್ಚು ಬೆಲ್ಲ ಅಪ್ಪಚ್ಚಗೆ, ನುಚ್ಚು ಗಂಜಿ ವೆಂಕಪ್ಪಗೆ.

೩೩) ಅಜ್ಜಗೆ ಮೊಮ್ಮಗ ಆಕಳಿಕೆ ಕಲಿಸಿದನು ಅನ್ತೆ.

೩೪) ಅಜ್ಜ ಊಱಿದ್ದು, ಮೊಮ್ಮಗ ಹಾಱಿದ್ದು ಜೋಡು ಬಾರದು.

೩೫) ಅಜ್ಜಾ, ಮದುವೆ ! ಎನ್ದರೆ ಎನಗೋ ? ಅನ್ದ.

೩೬) ಅಜ್ಜ ನಟ್ಟ ಆಲದ ಮರ.

೩೭) ಅಜ್ಜಿಗೆ ಅಱಿವೆ ಚಿನ್ತೆ, ಮಗಳಿಗೆ ಮಿಣ್ಡನ ಚಿನ್ತೆ.

೩೮) ಅಜ್ಜಿ ನೂತದ್ದೆಲ್ಲಾ ಅಜ್ಜನ ಉಡದಾರಕ್ಕೆ ಸರಿ.

೩೯) ಅಜ್ಜಿಯ ಮನೆಗೆ ಅಜ್ಜ ಬನ್ದ ಹಾಗೆ ಆಯ್ತು.

೪೦)ಅಜ್ಜಿ ಸಾಕಿದ ಮಗು ಬೊಜ್ಜಕ್ಕೂ ಬಾರದು.

೪೧) ಅಜ್ಞನ ಬುದ್ಧಿ ಮೊಗ್ಗಿನ ಹಾಗೆ, ಪ್ರಾಜ್ಞನ ಬುದ್ಧಿ ಫಲದ ಹಾಗೆ.

೪೨) ಅಜ್ಞಾತವಾಸದಲ್ಲಿಯೂ ಅಜ್ಞಾನಿಗಳ ಕಾಟ ತಪ್ಪಲಿಲ್ಲ.

೪೩ ಅಂಚಿನಲ್ಲಿ ಹೋದರೆ ಮಿನ್ಚಿನ ಭಯ ತಪ್ಪೀತೇ?

೪೪) ಅನ್ಚು ಇಲ್ಲದ ಹೊಲವಿಲ್ಲ, ಸನ್ಚು ಇಲ್ಲದ ಮಾತು ಇಲ್ಲ.

೪೫) ಅಂಚೇ ಕಾಗದ ಮುನ್ಚೇ ಬನ್ದರೆ ಲಂಚ ಯಾಕೆ?

೪೬) ಅನ್ಜಿದವನ ಮೇಲೆ ಕಪ್ಪೆ ಹಾಕಿದ ಹಾಗೆ.

೪೭) ಅಟ್ಟಕ್ಕೆ ಹಾಱದ ಬಡ್ಡಿ ಆಕಾಶಕ್ಕೆ ಹಾಱ್ಯಾಳೇ ?

೪೮) ಅಟ್ಟದ ಮೇಲೆ ಅಮ್ಬು, ಬೆಟ್ಟದ ಮೇಲೆ ಬಿಲ್ಲು, ಕುಟ್ಟು, ಎಲಾ, ಮೂಗಾವುದ !

೪೯) ಅಟ್ಟದಿನ್ದ ಬಿದ್ದವನ ದಡಿಯಿನ್ದ ಚಚ್ಚಿದರು.  

೫೦) ಅಟ್ಟ ಸ್ವರ್ಗವಲ್ಲ, ಗಟ್ಟ ಮೇರುವಲ್ಲ.

೫೧) ಅಟ್ಟೆಯ ಕೆರವಂ ಮೆಟ್ಟಲು ಅಶ್ವವೇಱಿದ ಹಾಗಾಯ್ತು.

೫೨) ಅಡೀಲಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.

೫೩) ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.

೫೪) ಅಡಿಕೆ ಉಡಿಯಲ್ಲಿ ಹಾಕಬಹುದು, ಮರವಾದ ಮೇಲೆ ಕೂಡದು.

೫೫) ಅಡಿಗೆಯ ಗುಣ ಸಾಱಿನಲ್ಲಿ ನೋಡು, ಮಡಿಗೆಯ ಗುಣ ಫಲದಲ್ಲಿ ನೋಡು.

೫೬) ಅಡಿಗೆ ಮಾಡುವವನ ಮಕ್ಕಳು ಉಪವಾಸ ಬಿದ್ದಾರೋ?

೫೭) ಅಟ್ಟ ಪಾಯಸದಲ್ಲಿ ಕೆರಾ ಹೆಟ್ಟಿದ ಹಾಗೆ.

೫೮) ಅಟ್ಟ ಮೇಲೆ ಒಲೆ ಉರಿಯಿತು, ಕೆಟ್ಟ ಮೇಲೆ ಬುದ್ಧಿ ಬನ್ತು.

೫೯) ಅಟ್ಟಿಕ್ಕುವವನಿಗೆ ಹೆಣ್ಡತಿ ಆಗಬೇಡ, ಮೊಟ್ಟೆ ಹೊಱುವವನಿಗೆ ಆಳು ಆಗ ಬೇಡ.

೬೦) ಅಟ್ಟು ಉಮ್ಬೋದಕ್ಕಿನ್ತ ತಿರಿದು ಉಮ್ಬೋದೇ ಲೇಸು.

೬೧) ಅಟ್ಟು ಉಮ್ಬೋದು ಆಱು ಕೋಟಲೆ, ತಿರಿದು ಉಮ್ಬೋದು ಪರಮ ಸುಖ.

೬೨) ಅಟ್ಟೇ ಇಲ್ಲವೆನ್ದರೆ ಕೊಟ್ಟಿಗೇಲಿ ತನ್ದಿಕ್ಕು ಅನ್ದ ಹಾಗೆ.

೬೩) ಅಟ್ಟು ಅಟ್ಟು ಪ್ರಾಣ ಹೋದರೂ ಹೊಟ್ಟೆ ಹಸಿವು ನಿಲ್ಲಲೇ ಇಲ್ಲ.

೬೪) ಅಡುಗೂಲಜ್ಜಿಯ ಮನೆಯಲ್ಲಿ ಅಟ್ಟಡಿಗೆ ಆಯತವಾಗಿರುವುದು.

೬೫) ಅಡ್ಡಗೋಡೆಯ ಮೇಲಣ ದೀಪದ ಹಾಗೆ.

೬೬) ಅವನ ಸಾಕ್ಷಿ ಅಡ್ಡಗೋಡೆಯ ಮೇಲಣ ಸಾಕ್ಷಿ.  

೬೭) ಅಡ್ಡೇಟು ತಗುಲಿದರೆ ಬಡ್ಡನಾದರೂ ಗೆದ್ದಾನು.

೬೮) ಅಡ್ಡಾ ದುಡ್ಡಿಗೆ ಮೂಱಾದರೆ ದುಡ್ಡು ಅಡ್ಡಕ್ಕೆ ಎಷ್ಟು?

೬೯) ಅಡ್ಡೀ ಮಾಡಿದಷ್ಟೂ ಬಡ್ಡಿ ಹೆಚ್ಚುವುದು, ಅಡಿಗೇ ಮಾಡಿದಷ್ಟು ಉಣ್ಡು ತೀರುವುದು.

೭೦) ಅಣಕವಾದ ಕೆಱೆ ಅನೇಕ ನೀರು ಕೊಳ್ಳುವುದು.

೭೧) ಅಣ್ಟವಾಳದ ಕಾಯಿಗೆ ಬಣ್ಟವಾಳಕ್ಕೆ ಹೋಗಬೇಕೇ ?

೭೨) ಅಣ್ಡೆಯ ಬಾಯಿ ಕಟ್ಟಬಹುದು ದೊಣ್ಡೆಯ ಬುಯಿ ಕಟ್ಟ ಕೂಡದು.

೭೩) ಅಣ್ಡೆಯೊಳಗಣ ನೀರು ಮುಣ್ಡೆಯ ಕೆಯ್ಯೊಳಗಣ ಹಣ ಸಮ.

೭೪) ಅಣ್ಣ ಮಣ್ಣು ಮಾಡಿದ, ತಮ್ಮ ರೊಕ್ಕ ಮಾಡಿದ.

೭೫) ಅಣ್ಣ ತನ್ನವನಾದರೆ. ಅತ್ತಿಗೆ ತನ್ನವಳೇ?

೭೬) ಅಣ್ಣನಿಗೆ ಸೈಣ್ಣವಿಲ್ಲ, ಎತ್ತಿಗೆ ಹುಲ್ಲು ಇಲ್ಲ.

೭೭) ಅಣ್ಣ ತಮ್ಮನ್ದಿರು ಆದರೂ ಹಣ್ಣು ಹಂಚಿ ಉಣ್ಣುತ್ತಾರೆ.

೭೮) ಅಣ್ಣಪ್ಪ ಊರಿನಲ್ಲಿ ಇದ್ದರೂ ಸರಿ, ದಣ್ಡಿನಲ್ಲಿ ಇದ್ದರೂ ಸರಿ.

೭೯) ಅತಿಯಾಶೆಯಿನ್ದ ಆದುದೂ ಹೋಯಿತು.

೮೦) ಅತ್ಯಾಶೆ ಗತೆಕೆಡಿಸಿತು.

೮೧) ಅತೀ ಸ್ನೇಹ ಗತೀ ಕೆಡಿಸಿತು.

೮೨) ಅತ್ತಿಯ ಹಣ್ಣು ಅಚ್ಚ ಕೆಮ್ಪು ಆದರೂ ಒಳಗೆ ನೋಡಿದರೆಹುರುಳಿಲ್ಲ.

೮೩) ಅತ್ತೇ ಕಲೆಸಿದ್ದೇ ಕೆಲಸ, ಗಣ್ಡ ಕಲಿಸಿದ್ದೇ ಹಾದರ.

೮೪) ಅತ್ತೆಗೆ ಒನ್ದು ಮಾತು, ಸೊಸೆಗೆ ಪ್ರಾಣ ಸಂಕಟ.

೮೫) ಅತ್ತೆಯ ತುಱುಬು ಮಾವಗೆ ದಾನ.

೮೬) ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ,

೮೭) ಅತ್ತೇ ಒನ್ದು ಕಾಲ, ಸೊಸೇ ಒನ್ದು ಕಾಲ.

೮೮) ಅತ್ತೆಗೆ ಒನ್ದು ಕಾಲ, ಸೊಸೆಗೆ ಹಲವು ಕಾಲ.

೮೯) ಅನನ್ತಯ್ಯನ ಮಾತ್ರೆ ವೈಕುಣ್ಠ ಯಾತ್ರೆ.

೯೦) ಅನ್ತಕನ ಶಿಕ್ಷೆಗೆ ಹೆದಱೆ, ಸನ್ತೆ ಗೋವಿಂದನ ಸಾಲಕ್ಕೆ ಹೆದಱುತ್ತೇನೆ.

೯೧) ಅನ್ತೂ ಇನ್ತೂ ಕುನ್ತೀ ಮಕ್ಕಳಿಗೆ ರಾಜ್ಯವಿಲ್ಲ.

೯೨) ಅನ್ತ್ಯವಿಲ್ಲದ ಕಡೆಯಿಲ್ಲ, ಆದಿಯಿಲ್ಲದ ಆರಮ್ಭವಿಲ್ಲ.

೯೩) ಅನ್ದನಿಸಿಕೊಮ್ಬ ಅನ್ದಗೇಡಿಯ ಮನೆ ಎಲ್ಲಿ?

೯೪) ಅನ್ದ ಚನ್ದ ನೋಡಿದರೆ ಮನ್ದತ್ವ ಹೋಗುವುದೇ?

೯೫) ಅನ್ದು ಬಾ ! ಅನ್ದರೆ ಮಿನ್ದು ಬನ್ದ.

೯೬) ಅನ್ದಿಗೆ ಅದೇ ಸುಖ, ಇನ್ದಿಗೆ ಇದೇ ಸುಖ.

೯೭) ಅನ್ಧಕನಿಗೆ ಕತ್ತಲೆಯಿಲ್ಲ, ಮನ್ದಭಾಗ್ಯನಿಗೆ ದರಿದ್ರವಿಲ್ಲ.

೯೮) ಅನ್ನದಾನಕ್ಕೆ ಸಮಾನವಿಲ್ಲ, ಬನ್ನಬಡುವುದು ತಪ್ಪುವುದಿಲ್ಲ.

೯೯) ಅನ್ಯಾಯದಲ್ಲಿ ಸಂಪಾದಿಸಿದ್ದು ಅಸಡ್ಡಾಳಾಗಿ ಹೋಯಿತು.

೧೦೦) ಅಪಕಾರಾ ಮಾಡುವವ ಅಪಕೀರ್ತಿಗೆ ಅಂಜ್ಯಾನೇ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ